ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫ . ವೈಶಾಖ “ನೀವು-ಗಂಡಸರು ಇದ್ದೀರಲ್ಲಾ-ನಿವೇಲ್ಲಾರು ಶುದ್ಧಾಂಗ ಮೋಸಗಾರರು...” ಬೆರಳಿನಿಂದ ಕಂಬನಿ ಮಿಡಿಯುತ್ತ ದ್ವೇಷದಿಂದಲೆ ನುಡಿದೆ. ಇಲ್ಲಿಯವರೆಗೆ ಎಂದೂ ನನ್ನಿಂದ ಇಂಥ ಮಾತನ್ನೆ ಕೇಳರಿಯದ ನನ್ನವರು ಕೊಂಚ ತಬ್ಬಿಬ್ಬಾದರೂ ಸಂಪೂರ್ಣವಾಗಿ ವಿಚಲಿತಗೊಳ್ಳದೆ ತಮ್ಮ ಸಹಜ ಸರಸ ಪ್ರವೃತ್ತಿಯನ್ನು ತಂದುಕೊಳ್ಳುತ್ತ, “ಓಹೊ-ಇದೇನು ಸಹ ಮಾತು?...ಗಂಡಸು ಜಾತಿಯ ಬಗ್ಗೆಯೇ ಯಾಕೆ ಈ ದಿನ ಅಮ್ಮಾವರಿಗೆ ಇಷ್ಟೊಂದು ಕ್ಷೇಶ? -ನನ್ನ ಬೆನ್ನು ಸವರುತ್ತ ಕೇಳಿದ್ದರು. “ಗಂಡಸರು ಅಂದರೆ ನನಗೆ ಗೊತ್ತಿರೋದು ಒಬ್ಬರೆ!” ಎಂದು ಯಾವುತ್ತೂ ಪತಿರಾಯರೆದುರು ಉದ್ಭವಿಸದಿದ್ದ ದಾಷ್ಟ್ರೀಕದಿಂದ ನಾನು ಚುಚ್ಚಿದೆ. ಆಗ ನನ್ನವರು ನಗುತ್ತ, “ಯಾಕೊ ಬಾಣ ನನ್ನ ಮೇಲೆ ಎರಗ್ತಾ ಇದೆ! -ಏನು ಸಮಾಚಾರ?” “ಸುತ್ತಿ ಬಳಸಿ ಮಾತಾಡೋದರಲ್ಲಿ ಯಾವ ಪ್ರಯೋಜನ? –ಅದೆ ಸಣ್ಣ ವಿಷಯ...' “ಏನು ಸಣ್ಣ ವಿಷಯ?” “ಮೊನ್ನೆ ತೋಟದಲ್ಲಿ ಸಣ್ಣಿ ನೆಲಕ್ಕೆ ಕುಸಿದಾಗ, ನೀವು ಅವಳನ್ನು ನಾಚಿಕೆ ಇಲ್ಲದೆ ಆಳುಕಾಳು ಎಲ್ಲರೆದುರೂ ತಬ್ಬಿ ಸರಸ ಆಡಿದ್ದು...” “ಓ-ಅದೇ...” ಘೋಳ್ಳನೆ ನಕ್ಕರು. “ಹು. ನೀವು ನಿಮ್ಮಿಷ್ಟ ಪ್ರಕಾರ ನಿಮಗಿಷ್ಟ ಬಂದ ಹೆಣ್ಣುಗಳ ಸಂಗಡ ಸರಸವಾಡ, ಅದರ ಬಗ್ಗೆ ನಾನು ಕೇಳಿದರೆ ನಗ್ತಾ ಇರಿ. ನೀವು ಆಡ್ತಿರೋ ಆಟಗಳ ಬಗ್ಗೆ ಕೇಳಿ ಕೇಳಿ ನಾನು ಅಳ್ತಾನೇ ಇದ್ದೀನಿ... ಈ ಸೌಭಾಗ್ಯಕ್ಕೆ ನನ್ನನ್ನೇಕೆ ಮದುವೆಯಾಗಬೇಕಿತ್ತೊ?” ತಡೆದು ನಿಂತಿದ್ದ ಕಣ್ಣೀರು ಚಿಲ್ಲೊಡೆಯಿತು. ಯಜಮಾನರು ಈಗಲೀಗ ನಗು ನಿಲ್ಲಿಸಿಬಿಟ್ಟರು. ನನ್ನನ್ನು ಅಪ್ಪಿ ಸಂತೈಸುತ್ತ “ಪಾಪ, ಆ ಸಣ್ಣೆ ತೋಟದಲ್ಲಿ ಜಾರಿ ಬಿದ್ದಿದ್ದಳು. ಆಳುಕಾಳು ಎಲ್ಲರು ದೂರದಲ್ಲಿದ್ದರು. ಸಮೀಪದಲ್ಲಿ ಇದ್ದೋನು ಅಂದರೆ ನಾನೋಬ್ಬನೆ. ಆದ್ದರಿಂದ ಅಲ್ಲಿದ್ದೋರಿಗೆ ನನ್ನ ವರ್ತನೆಯಿಂದ ಬೇಸರವಾದರೂ ನಾನೇ ಅವಳನ್ನ ನನ್ನ ತೊಡೆಯ ಮೇಲಿಟ್ಟು ಉಪಚರಿಸಿದೆ...” ಎಂದರು. “ಅಲ್ಲರೀ, ಈ ಮಾತನ್ನ ನನ್ನ ಸಂಗಡ ಹೇಳಲಿಕ್ಕೆ ನಿಮಗೆ ಕೊಂಚವೂ ನಾಚಿಕೆಯೆ ಆಗಲಿಲ್ಲವೆ?” “ಯಾಕೆ?” CH