ಪುಟ:ವೈಶಾಖ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೭೯ ತುಂಬಿತು. ಅಂಥಾದ್ದರಲ್ಲೂ ಇಲ್ಲಿಗೂ ಬಂದು ಇಪ್ಪತ್ತು ದಿನ ಪರ್ಯಂತ ಇದ್ದು ಉಪಚಾರ ಮಾಡಿ ಹೋಗಿದ್ದಾರಲ್ಲ?” “ಹಾಗಾದರೆ ಈಗೇನು ಮಾಡೋಣ ಅಂತೀ?- ಕೃಷ್ಣಶಾಸ್ತ್ರಿಗಳಿಗೆ ಹೇಳಿ ಕಳಿಸಿ, ರುಕ್ಕಿಣಿಯನ್ನ ಇಲ್ಲಿಂದ ಸಾಗಿಹಾಕಿಬಿಡೋಣವೆ?” “ಛೇ, ಛ, ನಾನು ಹಾಗೆಂದೆನೆ?... ಅವಳು ಮಹಾರಾಯಿತಿಯ ಹಾಗೆ ಇನ್ನೂ ಮೂರು ನಾಲ್ಕು ತಿಂಗಳು ಇಲ್ಲೇ ಇರಲಿ, ಆದರೆ ನೀವು ಅವಳಿಗೆ ವಿವೇಕ ಹೇಳಿ, ಆ ಹರಾಮಿಯನ್ನು ಕೊಂಚ ಹತೋಟಿ ಮಾಡಿದರೆ ಸಾಕು, ರುಕ್ಕಿಣಿಗೂ ಎಲ್ಲ ಅರ್ಥವಾಗಿತ್ತು. ತನ್ನನ್ನು ಸದ್ಯದಲ್ಲೆ ಕಳಿಸಿಬಿಡಲು ಅತ್ತಿಗೆಗೆ ಸುತರಾಂ ಇಚ್ಚೆಯಲ್ಲ. ಬೇಕೆಂದಾಗ ತಮ್ಮ ತೋಟತುಡಿಕೆಗೆ ಅಲೆದಾಡುತ್ತ, ಬೇಸರ ಕಳೆಯಲು ಹರಟೆಯಲ್ಲೊ ಹಳುಗುಳಿಮಣಿ ಆಡ್ವಾನೊ ಕಾಲಯಾಪನೆ ಮಾಡಲು ಪುರಸೊತ್ತು ಬೇಕಲ್ಲ! ಆದ್ದರಿಂದ ಮನೆಯಲ್ಲಿ ಅಡಿಗೆ ಮಾಡುವುದಕ್ಕೆ, ದನಕರು ನೋಡುವುದಕ್ಕೆ ಮಗು ಸ್ವಲ್ಪ ದೊಡ್ಡದಾಗುವವರೆಗೂ ಅದನ್ನು ಎತ್ತ ಆಡಿಸುವುದಕ್ಕೆ, ಇಂಥವೇ ಸಣ್ಣಪುಟ್ಟ ಚಾಕರಿ ಮಾಡುವುದಕ್ಕೆ ತನ್ನಂಥವಳೊಬ್ಬಳಗತಿಗೆಟ್ಟವಳೊಬ್ಬಳ ಅವಶ್ಯಕತೆ ತೀರ ಅಗತ್ಯವಾಗಿತ್ತು.... ಅಣ್ಣನೂ ಸಮಯ ನೋಡಿ ತನಗೆ ಬುದ್ದವಾದ ಹೇಳಿದ್ದ: “ಹೇಗೊ ಸಹಿಸಿಕೊಂಡು ಹೋಗಮ್ಮ.....” ರುಕ್ಕಿಣಿಗೂ ಬಾಯಿಗೆ ಬಂದಿತ್ತು: “ನೀನು ಸಹಿಸಿಕೊಂಡು ಹೋಗ್ತಿದೀಯಲ್ಲ- ಹಾಗಾ?' ಆದರೆ ಹಾಗೆ ಚುಚ್ಚಿ ಅಣ್ಣನನ್ನು ಇನ್ನೂ ಹೆಚ್ಚು ನೋಯಿಸಲು ಅವಳಿಗೆ ಮನಸ್ಸು ಬರಲಿಲ್ಲ..... ಆ ಪ್ರಸಂಗ ನಡೆದ ನಂತರ ಸಾತುವಿನಲ್ಲಿ ಸ್ಪಷ್ಟವಾದ ಬದಲಾವಣೆಯನ್ನು ರುಕ್ಕಿಣಿ' ಗುರುತಿಸಿದ್ದಳು. ಒಳ್ಳೆಯ ಮಾತುಗಳನ್ನು ಅಡಿ ಉಪಾಯವಾಗಿ ತನ್ನ ಕೈಯಿಂದ ಕೆಲಸ ಮಾಡಿಸಿಕೊಳ್ಳಲು ಅತ್ತಿಗೆ ಪಡುತ್ತಿದ್ದ ಪಾಡನ್ನು ಕಂಡು ತಾನೂ ಒಳಗೇ ನಕ್ಕಿದ್ದುಂಟು. ಶೇಷನಿಗೂ ಆಕೆ ಬೆದರಿಸಿರಬೇಕು. ಬಹುಶಃ ಅದರಿಂದಲೇ ತನ್ನ ಬಳಿ ಅವನು (ತಾನು ತಾಯಿಯ ಮೇಲೂ ಸಿಡುಕಿದಾಗಲೂ) ಬಾಲ ಮುದುರಿದ ನಾಯಿಯಾಗಿ ತೆಪ್ಪಗಿರುತ್ತಿದ್ದ... ಹಾಗೇ ಚಿಂತಿಸುತ್ತಿರುವಾಗ ಯಾರೋ ಮಹಾತ್ಮ ಆಡಿದ ಮಾತನ್ನ ತನ್ನ ಪತಿ ತನ್ನೊಡನೆ ಹಂಚಿಕೊಂಡಿದ್ದರ ನೆನಪಾಯಿತು- ಒಂದೊಂದು ಸಮಯ ಕಚ್ಚಬೇಕಾಗಿಲ್ಲ ಆದರೆ ಬುಸ್ ಎನ್ನಲೇಬೇಕು!...