ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೦ ವೈಶಾಖ ಮುಂದಿನ ಹದಿನೈದು ಇಪ್ಪತ್ತು ದಿನಗಳಲ್ಲಿ ಹೇಳಿಕೊಳ್ಳುವಂಥ ವಿಶೇಷವೇನೂ ನಡೆಯಲಿಲ್ಲ. ಸುಮಾರು ಇಪ್ಪತ್ತು ದಿನ ಕಳೆದ ಬಳಿಕ ಒಂದು ಪ್ರಾತಃಕಾಲದಲ್ಲಿ ವೈಣಿಕ ಶ್ಯಾಮರಾಯ ಹಾಜರಾಗಿ “ನನಗೂ ಕಾಫಿ ಸಿಕ್ಕುತ್ತೋ?” ಎಂದಾಗ, ಸಾತು ಕೂಡ ಏನುತ್ತರ ಕೊಡಬೇಕೊ ತಿಳಿಯದೆ ತಬ್ಬಿಬ್ಬಾದಳು. ಅಶ್ವತ್ಥಣನೆ, “ಓಹೊ-ಶ್ಯಾಮ!... ಮೈಸೂರಿನಿಂದ ಯಾವಾಗ ಬಂದೆಯಪ್ಪ?..... ಬಾ, ಬಾ-ಕೇವಲ ಕಾಫಿಯನ್ನು ಮಾತ್ರ ಕೇಳಿದೀಯಲ್ಲ. ನಮ್ಮ ರುಕ್ಕು ಉಪ್ಪಿಟ್ಟನ್ನೂ ತಯಾರಿಸಿದ್ದಾಳೆ. ಒಳ್ಳೆ ಸಮಯಕ್ಕೆ ಬಂದೆ. ಬಾ, ಕೂತುಕೊ” ಎಂದು ಆಹ್ವಾನಿಸಿದ್ದ.... ಸಾತು ಅಡಿಗೆಮನೆಗೆ ಬಂದಿದ್ದಳು. ರುಕ್ಕಿಣಿ ತಯಾರಿಸಿದ ಉಪ್ಪಿಟ್ಟನ್ನು ತಟ್ಟೆಗಳಿಗೆ ವಿಂಗಡನೆ ಮಾಡಿ ಹಂಚಿ, “ತೆಗೊಂಡುಹೋಗಿ ಕೊಡಮ್ಮ” ಎನ್ನಬೇಕೆ?... ರುಕ್ಕಿಣಿ ಒಪ್ಪಲಿಲ್ಲ. ಸಾತು ಒಂದೇ ಸಮನೆ ಒತ್ತಾಯಿಸುತ್ತಿದ್ದಳು. ನಾನು ಹೋಗಲ್ಲ. ನೀವೇ ತಗೊಂಡು ಹೋಗಿ” ಎಂದು ರುಕ್ಕಿಣಿ. “ಪರವಿಲ್ಲ, ಹೋಗಮ್ಮ” ಎಂದು ಅತ್ತಿಗೆ... ಒಳಗೆ ಏನೋ ನಡೆಯುತ್ತಿದೆ. ಘರ್ಷಣೆಯಾಗುವುದಿದ್ದರೆ ತಪ್ಪಿಸಬೇಕು ಎಂದೇನೊ ಅಣ್ಣ ಕೂಗಿದ: “ರುಕ್ಕಿಣಿ ಎಷ್ಟು ಹೊತ್ತಮ್ಮ ಕಾಯಿಸೊದು. ಶ್ಯಾಮ ಹಸಿದಿರಬೇಕು. ಜಾಗ್ರತೆ ತೆಗೊಂಡು ಬಾ-ಉಪಿಟ್ಟು-ಮೊಸರು ಎರಡನೂವೆ...” ತನಗೆ ಇನ್ನು ಗತ್ಯಂತರವಿಲ್ಲ ಎಂದು ಮನದಟ್ಟಾಯಿತು. ಉಪ್ಪಿಟ್ಟಿನ ಒಂದೊಂದು ತಟ್ಟೆಯನ್ನೂ ಒಯ್ದು ಅಣ್ಣ ಮತ್ತು ಶ್ಯಾಮನ ಕೈಲಿಟ್ಟು ತಾನು ಸೌಟಿನಲ್ಲಿ ಮೊಗೆದು ಮೊಸರನ್ನು ಬಡಿಸುವಾಗ ಶ್ಯಾಮನ ಕಣ್ಣು ತೇವಗೊಂಡಿತು. ಅದನ್ನು ತೋರಗೊಡದೆ, “ಎಲ್ಲಿ ಜಾನಕಿ, ಶೇಷ ಇಬ್ಬರೂ ಕಾಣಾ ಇಲ್ಲ?” ಎಂದು ಹೊರಳು ಮಾತಿನಲ್ಲಿ ಅದನ್ನು ಅದುಮಿಡುವ ಯತ್ನ ನಡೆಸಿದ್ದ. “ಇವೊತ್ತು ಬುಧವಾರ ಅಲ್ಲವೆ? ಅವರಿಬ್ಬರಿಗೂ ಶಾಲೆಯಿದೆ. ಬಸವಾಪಟ್ಟಣಕ್ಕೆ ಹೋಗಿದ್ದಾರೆ.” ಅಶ್ವತ್ಸಣ್ಣ ವಿವರಿಸಿದ್ದ. ತಾನು ಒಳಗೇ ನಕ್ಕಿದ್ದಳು. ಜಾನಕಿ ಹೋಗಿರುವುದೇನೋ ಸಹಜ. ಆದರೆ ಶೇಷ?- ಯಾರಿಗೆ ಗೊತ್ತು? ಒಂದೊಂದು ದಿನ ಅವನು ಹೋಗುತ್ತಿದ್ದುದೂ ಉಂಟಲ್ಲ-ಅಲ್ಲಿ ಉಪಾಧ್ಯಯರನ್ನು ಕಿಚಾಯಿಸಲಿಕ್ಕೆ! ಈ ದಿನ ಹೋಗಿದ್ದರೂ ಹೋಗಿರಬಹುದು.... ಈಗೀಗ ರುಕ್ಕಿಣಿಗೆ ಧೈರ್ಯ ಬಂದಿಬಿಟ್ಟಿದೆ. ಅತ್ತಿಗೆ ಹೇಳಿದ ಎಲ್ಲ