ಪುಟ:ಶಕ್ತಿಮಾಯಿ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿ ಮಯೂ, ೧on ನಮ್ಮ ಗಾಯಕನ ಸಂಗೀತದ ಲಹರಿಗಳಾದರೂ ಚಂದ್ರಲೋಕವನ್ನು ಮುಟ್ಟಿ ಮೆಲ್ಲ ಮೆಲ್ಲನೆ ಪರಾವರ್ತನೆ ಹೊಂದುತ್ತವೆಯೋ ಏನೋ ಎಂ ಬಂತೆ ಆ ಪುಷ್ಕರಿಣಿಯ ದಂಡೆಯಲ್ಲಿ ಮದಮಂದವಾಗಿ ಪ್ರತಿಧ್ವನಿ ಗೊಡುತ್ತಿದ್ದವು. ಅಷ್ಟರಲ್ಲಿ ಬ್ರಾಹ್ಮಣನ ಲಕ್ಷ್ಯವು ಪಾರ್ಶ್ವಸ್ಥ ೪ಾದ ಆ ಹೆಣ್ಣುಮಗಳ ಕಡೆಗೆ ಹೋಯಿತು. ಕೂಡಲೆ ಅವನು ತನ್ನ ಗಾಯನವನ್ನು ಅಲ್ಲಿಗೆ ನಿಲ್ಲಿಸಿ, ಆಕೆಯನ್ನು ಕುರಿತು-ದೇವೀ, ನೀನು ಯಾರು? ಎಂದು ಪ್ರಶ್ನೆ ಮಾಡಿದನು. ಆಗ ಆ ಅಪಚಯಸ್ಥಳಾದ ಯುವತಿಯು ಮುಗುಳು ನಗೆ ನಗುತ್ತ.-ನನ್ನ ವೇಷದಿಂದ ನಾನಾರೆಂಬುದನ್ನು ಕಂಡು ಹಿಡಿಯಲಾ ರಿರಾ? ಸರದಾರ, ನಾನು ಭಿಕ್ಷುಕಿಯು, ಎಂದು ಉತ್ತರಕೊಟ್ಟಳು. ಗವಾಯಿಯು ತನ್ನ ಕೈಯೊಳಗಿನ ಸಾರಂಗಿಯನ್ನು ನೆಲದ ಮೇಲಿಟ್ಟು ಆಕೆಗೆ ನನ್ನನ್ನು ಉಪವಾಸ ಮಾಡುತ್ತಿರುವೆಯೇನು? ನೀನು ಈ ವನದೇವತೆಯೆಂಬತೆ ನನಗೆ ತೋರುತ್ತದೆ ಎಂದು ನುಡಿದು, ಆಕೆಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಲುದ್ಯುಕ್ತನಾದನು. ಅದನ್ನು ಕಂಡು ಅವಳು ಅವನಿಗೆ ಹಾಗೆ ಮಾಡಬೇಡೆಂದು ತಿಳಿಸಿ ಸರದಾರ, ನಿಮ್ಮಂಧ ಪುತ್ರ ಬ್ರಾಹ್ಮಣರು ನನ್ನ ೦ಧ ಬಡಭಿಕ್ಷುಕಿಗೆ ನಮಸ್ಕರಿಸಬಹುದೆ? ನಾನು ಬೇರೆ ಯಾರೂ ಇರದೆ, ಉಚ್ಛ ಕುಲದ ಒಬ್ಬ ಬ್ರಾಹ್ಮಣೇತರಳು; ಇಂಥ ನನಗೆ ತಾವು ನಮಸ್ಕರಿಸಿ ನನ್ನ ನ್ನು ಘೋರನರಕಕ್ಕೆ ಗುರಿಮಾಡುವಿರಾ? ಎಂದು ನಿಷೇಧಿಸಿದಳು. ಬ್ರಾಹ್ಮಣನು ವಿಸ್ಮಯ ಚಕಿತನಾಗಿ ನೀನು ಭಿಕ್ಷುಕಿಯೇ? ಈ ಪ್ರಕಾರದ ಭಿಕ್ಷುಕಿಯನ್ನು ನಾನೆಲ್ಲಿಯೂ ನೋಡಿಲ್ಲವಲ್ಲ? ಬಳಿಕ ಶಕ್ತಿಯು-ಸರದಾರ, ಈಗ ತಾನಂದ ಹಾಡು ಯಾರ ದು? ಈ ಹಾಡನ್ನು ನಾನೊಬ್ಬ ಭಿಕ್ಷುಕನ ಬಾಯಿಂದ ಕೇಳಿದ್ದೆನು. ಅದಕ್ಕೋಸ್ಕರ ತಮ್ಮನ್ನು ಕೇಳುತ್ತೇನೆ.