ಪುಟ:ಶಕ್ತಿಮಾಯಿ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧of ಕಮಕೊಡಲಿಯನ್ನು ಹಾಕಿಕೊಂಡಂತೆ ಶಕ್ತಿಗನಿಸಿತು. ಸೇಡು ತೀರಿಸಿಕೊಳ್ಳು ವ ಹವ್ಯಾಸಕ್ಕಾಗಿ, ಸುಖದಾಶ್ರಯವನ್ನು ಬಿಟ್ಟು ದುಃಖತರಂಗಗಳಲ್ಲಿ ಹಾರಿಕೊಂಡಿದ್ದಳು. ಈಗ ಆಕೆಯನ್ನು ಆ ದುಃಖದಿಂದ ಹೊರಹೊರಡಿ ಸುವದು ಯಾರಿಗೆ ತಾನೆ ಶಕ್ಷ ನವೆ? ಗಣೇಶದೇವನು ಅವಳನ್ನು ಆ ದುಃ ಖಗರ್ತದಿಂದ ಹೊರಗೆ ತೆಗೆಯಹೋದರೆ, ಅವನು ಸ್ವತಃ ಅದರಲ್ಲಿ ಮು ಣುಗಬೇಕಾಗಿತ್ತು! ಆಕೆಯನ್ನು ರಕ್ಷಿಸುವದೂ, ಆಕೆಯ ಕರ್ಮಾಭಿ ಶಾಪವನ್ನು ಖಂಡಿಸುವದೂ ಈಗ ದೇವಾಧಿದೇವತೆಗಳಿಗೂ ಅಸಾಧ್ಯ ವಾಗಿತ್ತು. ಶಕ್ತಿಗೆ ತನ್ನ ದುರವಸ್ಥೆಯು ಚೆನ್ನಾಗಿ ಲಕ್ಷದಲ್ಲಿ ಬ ರಲು, ಅವಳು ವ್ಯಾಕುಲಚಿತ್ತಳಾಗಿ-ಹಾಗಾದರೆ ಈಗ ನನಗಾವ ಉಪಾಯವೂ ಉಳಿದಿಲ್ಲವೇನು?' ಎಂದು ಕೇಳಿದಳು. ಗಣೇಶದೇವ-ನೀನು ಸ್ವತಃ ಯಾವ ಮಾರ್ಗವನ್ನು ಹಿಡಿದಿ ರುವಿಯೋ ಅದೊಂದೇ ಮಾತ್ರ ಬಾಕಿಯಿದೆ. ನೀನು ಯಾವನನ್ನು ವ ರಿಸಿರುವೆಯೋ, ಅವನ ಬಳಿಗೆ ಹೋಗು; ಪತಿಯೊಬ್ಬನೇ ಸೀಜನರ ಆ ತಸ್ಥಾನವು. ಯಾವಾತನ ಸಲುವಾಗಿ ಶಕ್ತಿಯು ಸುಖ-ಶಾಂತಿಗಳನ್ನು ತೊರೆದು ಧರ್ಮಹೀನತ್ವವನ್ನು ಕೂಡ ಹೊಂದಿದ್ದಳೋ, ಆ ಗಣೇಶ ದೇವನ ಮುಖದಿಂದಲೇ ಈ ಪ್ರಕಾರದ ಕಠೋರ ಹಾಗು ಮಮತ್ವ ವಿಲ್ಲದ ಉಪದೇಶವನ್ನು ಕೇಳಿ ಆಕೆಗೆ ಮರಣಪ್ರಾಯವಾದ ದುಃಖ ವೆನಿಸಿತು. ಹಿಂದಕ್ಕೆ ಎಷ್ಟು ಗರ್ವದಿಂದ ಅವಳು ಗಣೇಶದೇವನನ್ನು ತ್ಯಜಿಸಿ ಹೋಗಿದ್ದಳೊ, ಗಂಭಿರವಾದ ನಿರಾಶೆಯುಕ್ತ ಕಡೆಗಾಣದ ದುಃಖದ ಇಂದಿನ ಅವಧಿಯಲ್ಲಿ ಆ ಗರ್ವದ ಲೇಶವು ಕೂಡ ಅವಳಲ್ಲಿ ಉಳಿದಿರಲಿಲ್ಲ. ಆಕೆಯ ಸಂಪೂರ್ಣ ಗರ್ವವು ನಷ್ಟವಾಗಿ ಹೋಗಿ ದೃರೂ ಆ ಸಾಹಸಿಯು ಮಣಿಯಲಿಲ್ಲ. ಆದರೆ ರಾತ್ರಿಯವೇಳೆಯೆ ಲ್ಲಿ ವಿಸ್ತಾರವಾದ ಕಡಲೊಳಗೆ ಸಾಗಿದ್ದ ಚಿಕ್ಕ ನಾವು (ಹರಗೋಲು)