ಪುಟ:ಶಕ್ತಿಮಾಯಿ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ ಸ, ಚಂದ್ರಿಕೆ. ಅಕಲಂಕಿತಗಳಾಗಿದ್ದು, ಈ ವರೆಗೂ ನಿನ್ನ ವೇ ಆಗಿರುತ್ತವೆ. ಈಗ ಲೂ ನೀನು ನನ್ನನ್ನು ಸಂರಕ್ಷಿಸುವ ಹವ್ಯಾಸವನ್ನು ಬಿಟ್ಟು ಕೊಟ್ಟರೆ, ಇನ್ನು ಮುಂದೆ ನನ್ನ ಈ ವಿಶುದ್ದತೆ ಯು ನಷ್ಟವಾಗದಿರಲಾರದು. ನೀನು ನನ್ನನ್ನು ಉದ್ಘಾರಗೊಳಿಸದಿದ್ದರೆ, ಪಾಪಾನಲದಲ್ಲಿ ಹಾರಿಕೊ ಇದ ಹೊರತು ನನಗೆ ಗತ್ಯಂತರವಿದಾಗಿದೆ. ಅಯ್ಯೋತ್ಸವದ ದಿವಸ ಯಾವ ರ್ಗಹದೇವನು ಶಕ್ತಿಯನ್ನು ನದೀತೀರದಲ್ಲಿ ಕಂಡು ಅವಳ ಪ್ರೇಮಸಂಯೋಗಕ್ಕಾಗಿ ಚಿಕ್ಕ ಬಾಲಕ ನಂತೆ ಆತ್ಮವನ್ನು ಕೂಡ ಸದುರ್ಪಿಸಲು ಸಿದ್ಧನಾಗಿದ್ದನೋ, ಅದೇ ಅವನಲ್ಲಿ ಈ ದಿವಸ ಅವಳನ್ನು ಕಂಡಾಗ ಆ ಶುದ್ದ ಭಾವನೆಯು ಉಂಟಾಗಲಿಲ್ಲ. ಈಗ ಅವನು ಪ್ರಶಾಂತ, ಗಂಭೀರ ಹಾಗು ಪ ಕ್ಷಪಾತವಿಲ್ಲದ ಕರೋರ ವಿಚಾರಕನಾಗಿ ಕೆಲಹೊತ್ತು ಸುಮ್ಮನೆ ನಿಂ ತಿದ್ದನು. ನಂತರ ಅದನು ---ಶಕ್ತಿ, ಗತಿಸಿದ ಆ ದಿವಸವು ಪುನಃ ಬರಲಾರದು. ನೀನು ಯವನರ ಮನೆಯಲ್ಲಿ ವಾಸಮಾಡಿರುವೆ ಯಾದುದರಿಂದ ನನ್ನ ಸಹಧರ್ಮಿಣಿಯಾಗುವ ಸಂಭವವಾದರೂ ಉಳಿದಿರುವರೇ? ಭವಿತವ್ಯವನ್ನು ತಿರುಗಿಸುವದೂ, ಕರ್ಮಭೋಗವನ್ನು ತಪ್ಪಿಸುವದೂ ಸಾಧ್ಯಾತೀತ ಸಂಗತಿಯು, ಆ ದಿವಸ ನಿನ್ನನ್ನು ನನ್ನವ ಳನ್ನಾಗಿ ಮಾಡಿಕೊಳ್ಳುವದು ಶಕ್ಯವಿತ್ತು; ಆದರೆ ಅಂದು ನೀನು ಹೂ ರಟು ಹೋದೆ. ಮರುದಿವಸ ನಿನ್ನನ್ನು ಹುಡುಕಿ ನಿನ್ನೊಡನೆ ಸಂಧಾನ ಬೆಳಿಸಬೇಕೆಂದು ವಿಚಾರಿಸುವಷ್ಟರಲ್ಲಿ,ನೀನು ಗಾಯಾಸುದ್ದೀನನ ಬೇಗನ್ನು ಳಾಗಿರುವೆಯೆಂಬದು ತಿಳಿದು ಬಂದದರಿಂದ ಉಪಾಯವಿಲ್ಲದಾಯಿತು! ಶಕ್ತಿಮಯಿ'ಮಹಾರಾಣಿಯ ಅಸಮ್ಮತಿಪಡುತ್ತಿದ್ದರೂ, ಅಂದು ಸತ್ಯವಾಗಿ ನೀನು ನನ್ನನ್ನು ಲಗ್ನ ಮಾಡಿಕೊಳ್ಳುತ್ತಿದ್ದೀಯಾ? ಗಣೇಶದೇವ-ಹೌದು. ಗಣೇಶದೇವನ ಈ ಮಾತನ್ನು ಕೇಳಿ ತಾನೇ ತನ್ನ ಕಾಲಮೇಲೆ