ಪುಟ:ವೈಶಾಖ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮ ವೈಶಾಖ ಹೊತ್ತಿನಲ್ಲಿ!” ಎಂದು ಕೈ ಕೈ ಹಿಸುಕುತ್ತ ದೇವರ ಕೋಣೆಯ ಮುಂದೆ ಬಂದು ನಿಂತಿದ್ದಳು. `ಇದ್ಯಾಕೆ ದೇವರ ನೈವೇದ್ಯ ತರದೆ ಬರಿಗೈಲಿ ಬಂದೆ? ಎಂದು ಕೇಳಿದ್ದರು ಮಾವಯ್ಯ, ಹೇಗೆ ಹೇಳುವುದೊ ತಿಳಿಯದೆ, ಸ್ವಲ್ಪಸಮಯ ಉಂಗುಷ್ಟದಿಂದ ನೆಲವನ್ನು ಕೆರೆಯುತ್ತ ನಿಂತಿದ್ದು, 'ಇವೊತ್ತು ನಾನು ಸಜ್ಜಿಗೆ ಮಾಡೋ ಹಾಗಿಲ್ಲ' ಎಂದಿದ್ದಳು. ಅವರಿಗೆ ತನ್ನ ಮಾತಿನ ಪೂರ್ಣಾರ್ಥ ಹೊಳೆಯಲು ಸ್ವಲ್ಪ ಸಮಯವೇ ಹಿಡಿಯಿತು. ಏನೋ ಯೋಚಿಸುತ್ತಿದ್ದವರು ಫಕ್ಕನೆ ಹೊಳೆದಂತೆ ತಲೆ ಕುಣಿಸಿ 'ಬಾಧಕವಿಲ್ಲ. ನೀನು ಹೊರಗಿರು. ನಾನೇ ಸಜ್ಜಿಗೆ ಸಿದ್ಧಪಡಿಸುತ್ತೇನೆ” ಎಂದು ತಾವೇ ಅಡಿಗೆಕೋಣೆಗೆ ತೆರಳಿ ಸಜ್ಜಿಗೆ ಮಾಡಿ ತಂದು, ಆ ದಿನ ನೈವೇದ್ಯ ಮಾಡಿ ತಂದಿದ್ದರು. ಬಳಿಕೆ ವೆಂಕಣ್ಣ ಜೋಯಿಸರ ಹಿರಿಯ ಮಗಳು ನಾಗಲಕ್ಷ್ಮಿ ಬಂದು ನೀರೆರೆದು ತನ್ನು ಮುಟ್ಟು ಕಳೆಯುವವರೆಗೂ ಅವರೇ ನೈವೇದ್ಯ ಹಾಗೂ ಅಡಿಗೆ ತಯಾರಿ ಮಾಡಿ ಮುಗಿಸಿದ್ದರು. ನಾನು ಹೀಗೆ ಹೊರಗೆ ಕುಳಿತಾಗಲೆಲ್ಲ, ಸುಶೀಲತೆ ಹುಶಾರಾಗುವವರೆಗೂ ಅಡಿಗೆಕೋಣೆಯ ಪಾರುಪತ್ಯವನ್ನೆಲ್ಲ ಅವರೇ ವಹಿಸಿಕೊಳ್ಳುವುದು ರೂಢಿಯಾಗಿತ್ತು... ಸದ್ಯ ಈ ದಿನ ಹಾಗಾಗಲಿಲ್ಲವಲ್ಲ ಎಂದು ನಕ್ಕು, ಸಜ್ಜಿಗೆಯನ್ನು ಬೇರೆ ಪಾತ್ರೆಗೆ ರವಾನಿಸಿ, ಅದನ್ನೆತ್ತಿ ತರುತ್ತಿದ್ದಂತೆ, ಅಂಗಳದಲ್ಲಿ ಆಟವಾಡುತ್ತಿದ್ದ ಸರಸಿ “ನಂಗೆ- ಸಜ್ಜಿ...ಗೆ' ಎಂದು ದುಂಬಾಲುಬಿದ್ದಳು. ದೇವರ ನೈವೇದ್ಯ ಆಗಲಮ್ಮ, ಆಮೇಲೆ ಕೋಡ್ತೀವಿ- ಎಂದು ಪರಿಪರಿಯಲ್ಲಿ ರಮಿಸಿದರೂ ಒಪ್ಪದೆ ಚಂಡಿ ಮಾಡಲು ಆರಂಭಿಸಿದಳು. 'ಸುಮ್ಮನೆ ಇರೀಯೊ, ಇಲ್ಲವೊ'- ಎಂದು ಗದರಿ, ಅವಳನ್ನು ಒಂದು ಕೈಯಲ್ಲಿ ನೂಕಿದ್ದಳು. ಸರಸಿ ಅಯ ತಪ್ಪಿ ಕೆಳಗೆ ಬಿದ್ದು ಅಳುವುದಕ್ಕೆ ಆರಂಭಿಸಿದಳು. ಆದಿ ಶಂಕರರ ಅನ್ನಪೂರ್ಣಾಸ್ತೋತ್ರವನ್ನು ಮೈ ಮರೆತು ಹೇಳಿಕೊಳ್ಳುತ್ತಿದ್ದ ಮಾವನವರು ಸರಸಿಯ ಓಲಗವನ್ನು ಕೇಳಿ, ತಮ್ಮ ಸ್ತೋತ್ರವನ್ನು ಅರ್ಧಕ್ಕೆ ನಿಲ್ಲಿಸಿ, ಎದ್ದು ಬಂದರು. ಸರಸಿಯನ್ನೆ ದಯಾದ್ರ್ರವಾಗಿ ಒಮ್ಮೆ ನೋಡಿ, 'ತಾಯಿಯಲ್ಲದ ಕೂಸು...'ಎಂದಷ್ಟೆ ನುಡಿದರು. ತಕ್ಷಣ ನೈವೇದ್ಯದ ಬಟ್ಟಲನ್ನು ಅವಳ ಕೈಗಿಟ್ಟು, ಅವಳನ್ನೆತ್ತಿ ರಮಿಸಿದೆ. ಸರಿಸ ಅಳು ನಿಲ್ಲಿಸಲೇ ಇಲ್ಲ.... ಸಜ್ಜಿಗೆ, ಸಜ್ಜಿಗೆ ಎಂದು ಮಾವನವರು ಹಿಡಿದ ಬಟ್ಟಲ್ಲೆ ದೃಷ್ಟಿಯಿಟ್ಟು ರಾಗ ತೆಗೆದಿದ್ದಳು. ಮಾವನವರು ಒಂದು ಸಲ ಅಳುವ ಸರಿಸಿಯನ್ನು ನೋಡಿದರು. ಇನ್ನೊಮ್ಮೆ ಅವಳಿಂದ ದೃಷ್ಟಿ ಕಿತ್ತು ದೇವರುಗಳನ್ನು ನೋಡಿದರು. ಅವರಿಗೇನೆನ್ನಿಸಿತೊ, ಬಟ್ಟಲನ್ನು ದೇವರಿಗೆ ತೋರಿಸಿ, ಅದನ್ನು ಸರಸಿಯ