ಪುಟ:ವೈಶಾಖ.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ع ع ಮನೇಲಿ ವೀಣೆ ನುಡಿಸೋರು ಅಂತ ಆಶ್ಚರ್ಯ ಆಯ್ತು. ಸದ್ದು ಮಾಡದೆ, ಬಾಗಿಲು ಓರೆ ಮಾಡಿ ನೋಡಿದರೆ- ರುಕ್ಕಿಣತ್ತೆ!... ಚನ್ನಾಗಿ ನುಡಿಸ್ತಾ ಇದ್ದಳು. ನಾನೂ ಹಂಗೆ ಕೇಳ್ತಾ ನಿಂತೆ. ಆದ್ರೆ ಸ್ವಲ್ಪ ವೇಳೆ ಕಳೆಯೋದರಲ್ಲಿ ವೀಣೆ ತಂತಿ ಘಟ್ ಅಂತ ಕಿತ್ತೊಯ್ತು!”- ಶೇಷನ ಬಾಯಿಂದ ಹೊರಬಿದ್ದ ತಟವಟ ರುಕ್ಕಿಣಿಯನ್ನೂ ಕುದಿಸಿತು. ರೋಷದಿಂದ ತಾಳ್ಮೆಗೆಟ್ಟ ರುಕ್ಕಿಣಿ ಫಟ್ ಎಂದು ಶೇಷನ ಕೆನ್ನೆಗೆ ಬಿಗಿದು, “ಭಡವ, ನಿಜ ಹೇಳು, ಇಲ್ಲದಿದ್ದರೆ ನಿನ್ನಲ್ಲೆ ಸಿಗಿದುಬಿಡ್ತೀನಿ” ಎಂದು ಉಗ್ರರೂಪ ತಾಳಿದಾಗ, ಶೇಷ ಹೆದರಿ ತಟ್ಟನೆ, “ಹೋಡೀಬೇಡ ಅತ್ತೆ, ನಿಜ ಹೇಳೀನಿ... ನಾನೇ ನುಡಿಸ್ತೀನಿ ಅಂತ ಹೋದೆ. ತಂತಿ ಕಿತ್ತೋಯ್ತು... “ಕಣ್ಣೀರು ಸುರಿಸುತ್ತ, ಮೂಗು ಸೊರೆಯುತ್ತ ಹೇಳಿದ. ಸಾವಿತ್ರಿಯ ಮೈಯಲ್ಲಿ ಮುಳ್ಳುಗಳು ಎದ್ದಂತಾಗಿರಬೇಕು. ಅವಳು ಅಡ್ಡ ಬಂದು ಮಗನನ್ನು ಬಿಡಿಸುವುದರೊಳಗೆ ಎಲ್ಲವೂ ನಡೆದುಹೋಗಿತ್ತು. ಅವಳಿಗೆ ಇನ್ನೂ ಹೆಚ್ಚಿನ ವ್ಯಥೆ ತಂದಿದ್ದೆಂದರೆ ಅವಳ ಗಂಡ ಅದೇ ಸಮಯಕ್ಕೆ ಬಸವಾಪಟ್ಟಣದಿಂದ ಬಂದು ಮನೆಯೊಳಗೆ ನಡೆದ ಸಮಸ್ತ ವ್ಯಾಪಾರವನ್ನೂ ನೋಡಿಬಿಟ್ಟಿದ್ದು! ಸಾವಿತ್ರಿಗೆ ಅಪಮಾನವಾದಂತಾಗಿ ತನ್ನ ಕೋಣೆ ಹೊಕ್ಕು ಮಂಚದ ಮೇಲೆ ಪವಡಿಸಿಬಿಟ್ಟಳು. ಅವಳ ಮನಸ್ಸು ವ್ಯಗ್ರಗೊಂಡಿತ್ತು... ತಾನು ಬಸವಾಪಟ್ಟಣದಲ್ಲಿ ಊಟ ಮುಗಿಸಿ ಬಂದಿರುವುದಾಗಿ ಹೇಳಿ, ಕಾಫಿ ತಯಾರಿಸುವಂತೆ ಸೂಚಿಸಿ, ಅಶ್ವತ್ತಣ್ಣ ಪ್ಲಾನವದನನಾಗಿ ಅತ್ತಿಗೆಯ ಬಳಿಗೆ ಹೋಗುವುದನ್ನೇ ನೋಡುತ್ತಿದ್ದು ಭಾರವಾದ ಮನಸ್ಸಿನಿಂದ ರುಕ್ಕಿಣಿ ಅಡಿಗೆ ಕೋಣೆಯತ್ತ ನಡೆದಳು. ಅಲ್ಲಿ ಕಾಫಿ ತಯಾರಿಸುತ್ತ ವಿಚಾರಪರವಶಳಾದಳು. ಏನು ಜೀವನವೊ! – ಮುಕ್ಕಾಲು ಮೂರು ವೀಸ ಪಾಲು ಸಂಸಾರಗಳಲ್ಲಿ ಈ ದಂಪತಿಗಳ ಹಾಗೆ ಎತ್ತು ಏರಿಗೆಳೆಯೋದು ಕೋಣ ನೀರಿಗೆಳೆಯೋದೇ ಜಾಸ್ತಿ. ಅಪರೂಪಕ್ಕೆ ಪರಸ್ಪರ ಇಂಗಿತ ಅರಿತು ನಡೆಯುವ ದಾಂಪತ್ಯ ಕೂಡಿಬಂದಾಗ ಆ ಜೋಡಿ ಬಹಳ ಕಾಲ ಉಳಿಯದ ಹಾಗೆ ವಿಧಿಯ ಸಂಚು! ಈ ಆಲೋಚನೆ ತನ್ನ ಬದುಕನ್ನೆ ತಟ್ಟಿದಾಗ, ಅವಳ ಕಣ್ಣು ಒದ್ದೆಯಾಯಿತು. ಕಾಫಿ ತಯಾರಿಸುತ್ತಿದ್ದಂತೆ ಪಕ್ಕದ ಕೋಣೆಯಿಂದ ಅಣ್ಣ-ಅತ್ತಿಗೆಯರ ಸಂಭಾಷಣೆ ಸ್ಪಷ್ಟವಾಗಿ ಕೇಳಿಬರುತ್ತಿತ್ತು. ಅಡಿಗೆ ಕೋಣೆ ಮತ್ತು ಅತ್ತಿಗೆಯ ಕೊಠಡಿ ಇವೆರಡರ ನಡುವಿನ ಗೋಡೆ