ಪುಟ:ಶಂಕರ ಕಥಾಸಾರ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೫೪

ಕಾದಂಬರೀಸಂಗ್ರಹ

ತ್ತಾನೆ. ಕಳ್ಳತನವನ್ನು ಮಾಡಿ, ಗುರುಪತ್ನಿಯ ಸಂಗಡ ಕ್ರೀಡಿಸಿ, 'ಹೆಂಡವನ್ನು
ಕುಡಿದು, ಬ್ರಹ್ಮಹತ್ಯೆಯನ್ನಾಚರಿಸಿ, ದೇಹಕ್ಕೆಲ್ಲಾ ಭಸ್ಮಧಾರಣೆಮಾಡಿ, ಭಸ್ಮಶಯ್ಯೆ
ಯಲ್ಲಿ ಮಲಗಿ ರುದ್ರಾಧ್ಯಾಯಪಾರಾಯಣಮಾಡಿದರೆ ಅವನು ಮೇಲೆ ಹೇಳಿದ ಸಕಲ ಪಾಪಗಳಿಂದಲೂ ವಿನಿರ್ಮುಕನಾಗುತ್ತಾನೆ.'ಅತಪ್ತ ತನೂರ್ನತದಾಮೋಅನಶ್ನುತೆ
' ಎಂಬ ವೇದವಾಕ್ಯದಂತೆ ಮುಮುಕ್ಷುಗಳಿಗೆ ಲಿಂಗಾಂಕನವೂ ಅತ್ಯಾವಶ್ಯಕವು.”ಎಂದು
ಹೇಳಲು
ಆಚಾರ್ಯರು "ಹಾ! ಇಲ್ಲಿ ಕೃಚ್ಛೃಚಾಂದ್ರಾಯಣಾದಿ ವ್ರತಗಳಿಂದ ತಪ್ತವಾದ
ದೇಹವಲ್ಲದೇ ವಹ್ನಿಯಿಂದ ತಪ್ತವಾದ ದೇಹವಲ್ಲ; ಎಂದು ಬೃಹನ್ನಾರದೀಯದಲ್ಲಿ
ಹೇಳಿದೆ. ಲಿಂಗಾಂಕಿತವಾದ ಅಥವಾ ಶಂಖಚಕ್ರಾಂಕಿತವಾದ ದೇಹವನ್ನು ನೋಡಿದ
ಮಾತ್ರದಲ್ಲಿ ಸ್ನಾನಮಾಡಬೇಕು; ಅಥವಾ ಸೂರದರ್ಶನಮಾಡಬೇಕು. ಹಾಗೆ
ಮುದ್ರಾಂಕನವನ್ನು ಮಾಡಿಕೊಂಡು ಜೀವಚ್ಛವದಂತಿರುವನು ಶೂದ್ರನಂತೆ ಬಿಡಲ್ಪಡ
ಬೇಕು. ಅವನಿಗೆ ಕೊಡಲ್ಪಟ್ಟ ಹವ್ಯಕವ್ಯಾದಿಗಳು ವ್ಯರ್ಥಗಳಾಗುತ್ತವೆ. ಅನ್ನ ವುಮಂ
ತ್ರಾಭಿಮಂತ್ರಿತವಾದರೂ ಅಂಥವನ ದರ್ಶನದಿಂದ ಬಿಡಲ್ಪಡಬೇಕು. ಶೂದ್ರನಿಂದಲಾ
ದರೂ ಊಟಮಾಡಬಹುದು; ಮುದ್ರಾಂಕಿತವಾಗ ತನುವುಳ್ಳವನಿಂದ ಊಟಮಾಡ
ಕೂಡದು, ಎಂದು ಬೃಹನ್ನಾರದೀಯದಲ್ಲಿದೆ. ಪೂರ್ವದಲ್ಲಿ ಗಾಯತ್ರಿಗೂ ಬ್ರಾಹ್ಮ
ಣರಿಗೂ ವಾದ ನಡೆಯಿತು; ಆಗ ಗಾಯತ್ರಿಯು ನೀವು ಕಲಿಯುಗದಲ್ಲಿ ಪಾಷಂಡರೂ,
ವೇದೋಕ್ತ ಕರ್ಮಹೀನರೂ, ತಾಂತ್ರಿ-ರೂ, ಆಗಿರೆಂದು ಕೋಪದಿಂದ ಶಪಿಸಿದಳು.
ಅದರಂತೆ ಕಲಿಯುಗಪ್ರಾಪ್ತವಾಗಲಾಗಿ ಅವರೆಲ್ಲಾ ವೇದಾರ್ಧಹೀನರೂ, ಪಾಷಂಡರೂ,
ಲಿಂಗಚಕ್ರಾದಿಂಚಿಹ್ನಿತರೂ, ಜ್ಞಾನರ್ಮಪದಭ್ರಷ್ಟರೂ, ಕಾಮಕ್ರೋಧಾದಿ ಪೀಡಿತರೂ,
ದುರಾತ್ಮರೂ, ಸತ್ಯ ಧರ್ಮವರ್ಜಿತರೂ, ಮತ್ತು ಶಾಸಭಾಗಿಗಳೂ, ಆದ ದ್ವಿಜಾಧವ
ರಾಗಿ ಹುಟ್ಟುತ್ತಾರೆ. ಕಲಿಯುಗದಲ್ಲಿ ಮೂರುಸಾವಿರ ವರ್ಷಗಳು ಕಳೆದನಂತರದಲ್ಲಿ
ಸತ್ಯಧರ್ಮಪರಾಯಣರಾಗಿಯೂ, ಅದ್ವೈತಾರ್ಥಾನುಚಿಂತಕರೂ ಆಗಿ ಶಾಪವನಿರ್ಮು
ಕ್ತರಾಗುತ್ತಾರೆ, ಎಂದು ಮಾರ್ಕಂಡೇಯಪುರಾಣದಲ್ಲಿ ಹೇಳಲ್ಪಟ್ಟಿದೆ. ಪರಬ್ರ
ಹ್ಮ ರೂಪಿಯಾದ ಈಶ್ವರನ ಪೂಜೆಯನ್ನು ಮಾಡಬೇಕೆಂದು ಶೃತಿಯಲ್ಲಿ ಹೇಳಲ್ಪಟ್ಟಿದೆ.
ಅದನ್ನು ತಿರಸ್ಕರಿಸಲು ಯಲಗೂ ಸಾಧ್ಯವಿಲ್ಲ. ವಿಭೂತಿ, ರುದ್ರಾಕ್ಷಿಗಳ ಧಾರ
ಣೆಯು ಮನುಷ್ಯರಿಂದ ಮಾಡಲ್ಪಡಬೇಕು; ಆದರೆ ಲಂಗಾದ್ಯಂಕನಗಳನ್ನು ಮಾತ್ರ
ಮಾಡಕೂಡದು” ಹೀಗೆ ಆಚಾರ್ಯರು ಅವರಿಗುಪದೇಶಿಸಿ ಅವರ ಸಂದೇಶಗಳನ್ನೆಲ್ಲಾ
ಶ್ರುತ್ಯುಕ ಪ್ರಮಾಣಗಳಿಂದ ನಿವೃತ್ತ ಮಾಡಲು ಅವರು ತಮ್ಮ ಚಿಹ್ನೆಗಳನ್ನೆಲ್ಲಾ ತ್ಯಜಿಸಿ
ಆಚಾರ್ಯರ ಶಿಷ್ಯರಾಗಿ ವೇದೋಕ್ತ ಕರ್ಮಾನುಯಾಯಿಗಳಾದರು.