ಪುಟ:ಶಕ್ತಿಮಾಯಿ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್F ಶಕ್ತಿಮಯಿ, ನ ಮರು ಲಗ್ನಗಳಾಗಿದ್ದು, ಅವನು ತನ್ನ ಸೋದರ ಮಾವನ ಮಗ ನ ಲಗ್ನಕ್ಕೆಂದು ಹೋದಾಗ ರಾನೂ ಒಂದು ಲಗ್ನವನ್ನು ಮಾಡಿ ಕೊಂಡಿದ್ದನು. ಆ ನಾಲ್ಕನೇ ಲಗ್ನದ ಹೆಂಡತಿಯೇ ನಮ್ಮ ರಂಗ ಬಾಯಿಯು. ಈ ಬಗೆಯಾದ ಹೆಚ್ಚಾದ ಸುದೈವದಿಂದ ನಾಲ್ಕು ಜನ ಹೆಂಡಂದಿರ ಪತಿಯಾದ ಆ ಬ್ರಾಹ್ಮಣನು ಸುಖದ ಅನುಭವ ವನ್ನು ಕ್ರಮೇಣ ಹೊಂದುತ್ತ ಕಾಲವನ್ನು ಕಳೆಯುತ್ತಿದ್ದನು. ಆ ದರೆ ಅವನ ಆ ಮಿಗಿಲಾದ ಆನಂದದಲ್ಲಿ ಒಮ್ಮಿಂದೊಮ್ಮೆಲೆ ಕಡು ಬೇದ ವುಂಟಾಯಿತು; ಶಾಂತಿಯ ರಾಬ್ಬದಲ್ಲಿ ಕೂಡಲೆ ಅಶಾಂತಿಯು ತಲೆ ದೋರಿತು? ಆಗ ಆತನು ತನ್ನ ಇಷ್ಟು, ಜನ ಹೆಂಡಂದಿರನ್ನು ಕಟ್ಟಿ ಕೊಂಡು ಓಡಿಹೋಗುವದಾದರೂ ಎಲ್ಲಿಗೆ? ಇಂಥೀ ಅನಾನುಕೂಲ ಪ್ರಸಂಗದಲ್ಲಿ ಅವನು ದಿನಾಜಪುರದ ಗಣೇಶದೇವನ ಸೈನ್ಯದ ಸಂಗಡ ಲೇ ನಡೆದನು. ರಂಗಿಣಿಯು ಗಣೇಶದೇವನ ರಾಣಿಯಾದ ನಿರೂ ಸಮಯ ಪ್ರಿಯ ಗೆಳತಿಯಾದ್ದರಿಂದ ಆಕೆಯನ್ನು ಅವಳು ಬೇರೆ ಕಡೆಗೆ ಹೋಗಗೊಡುವಂತಿದ್ದಿಲ್ಲ; ಅದರಿಂದ ಆ ಬ್ರಾಹ್ಮಣನೂ ಹೆಂ ಡತಿಯ ಬೆನ್ನತ್ತಬೇಕಾಯಿತು! ಆಗ ಆ ಪ್ರಸಿದ್ಧ ಗಾಯಕನ ಹೃದ ಯದಿಂದ ಗಾನದ ಲಹರಿಗಳು ಏಳದೆ, ಚಿಂತಾಯುಕ್ತ ನಿಟ್ಟುಸಿರು ಗಳು ಮಾತ್ರ ಆಗಾಗ್ಗೆ ಹೊರಬೀಳುತ್ತಿದನು. ರಾಜನಿಗಾದರೂ ಈಗ ಸ್ವಸ್ಥ ಚಿತ್ರದಿಂದ ಗಾಯನ ಕೇಳುತ್ತ ಕೂಡುವ ಸಮಯವಿ ದ್ವಿಲ್ಲ. ಅದರಿಂದ ಆ ಬ್ರಾಹ್ಮಣನು ಈಗ ಸೇನಾಸಮೂಹದ ಅಡಗಿ ಯವರ ಸಹಾಯಕನಾಗಿ ಯೋಚಿಸಲ್ಪಟ್ಟಿದ್ದನು. ಸೈನಿಕರ ವೇಷ ಭೂಷಣಗಳನ್ನು ಧರಿಸುವದು ಆ ಬ್ರಾಹ್ಮಣ ಕುಲೋತ್ಪನ್ನನಾದ ಗಾ ಯಕನಿಗೆ ಮೈಗೆಮುಳ್ಳು ಬಡಿದಂತಾಗುತ್ತಿತ್ತು. ಅದರಿಂದಲೇ ಅ ವನು ದಂಡಿನ ಶಿಬಿರಬಿಟ್ಟು ಸಹಸಾ ಹೊರಬೀಳುತ್ತಿರಲಿಲ್ಲ; ಇರು. ಈ ದಿವಸ ಆ ಗಾಯಕನ ಸ್ನೇಹಿತರು ಹ್ಯಾಗೆ ಹ್ಯಾಗೋ ಹು