ಪುಟ:ಶಂಕರ ಕಥಾಸಾರ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಕಾದಂಬರೀಸಂಗ್ರಹ ಈ ಪ್ರಕಾರ ನಿಯಮಬ್ರಹ್ಮಚದಿಂದ ಗುರುಕುಲ ವಾಸಮೂಡಿ, ಚತುರ್ವೆ ದಗಳನ್ನೂ, ಸಕಲ ಶಾಸ್ತ್ರಗಳನ್ನೂ ಅಧ್ಯಯನ ಮಾಡಿ ಗುರುಗಳಿಗೆ ಗುರುದಕ್ಷಿಯ ನ್ನಿತ್ತು ಭದ್ರವಟಮೂಲದಿಂದ ಹಿಂತಿರಿಗಿ ಬಂದ ದಕ್ಷಿಣಾಮೂರ್ತಿಯೊ' ಎಂಬಂತೆ ಮನೆಗೆ ಬ:ದನು. ಮೇರುವು ಇತರ ಪರ್ವತಗಳಗಿಂತ ಹೇಗೆ ಶ್ರೇಷ್ಟವೋ ಹಾಗೆ ಈ ಶಂಕರನು ಎಲ್ಲಾ ಬ್ರಹ್ಮಚಾರಿಗಳಿಗಿಂತಲೂ ಶ್ರೇಷ್ಠನಾಗಿದ್ದನು. ಇಂತಹ ಬ್ರಹ್ಮಚಾರಿಯು ಹಿಂದೆ ಅವತರಿಸಿರಲಿಲ್ಲ: ಮುಂದೆ ಅವತರಿಸಲಾರನು. ಇವನು ಕಾಮಾದ್ಯರಿಷಡ್ವರ್ಗಗಳನ್ನೂ ಜಯಿಸಿದ್ದನು. ವಾಂಛಿತಫಲಪ್ರದಾನವಂ ಮಾಡುತ್ತಿದ್ದುದರಿಂದ ಎಲ್ಲರೂ ಅವನನ್ನು ಧರಣೀಕಲ್ಪದ್ರುಮ ' ವೆನ್ನುತ್ತಿದ್ದರು. ಒಂದುದಿನ ದೂರ್ವಾಸರು ಬಂದು ಶ್ರೀ ಶಾಂಕರಬ್ರಹ್ಮಚಾರಿಗೆ ಸರ್ವ ವಿದ್ಯಾ ಶಕ್ತಿಯನ್ನೂ ಅನುಗ್ರಹಿಸಿ ತಮ್ಮ ತಪಸ್ವಾಮರ್ಥ್ಯವಂ ಕೊಟ್ಟ ಆಶೀರ್ವದಿಸಿ ಹೊರ ಟುರದರು. ಮತ್ತೊಂದುದಿನ ಬಹಳ ಕೃಶಳಾದ ಇವನ ತಾಯಿಯು, ನದೀಖ್ಯಾನಕ್ಕೆ ಹೋಗಿ, ಬಿಸಿಲಿನ ತಾಪದಿಂದ ತಪ್ತಳಾಗಿ ನಡೆಯಲಾರದೇ ಶ್ರಮಪಡುತ್ತಿರುವುದನ್ನು ತಿಳಿದು ಶಂಕರನು ಅಲ್ಲಿಗೆ ಹೋಗಿ ಆಕೆಯನ್ನು ಸಹುಸಿ ಮನೆಗೆ ಕರೆದುಕೊಂಡುಬಂದು, ಆ ನದಿಯನ್ನು ಗ್ರಾಮದ ಸವಾಸದಲ್ಲಿ ಹುರಿಯಬೇಕೆಂದು ಪ್ರಾರ್ಥಿಸಲು, ಆ ನದಿಯು ಪ್ರಾತಃಕಾಲದಹೊತ್ತಿಗೆ ಸರಿಯಾಗಿ ಗ್ರಾಮದ ಹತ್ತಿರ ಯುಯುತ್ತಿತ್ತು. ಇದನ್ನೆಲ್ಲಾ ಜನಗಳು ತಿಳಿದು ಶಾಂಕರಬ್ರಹ್ಮಚಾರಿಯನ್ನು ಕೊಂಡಾಡ, ತಿದ್ದರು. ಇಂತಹ ತನ್ನ ಮಗನು ಅಲ್ಪಾಯುವೆಂದು ಆರ್ಯಾಂಬೆಗೆ ತಿಳಿದಿದ್ದಾಗ್ಯೂ ಮಾರ್ಕಂಡೇಯನಂತೆ ಮೃತ್ಯುವನ್ನು ಜಯಿಸಿ ಚಿರಾಯುವಾಗುವನೆಂದು ತಿಳಿದು ಶಿವನಂ ಪ್ರಾರ್ಥಿಸುತ್ತಿದ್ದಳು. ಕೇರಳದೇಶದ ಜನರು ಯಾವ ಇತಿಬಾಲೆಯೂ ಇಲ್ಲದೆ ಕ್ಷೇಮವಾಗಿದ್ದರು. ದುರ್ಭಿಕ್ಷವೆಂಬ ಹೆಸರೇ ಅಡಗಿಹೋಗಿತ್ತು. ಅಲ್ಲಿನ ದೊರೆಯು ಈ ಬ್ರಹ್ಮಚಾರಿಯ ಮಹಿಮೆಯಂ ಕೇಳಿ ಶಂಕರನನ್ನು ಕರೆದುಕೊಂಡು ಬರುವಂತೆ ಮಂತ್ರಿ ಮೊದಲಾದವ ರನ್ನು ಕಳುಹಿಸಲು ಅವರು ಬಂದು ನಿಸ್ಸಹಶಿಖಾಮಣಿಯಾದ ಶಂಕರನಂ ಕರೆದರು. ಅದಕ್ಕೆ ಶಂಕರನು ( ಸ್ವಧರ್ಮನುಷ್ಟಾನವಂ ಬಿಟ್ಟು ಲೋಕಾನುವರ್ತನಕಾಲ ಕ್ಷೇಪವು ಸರಿಯಲ್ಲವು ಎಂದು ತಿಳಿದು ಧರ್ಮದಿಂದ ಸಕಲ ಪ್ರಜೆಗಳನ್ನೂ ಪರಿಪಾ ಲನೆ ಮೂಡುವುದೇ ಅರಸನಿಗೆ ಶ್ರೇಯಸ್ಕರವಲ್ಲಎಂದು ಹೇಳಲು ಅವರು ನಿರಾಶರಾಗಿ ಹಿಂತಿರಿಗಿಬಂದು ದೊರೆಗೆ ನಡೆದ ಸಂಗತಿಗಳನ್ನೆಲ್ಲಾ ತಿಳಿಸಿದರು.