ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೫೭ “ಯಾಕಂತೆ ಯಾಕೆ!.... ರಾಜಾರೋಷವಾಗಿ ಎಲ್ಲರೆದುರೂ ಒಂದು ಪ್ರಾಯದ ಹೆಣ್ಣಿನ ಸೊಂಟ ಬಳಸಿ, ತೊಡೆಯ ಮೇಲೆ ಮಲಗಿಸಿ, ಉಪಚರಿಸಿದೆ ಅಂತ ನನ್ನ ಮುಂದೆಯೂ ನಿಸ್ಸಂಕೋಚವಾಗಿ ಹೇಳಿದೀರಲ್ಲ...” “ಪ್ರಾಯದ ಹೆಣ್ಣು?” “ಇದೇನು ಸಣ್ಣ ಪ್ರಾಯದ ಹೆಣ್ಣಲ್ಲವೆ? -ಯಾಕ್ರಿ ಸುಮ್ಮನೆ ನನ್ನನ್ನ ಸತಾಯಿಸ್ತೀರ?” “ಯಾವ ಸಣ್ಣೀನೆ ನೀನು ಹೇಳಿರೋದು?” “ಅಬ್ಬಬ್ಬಬ್ಬ- ಏನು ಮಳ್ಳಿ ಹಾಗೆ ಮಾತಾಡ್ತೀರ? -ಇನ್ಯಾವ ಸಣ್ಣಿ? - ಅದೇ, ಆ ಪರಿವಾರದ ಹುಡುಗಿ!” ಯಜಮಾನರು ಇನ್ನೊಮ್ಮೆ ನಕ್ಕರು. ಬಿದ್ದು ಬಿದ್ದು ನಕ್ಕರು. ಎರಡು ಪಕ್ಕೆಗಳನ್ನೂ ಹಿಡಿದು “ಅಮ್ಮ-ನಾನು ನಗಲಾರೆ” ಎಂದು ಹೇಳುತ್ತಲೆ ನಕ್ಕರು. ತಡೆಯಲಾಗದೆ ಬುಗ್ಗೆ ಬುಗ್ಗೆಯಾಗಿ ಉಕ್ಕುತ್ತಿದ್ದ ನಗು ಅವರ ಕಣ್ಣಿನಿಂದ ನೀರು ತುಳುಕಿಸುತ್ತಿತ್ತು. “ಸರಿ ಸರಿ. ಸಾಕು ನಿಲ್ಲಿಸಿ ನಿಮ್ಮ ನಗುವನ್ನ -ಬೆಕ್ಕಿಗೆ ಚೆಲ್ಲಾಟ...” “ನನ್ನ ಈ ಮುದ್ದು ಅರಗಿಣಿಗೆ ಪ್ರಾಣಸಂಕಟ...” ಎನ್ನುತ್ತ ನನ್ನನ್ನು ರಮಿಸಲು ಬಂದರು. ನಾನು ಅವರ ತೆಕ್ಕೆಯಿಂದ ಬಿಡಿಸಿಕೊಳ್ಳುತ್ತ ಹೇಳಿದೆ: “ಬಿಡಿ ಬಿಡಿ. ಈ ಪ್ರಾಣಸಂಕಟ ಸಹಿಸಿ ಇನ್ನೆಷ್ಟು ಕಾಲ ಬದುಕಬೇಕು?” ನನ್ನವರು ನಗು ನಿಲ್ಲಿಸಿ ನುಡಿದರು: “ಇನ್ನು ನಾನು ಹುಡುಗಾಟ ಆಡಲ್ಲ. ನನ್ನ ಪ್ರಾಣೇಶ್ವರಿ ಪ್ರಾಣಸಂಕಟಾನ ತಪ್ಪಿಸೇನೆ.” ನಾನು ಕತ್ತೆತ್ತಿ ಮೂಕವಾಗಿ ನನ್ನ ಪತಿಯನ್ನು ನೋಡಿದ. ನನ್ನ ನೋಟದಲ್ಲಿ, ನನಗೊಂದು ಅರ್ಥವಾಗಿಲ್ಲ, ಬಿಡಿಸಿ ಹೇಳಬಾರದೆ – ಎಂಬ ಆರ್ತತೆಯಿತ್ತು. “ಇಲ್ಲಿ ಕೇಳು ರುಕ್ಕು-ತೋಟದಲ್ಲಿ ನಾನು ಉಪಚರಿಸಿದ್ದು, ಪರಿವಾರದ ಸಣ್ಣಿಯನ್ನಲ್ಲ...” “ಮತ್ತೆ?” “ಮಾದಿಗರ ಮುದುಕಿ-ಸಣ್ಣಿಯನ್ನ...ಹಾಕ್ಕಳಕ್ಕೆರವಷ್ಟು ಎಲೆ ಬೇಕು ಒಡೆಯಾ ಅಂದಿದ್ದು, ತೋಟಕ್ಕೆ ಬಾ ಕೊಡ್ತೀನಿ, ಅಂದಿದ್ದೆ. ಮಾರನೇ ದಿನ ಬಂದೋಳು, ಎಲೆ ಕುಯೂವ ಹಂಬಿನ ಜಾಗಕ್ಕೆ ನಾನು ಬರುವ ವೇಳೆಗೆ ಜಾರಿ ಬಿದ್ದಿದ್ದಳು. ಸಮೀಪದಲ್ಲಿ ಯಾರೂ ಇರಲಿಲ್ಲ. ಪಾಪ, ಮುದುಕಿ ಎಂದು ಎತ್ತಿ ತೊಡೆಯ