ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೪ ವೈಶಾಖ ದನಿಯಲ್ಲಿ ಬಾಯಿಯಲ್ಲೂ ಮೈಮರೆತು ಗುನುಗುತ್ತಿರುವಂತೆ, ಮಗುವಿನ ಚೀತ್ಕಾರ ಸ್ವರವೊಂದು ಅವಳನ್ನು ಎತ್ತಿ ಕುಕ್ಕಿದಂತಾಯಿತು. ವೀಣೆಯನ್ನು ಕೆಳಗಿಟ್ಟು ದಡಬಡನೆ ಎದ್ದಳು. ಸಾತು ಅತ್ತಿಗೆಯ ಕೊನೆಯ ಕೂಸು ತೊಟ್ಟಿಲಿನಲ್ಲಿ ತನ್ನ ಪುಟ್ಟ ಪಾದಗಳಿಂದ ಹೊದೆಸಿದ್ದ ಬಿಳಿ ಬಣ್ಣದ ತೆಳುವಾದ ಮಲ್ ಬಟ್ಟೆಯನ್ನು ಝಾಡಿಸಿ ಒದೆಯುತ್ತ ಗಾರ್ ಗಾರ್ ಸದ್ದು ಮಾಡಿ ಆಳುತ್ತಿತ್ತು. ಸರಸರನೆ ಧಾವಿಸಿ ಎತ್ತಿಕೊಳ್ಳುತ್ತ ಹಳ್ಳುಳ್ಳಾಯಿ ಹೇಳಿದಳು. ಹಜಾರದಲ್ಲಿದ್ದ ಬಣ್ಣ ಬಣ್ಣದದ ದೇವರ ಪಟಗಳನ್ನು ತೋರಿಸಿದಳು. ದೇವರ ಕೋಣೆಯ ಗಂಟೆಯನ್ನು ಬಾರಿಸಿದಳು. ರುಕ್ಕಿಣಿ ಹೀಗೆಲ್ಲ ಒಂದು ಗಳಿಗೆ ಅಳು ನಿಲ್ಲಿಸಿ ಮಗು ಸುಮ್ಮನಾಗುವುದು. ಆದರೆ ಮರುಗಳಿಗೆ ಹಿಂದಿನಂತೆಯೇ ರಂಬಾಟ ಆರಂಭವಾಗುವುದು... ಕೂಸಿಗೆ ಹಸಿವಾಗಿರಬಹುದೆ?... ಹೋಗುವಾಗ ಸಾತು ಕೂಸಿಗೆ ಎದೆ ಕಚ್ಚಿಸಿ ಮಲಗಿಸಲಿಲ್ಲವೆ?.... ಇಷ್ಟು ಜಾಗ್ರತೆ ಈ ಕೂಸಿಗೆ ಹಸಿವಾಗಿರಬಹುದೆ?... ಇರಲಾರದು. ಒಂದು ಸಲ ಸನ್ಯ ಕೊಟ್ಟು ತೊಟ್ಟಿಲಿಗೆ ಹಾಕಿ ತೂಗುವುದೇ ತಡ ಸುಖವಾಗಿ ನಿದ್ದೆ ಮಾಡಬೇಕು. ಮಧ್ಯೆ ಎಂದೂ ಇತರ ಮಕ್ಕಳಂತೆ ಇದು ಗಲಾಟೆ ಮಾಡಿದ್ದಿಲ್ಲ.... ಈ ಮನೆಗೆ ಆಗಿಂದಾಗ ಬರುವ ಮಾರಾಠಿಗರ ಸೋನುಬಾಯಿ, ಈ ಮಗು ತೊಟ್ಟಿಲಲ್ಲಿ ತುಂಬಿದಂತೆ ಮಲಗಿರುವುದನ್ನು ನೋಡಿದಾಗಲೆಲ್ಲ, “ಭೂಪತಿ ಕಿಟ್ಟನಂಗೆ ಮಂಗವನೆ. ಮಕ್ಕಳು ಅಂದರೆ ಹಿಂಗಿರಬೇಕು” ಎಂದು ಉದ್ಧಾರ ತೆಗೆಯುವಳು. ಅನಂತರ “ಅಯ್ಯೋ, ನನ್ನ ಕೆಟ್ಟ ಕಣ್ಣು ನನ್ನ ಕಂದನಿಗೆ ಬಡೀಬಾರದು” ಎಂದು ನೀವಾಳಿಸಿ, ತನ್ನ ಕೈ ಬೆರಳುಗಳಿಂದ ಲಟಿಕೆ ತೆಗೆಯುವಳು... ಆ ಸಂದರ್ಭವನ್ನು ನೆನೆಯುತ್ತ, ಅಳುವ ಕೂಸನ್ನು ಎದೆಗೆ ಒತ್ತಿದಂತೆ ಎತ್ತಿರುವಾಗ, ಅವಳೊಳಗೆ ಏನೊ ಹೊಸ ಅನುಭವ... ಏದೆಯೊಳಗೆ ಏನೊ ತುಂಬಿಕೊಂಡಂತೆ! ಇದು ತನ್ನದೇ ಮಗು ಎಂಬಂತೆ! ಅನಿಸಿಕೆ... ಈ ಭಾವ ಎದೆಯೊಳಗೆ ಹರಿದಾಡಿದಂತೆ, ನಾಚಿದಳು. ನಾಚಿಕೆಯ ಬೆನ್ನಿಗೇ ಮಗು ತನ್ನದಲ್ಲ ಎಂಬ ಪ್ರಜ್ಞೆಯೂ ಜಾಗ್ರತವಾಗಿ ವ್ಯಥೆಯೂ ಉಂಟಾಯಿತು ... ಮಗುವಿನ ಅಳು ಹೆಚ್ಚಿತು. ಕಾಲುಗಂಟೆಯಲ್ಲಿ ಬಂದು ಬಿಡುವೆನೆಂದು ಹೇಳಿ ಹೋದ ಅತ್ತಿಗೆ ಇನ್ನೂ ಯಾಕೆ ಬರಲಿಲ್ಲ?... ನೆರೆಮನೆ ಗಿರಜಮ್ಮನವರ ಜೊತೆ ಕುಳಿತು ಇಷ್ಟು ಹೊತ್ತು ಅದೇನು ಮಾಡುತ್ತಿರಬಹುದು?... ಕೂಸು ಅತ್ತು ಅತ್ತು ಘಾಸಿಪಡುತ್ತಿದೆ! ಇನ್ನು ಇಲ್ಲೇ ಹೀಗೆ ತಾನು ಕಾಲಹರಣ ಮಾಡುತ್ತ ನಿಲ್ಲುವುದು ಅನುಚಿತವೆನ್ನಿಸಿತು...