ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೬೯ ಮುಖ್ಯವಾಗಿ ಅವಳನ್ನೇ ಲಗ್ನವಾಗಬೇಕೆಂದು ಅಪೇಕ್ಷಿಸಿದ್ದ ವೀಣೆ ಶ್ಯಾಮರಾಯ ಮೈಸೂರಿನಲ್ಲಿ ನೆಲೆಸಿ, ಹೆಣ್ಣುಮಕ್ಕಳಿಗೆ ವೀಣೆ ಪಾಠ ಹೇಳಿಕೊಡುತ್ತ ಉದರಂಭರಣೆ ಮಾಡುತ್ತಿದ್ದ. ಅವಳಿಗೂ ಅವನೇ ವೀಣೆ ಕಲಿಸಿದ್ದು... ಶ್ಯಾಮ ಅಷ್ಟು ಎತ್ತರದ ಆಳಲ್ಲ; ಕುಳ್ಳ ಎಂದು ಹೇಳಿದರೂ ತಡೆಯುತ್ತದೆ. ನೋಡಲು ಅಂತ ರೂಪಸ್ಟನೇನೂ ಅಲ್ಲದಿದ್ದರೂ ಕಣ್ಣು ಮೂಗು ನೇರ ಅಂತಾರಲ್ಲಹಾಗಿದ್ದ. ಆದರೆ ವೀಣೆಯ ತಂತಿಗಳ ಮೇಲೆ ಅವನು ಬೆರಳಾಡಿಸುತ್ತ ಕುಳಿತಾಗ ಮಾತ್ರ, ಅವನು ಇರುವುದಕ್ಕಿನ್ನ ಎತ್ತರವಾಗಿ, ತೋರುವುದಕ್ಕನ್ನ ಲಕ್ಷಣವಾಗಿ ಕಾಣುತ್ತಿದ್ದ. ಆ ವೀಣಾನಾದದಲ್ಲಿ ಒಮ್ಮೊಮ್ಮೆ ತಲ್ಲೀನನಾಗಿ ಅವನು ಪುಳಕಿತನಾಗುತ್ತಿದ್ದುದು ಅವನ ವ್ಯಕ್ತಿತ್ವದ ಮೇಲೆ ಒಂದು ವಿಶೇಷ ಪ್ರಭೆಯನ್ನು ಹರಡುತ್ತಿದ್ದಿತು. ಆ ಕ್ಷಣಗಳಲ್ಲಿ ತಾನೂ ಅವನಿಗೆ ಮಾರುವೋಗುತ್ತಿದ್ದುಂಟು. ಲಗ್ರವಾಗಬೇಕೆಂದೇನಲ್ಲ, ಲಗ್ನವಾಗಬಾರದು ಎಂದೂ ಅಲ್ಲ... ಶ್ಯಾಮರಾಯ ಮಾತ್ರ ರುಕ್ಕಿಣಿಯ ಅಣ್ಣನ ಸಂಗಡ 'ಈ ನನ್ನ ಜೀವಿತದಲ್ಲಿ ನಾನು ಮದುವೆಯಾಗುವುದಾದರೆ, ಅದು ನಿನ್ನ ತಂಗಿ ರುಕ್ಕಿಣಿಯೊಡನೆ ಮಾತ್ರ ಸಾಧ್ಯ. ಅವಳನ್ನುಳಿದು ಬೇರೆ ಹೆಂಗಸರನ್ನು ನನ್ನ ಅಕ್ಕತಂಗಿಯರೆಂದು ಭವಿಸುತ್ತೇನೆ” ಎಂದು ಹೇಳಿಬಿಟ್ಟಿದ್ದ... ರುಕ್ಕಿಣಿಯ ಅಣ್ಣ ಅಶ್ವತ್ಥನಾರಾಯಣ ಒಬ್ಬನೆ ಇದ್ದಿದ್ದರೆ ಪ್ರಾಯಶಃ ಶ್ಯಾಮನ ಆಸೆಗೆ ಒಪ್ಪಿಗೆಯ ಅಂಕಿತ ಬೀಳುತ್ತಿತ್ತೊ ಏನೊ. ಆದರೆ ಅತ್ತಿಗೆ ಸಾವಿತ್ರಿ ಮುಖ ಮುರಿಯುವ ಹಾಗೆ, 'ಸಂಗೀತ ಹೇಳಿ ಹೊಟ್ಟೆಹೊರೆಯವವರಿಗೆ ನನ್ನ ನಾದಿನಿಯನ್ನು ಕೊಟ್ಟು ಪಾಪ ಕಟ್ಟಿಕೊಳ್ಳಲ್ಲ'- ಹೇಳಿ, ಶ್ಯಾಮನ ಅಹವಾಲನ್ನು ನಿರಾಕರಿಸಿದ್ದಳು!... ಅಂದಿನಿಂದ ವೀಣೆಯ ಅಭ್ಯಾಸಕ್ಕೆ ಶ್ಯಾಮನ ಮನೆಯ ಹೊಸ್ತಿಲನ್ನು ಕೊಡ ಮೆಟ್ಟಬಾರದೆಂದು ಅತ್ತಿಗೆಯಿಂದ ರುಕ್ಕಿಣಿಗೆ ಕಟ್ಟಾಜ್ಞೆಯಾಯಿತು.... ಅಶ್ವತ್ಥ ಅಂಥ ಸಂಗೀತಪ್ರಿಯನಲ್ಲದಿದ್ದರೂ ಸಂಗೀತದ್ವೇಷಿಯೇನಲ್ಲ. ಸಂಗೀತಕ್ಕೆ ಬಹು ಹಿಂದಿನಿಂದಲೂ ತೌರು ಎಂದು ಖ್ಯಾತಿ ಪಡೆದದ್ದು ರುದ್ರಪಟ್ಟಣ. ನಾಡಿನಾದ್ಯಂತ ಹೆಸರು ಮಾಡಿರುವ ವೈಣಿಕರು ಹಾಗೂ ಗಾಯಕರಲ್ಲಿ ಅನೇಕರು ರುದ್ರಪಟ್ಟಣದವರೆ! ಅವರ ಮನೆಯ ಎದುರುಸಾಲಿನಲ್ಲಿ ಎಡಕ್ಕೆ ಎತ್ತರದ ಪಡಸಾಲೆ ಇರುವುದೇ ಹಿಂದೆ ಪ್ರಸಿದ್ದ ವೈಣಿಕರೆನಿಸಿದ್ದ ಬುರುಡೆ ಗೋವಿಂದರಾಯರ ಮನೆ! ಎಷ್ಟಾದರೂ ಆ ನೆಲದ ಮಣ್ಣಿನಿಂದಲೆ ಹುಟ್ಟಿ ಬಂದವನಲ್ಲವೆ ಅಶ್ವತ್ಥ?... ಆದರೆ ಅವನನ್ನು ಸೇರಿದ ಸಾವಿತ್ರಿ ಅರಕಲಗೂಡಿನವಳು. ಅವಳಿಗೆ ಸಂಗೀತವೆಂದರೆ