ಪುಟ:ವೈಶಾಖ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಶಾಖ “ನಿನ್ನಿಂದ ಕಣೆ ನಮ್ಮ ಮನೆಗೆ ಬರಬಾರದ ಅಪತ್ತು ಬಂತು-ನೆಂಟರು, ಇಷ್ಟರು ಎಲ್ಲಾರಿಂದಲೂ ಬಹಿಷ್ಕಾರ ಹಾಕಿಸಿಕೊಂಡು ಕಿಟ್ಟಣ್ಣ ಒಳಗೆ ಕೊರಗ್ತಿದ್ದಾನೆ...ನಿಂಗೇನು ಲಂಗಿಲ್ಲ. ಲಗಾಮಿಲ್ಲ. ನೀನು ಹೂ-ಅಂದಿದ್ದರು ಅವನೇನು ಬೇಡ ಅಂತಿದ್ದನೆ?... ಹರಾಮಿ, ಹರಾಮಿ, ನಿನ್ನ ಹರಾಮುಖರ ತನ ದಿಂದ ನಮ್ಮಣ್ಣನ ಮನೆತನದ ಹೆಸರು ಮಣ್ಣುಗೂಡಿಹೋಯ್ತು!”. ಬೆಳಗಾಯಿತು ಎಂದರೆ ಇಂಥವೆ ಮೂದಲಿಕೆಯ ಈಟಿಗಳಿಂದ ಇರಿದು ಇರಿದು ನೋಯಿಸುತ್ತಿದ್ದಳು. ಬೇಕೆಂದು ಜಗಳ ತೆಗೆಯುವುದು, ಕೆನ್ನೆಗೆ ತಿವಿಯುವುದು, ಮುಂದಲೆ ಹಿಡಿದು ಜಗ್ಗುವುದು ಇವು ಸುಶೀಲತೆಯ ದಿನಚರಿಯಲ್ಲಿ ಸರ್ವೇಸಾಮಾನ್ಯವಾಗುತ್ತ ಬಂದವು. ಮನೆಯೊಳಗೆ ಹೆಚ್ಚು ಕಡಿಮೆ ಪ್ರತಿನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಿದ್ದ ಈ ವ್ಯಾಪಾರ ಸೂಕ್ಷ್ಮಮತಿಯಾದ ಕೃಷ್ಣಶಾಸ್ತ್ರಿಗಳ ಗಮನಕ್ಕೂ ಬಾರದೇ ಹೋಗಲಿಲ್ಲ. ಆದರೂ ಇಂದೋ ನಾಳೆಯೊ ಸರಿಹೋದೀತೇನೊ ಎಂದು ಸುಮ್ಮನಿದ್ದರು. ಒಂದು ದಿನ ರುಕ್ಕಿಣಿಗೆ ನಾಲ್ಕನೇ ನೀರು ಬೇಕೆಂದೇ ತನಗೆ ಆ ಕೆಲಸ ಈ ಕೆಲಸ ಎಂದು ನೆಪ ಹೂಡಿ, ಸುಶೀಲ ಹಗಲು ಕಳೆಯುವವರೆಗೂ ಕಾಲ ತಿದ್ದಳು. ರುಕ್ಕಿಣಿಯ ದುರದೃಷ್ಟಕ್ಕೆ, ವೆಂಕಣ್ಣ ಜೋಯಿಸರ ಹೆಣ್ಣುಮಕ್ಕಳು ಕಟ್ಟೆಪುರದ ತಮ್ಮ ಚಿಕ್ಕಮ್ಮನ ಮನೆಗೆ ಪ್ರಯಾಣ ಹೋಗಿದ್ದುದರಿಂದ ರುಕ್ಕಿಣಿಗೆ ಆ ಬಾಲಕಿಯರ ನೆರವೂ ತಪ್ಪಿತ್ತು. ಲಕ್ಷಮ್ಮನವರನ್ನು ಕೇಳಿದರೆ ಇವೊತ್ತೇಕೆ ನನಗೆ ಮೈಲಿ ಸ್ವಸ್ಥವಿಲ್ಲಮ್ಮ ಎಂದು ಜಾರಿಕೊಂಡಿದ್ದರು. ಆ ದಿನ ಕೃಷ್ಣಶಾಸ್ತ್ರಿಗಳು ಗಾಡಿಯಲ್ಲಿ ಬಾಳೆಗೊನೆಗಳನ್ನು ಸಂತೆಗೆ ಕೊಂಡುಹೋಗಿದ್ದು, ಅವರು ಊರಿಗೆ ಮರಳಲು ಇಳಿಹೊತ್ತೇ ಆಗುವುದೆಂದು ಅನುಭವದಿಂದ ಅರಿತಿದ್ದುದರಿಂದ, “ನೀರು ಹಾಕಿ, ಅತ್ತೆ” ಅಂದು ರುಕ್ಕಿಣಿಯು ಪರಿಪರಿಯಾಗಿ ಬೇಡಿದರೂ “ತಾಳೆ, ಇನ್ನು ಸ್ವಲ್ಪ ಕೆಲಸವಿದೆ. ಅದನ್ನು ಮುಗಿಸಿ ಬರ್ತೆನೆ” ಎಂದು ಹಾಗು ಹೀಗೂ ಕಾಲಯಾವನೆ ಮಾಡಿದ್ದಳು, ಸುಶೀಲ. ಕೃಷ್ಣಶಾಸ್ತ್ರಿಗಳು ಎತ್ತಿನ ಗಾಡಿಯಿಂದ ಇಳಿದವರೆ, ತಾವು ಸಂತೆಯಿಂದ ತಂದ ಬಿಸ್ಕತ್ತು, ಪೆಪ್ಪರ್‌ಮಿಂಟುಗಳನ್ನು ಸರಸಿಗೆ ಇತ್ತು. ಇನ್ನೂ 'ಹೊರಗಡೆ ಇರುವ ಸೊಸೆಯನ್ನು ಗಮನಿಸಿ, “ಯಾಕೆ, ನೀರಾಗಿಲ್ಲವೆ ಇನೂ?” ಪ್ರಶ್ನಿಸಿದಾಗ, ರುಕ್ಕಿಣಿ ಏನು ಹೇಳಲೂ ತೋಚದೆ ಉಂಗುಷ್ಠದಿಂದ ನೆಲ ಕೆರೆಯುತ್ತ ನಿಂತಿದ್ದಳು. ಒಳಗೆ ಅದೇನೊ