ವಿಷಯಕ್ಕೆ ಹೋಗು

ಪುಟ:ಶಂಕರ ಕಥಾಸಾರ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಶಂಕರಕಥಾಸಾರ
೪೭

ಭಿಕ್ಷ ಕೊಡಲು ಅಯೋಗ್ಯರಾಗಿರಿ; ನಿಮ್ಮ ಹಿತ್ತಲುಗಳೇ ಸ್ಮಶಾನಗಳಾಗಿರಲಿ” ಎಂದು
ಶಪಿಸಿ, ತಾಯಿಗೆ ಮುಕ್ತಿಯಾಗುವಂತೆ ದೈವಾನುಗ್ರಹಮಾಡಿದ್ದರಿಂದ ಅವಳು ಮುಕ್ತ
ಳಾದಳು.
ಆಚಾರ್ಯರ ವಚನವು ಅಮೋಘವಾದ್ದರಿಂದ ಕಾಲಟ್ಯ ಗ್ರಹಾರದವರ ಆಚಾ
ರವು ಆಚಾರ್ಯ ಶಾಪದಂತೆ ನೆಲೆಗೊಂಡಿತು.
ಅತ್ತ ಪದ್ಮಪಾದರು ಕಾಳಹಸ್ತಿಶ್ವರನನ್ನು ಸೇವಿಸಿ, ಸುವರ್ಣಮುಖಿಯಲ್ಲಿ
ಸ್ನಾನಮಾಡಿ, ಕಂಚಿಗೆ ಬಂದು ದೇವರ ಸೇವೆಯಂ ಮಾಡಿ, ಅಲ್ಲಿಂದ ಚಿದಂಬರಕ್ಕೆ
ಹೋಗಿ ನಟರಾಜನನ್ನು ಸ್ತುತಿಸಿ, ಅಲ್ಲಿ ಶಿವಗಂಗಾ ತೀರ್ಥವೆಂಬ ತೀರ್ಥವನ್ನು
ನಿರ್ಮಿಸಿ, ರಾಮೇಶ್ವರಕ್ಕೆ ಹೊರಟು ದಾರಿಯಲ್ಲಿ ಸಿಕ್ಕಿದ, ಪೂರ್ವಾಶ್ರಮದ ಸೋದರ
ಮಾವನಾದ ಭಟ್ಟಪಾದರ ಶಿಷ್ಯನಿಂದ 'ಆದಿನ ಅಲ್ಲಿಯೇ ಇದ್ದು ಭಿಕ್ಷೆಯಂ ಸ್ವೀಕರಿಸ
ಬೇಕು.' ಎಂದು ಬಲಾತ್ಕರಿಸಲ್ಪಟ್ಟವರಾಗಿ, ಅಲ್ಲಿಯೇ ನಿಂತು, ಸ್ವರಚಿತಗಳಾದ
ಗ್ರಂಥಗಳನ್ನು ನೋಡಿ ವಾದಕ್ಕೆ ಬಂದ ಸೋದರಮಾವನನ್ನು ಸೋಲಿಸಲವನು 'ಪದ್ಮ
ಪಾದನ ಗ್ರಂಥಗಳನ್ನು ಹೇಗಾದರೂ ನಾಶಮಾಡಬೇಕು' ಎಂದು ಯೋಚಿಸುತ್ತಿದ್ದು ,
ದೈವಯೋಗದಿಂದ, ಪದ್ಮ ಪಾದರು ಗ್ರಂಥಗಳನ್ನು ಅಲ್ಲಿಯೇ ಇಟ್ಟು, 'ತೀರ್ಥಯಾತ್ರೆ
ಮಾಡಿಕೊಂಡು ಬರುವಾಗ ತೆಗೆದುಕೊಂಡು ಹೋಗುತ್ತೇನೆ, ಎಂದು ಹೇಳಿ ರಾಮೇ
ಶ್ವರಕ್ಕೆ ಹೊರಟು ತೀರ್ಥಯಾತ್ರೆಯಂಮಾಡಿ, ಅಲ್ಲಿನ ಜನರಿಗೆ ಅದ್ವೈತ ತತ್ತ್ವವನ್ನುಪ
ದೇಶಿಸಿ ಹಿಂತಿರುಗಿ ಸೋದರಮಾವನ ಬಳಿಗೆ ಬರುವಾಗ್ಯೆ, ಅವನು ತಾನು ಅಪವಾದಕ್ಕೆ
ಸಿಕ್ಕದ ಹಾಗೆ ಪುಸ್ತಕಗಳನ್ನಿಟ್ಟಿದ್ದ ಮನೆಗೆ ಬೆಂಕಿಯನ್ನು ಹೊತ್ತಿಸಿ ಎಲ್ಲವನ್ನೂ
ಭಸ್ಮಮಾಡಿ, ಪದ್ಮಪಾದರ ಎದುರಿಗೆ ನನ್ನ ಮನೆ ಸುಟ್ಟು
ಹೋದುದಕ್ಕಿಂತ ಸುಟ್ಟು ಹೋದ ನಿನ್ನ ಪುಸ್ತಕಗಳಿಗೆ ಬಹಳವಾಗಿ ವ್ಯಸನಪಡುತ್ತೇನೆಂದು ಹೇಳಿದ ಸೋದರ
ಮಾವನ ಮಾತಿಗೆ ಅನುತಾಪಗೊಂಡರೂ, ಧೈರದಿಂದ ಪುನಃ ' ಆ ಗ್ರಂಥಗಳಂ ರಚಿಸು
"ಆಹ ! ಯತಿಗೆ ಕರ್ಮಾಧಿಕಾರವೆತ್ತಣದು, ಆಚಾರ್ಯರಿಂದ ಮಾಡಲ್ಪಟ್ಟ ಮಾತೃವಿನ ಅಂತ್ಯಕ
ರ್ಮವು ಅಶಾಸ್ತ್ರೀಯವಲ್ಲವೇ ಎಂಬ ಸಂದೇಹವು ವಾಚಕರ ಮನಸ್ಸಿನಲ್ಲುತ್ಪನ್ನವಾಗಬಹುದು.
ಪರಶುರಾಮನು ಮಾತೃವನ್ನು ತಂದೆಯ ಆಜ್ಞೆಯಿಂದ ಕೊಂದರೂ ಹೇಗೆ ದೋಷವನ್ನು
ಹೊಂದಲಿಲ್ಲವೋ ಹಾಗೆಯೇ ಸನ್ಯಾಸಕಾಲದಲ್ಲಿ ಶಂಕರರು ಮಾಡಿದ್ದ ವಾಗ್ದಾನದಿಂದಲೂ, ದೇಹಾಂತ್ಯ
ದಲ್ಲಿ ಆಕೆಯು ಅಪೇಕ್ಷಿಸಿದ್ದನ್ನು ನೆರವೇರಿಸಿ ಮಾತೃವಿನ ಋಣವಂ ಪರಿಹಸಿಕೊಳ್ಳುವುದು ಧರ್ಮವಾ
ದರಿಂದಲೂ ದೇಶಿಕರು ಮಾಡಿದ್ದು ಸಶಾಸ್ತ್ರೀಯವಲ್ಲದೇ ಅಶಾಸ್ತ್ರೀಯವಲ್ಲವು.
ಆ ಶಾಪವು ಬ್ರಹ್ಮೀಭೂತರಾದ, ಶ್ರೀ ಶ್ರಿಂಗೇರಿ ಪೀಠಾಧ್ಯಕ್ಷರಾಗಿದ್ದ ಶ್ರೀ ಸಚ್ಚಿದಾನಂದ
ಶಿವಾಭಿನವ ವಿದ್ಯಾನೃಸಿಂಹಭಾರತೀ ಸ್ವಾಮಿಗಳಿಂದ ವಿಮೋಚನೆ ಮಾಡಲ್ಪಟ್ಟಿತು.