ಪುಟ:ಶಕ್ತಿಮಾಯಿ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿನಿಂ ಸ, ಚed4. ಆಕಸ್ಮಿಕ ಬಿರುಗಾಳಿಯಿಂದುಂಟಾದ ಭಯಂಕರ ತೆರೆಗಳಲ್ಲಿ ಸಿಕ್ಕು ದಿಗ್ಭ್ರಾಂತವಾಗಿ ಸಾ ಗು ವ೦ತೆ ಇ೦ ದು ಶಕ್ತಿಮಯಿ ಯ ಸ್ಥಿತಿಯಾಗಿತ್ತು. ಹೀಗೆ ನಷ್ಟ ಗರ್ವಿಯ, ದತಬಲಳೂ ಆದ ಆಕೆಯು-ಯಾವನನ್ನು ಪ್ರೀತಿಸುವದಿಲ್ಲವೋ; ಯಾವನಿಗೆ ನಾನು ನನ್ನ ಹೃದಯವನ್ನು (ಗುಟ್ಟನ್ನು) ಕೊಡಲಿಚ್ಛಿಸುವದಿಲ್ಲವೋ ಅವನ ಸಹವಾಸವನ್ನು ನಾನು ಮಾಡುವದಾದರೂ ಏತಕ್ಕೆ? ರಾಜಕುಮಾರ, ನನ್ನನ್ನು ಅಂಥ ಆ ಹೀನಕರ್ಮಕ್ಕೆ ಗುರಿಯಾಗಮಾಡಬೇಡ. ನೀನು ನನ್ನನ್ನು ಮದುವೆಮಾಡಿಕೊಳ್ಳದಿದ್ದರೂ, ನನಗೆ ಯಾವ ಬಗೆಯಿಂದಾ ದರೂ ಆಶ್ರಯವನ್ನು ಕೊಡಲಿಕ್ಕೆ ತಪ್ಪಬೇಡ. ಯಾವನನ್ನು ನಾನು ಮನಃಪೂರ್ವಕವಾಗಿ ಪ್ರೀತಿಸುತ್ತಿರುವೆನೋ, ಅವನ ಉಪಪತ್ನಿ (ಅ೦ ಗವಸ್ತ್ರ) ಯಾಗಿ ಜೀವಿಸಲಿಕ್ಕೂ ನನ್ನ ಒಪ್ಪಿಗೆಯದೆ; ಆದರೆ ಯಾವನಲ್ಲಿ ನನಗೆ ಪ್ರೀತಿಯೇ ಹುಟ್ಟುವದಿಲ್ಲವೋ ಅವನನ್ನು ಗಂಡನೆಂದು ಹ್ಯಾಗೆ ತಿಳಿದು ನಡೆಯಲಿ. ರಾಜಕುಮಾರ, ಸಮಾಜದವರು ಏನೇ ಅನ್ನಲಿ; ದೇವರ ಕಣ್ಣಿಗೆ ಸೀನು ಖಂಡಿತವಾಗಿ ಅಪರಾಧಿಯೆಂದು ತೋರಲಾರೆ. ಆದ್ದರಿಂದ ನನಗೆ ಆಶ್ರಯವನ್ನು ಕೊಡು, ನನ್ನನ್ನು ಹೀಗೆ ನಡನೀರಲ್ಲಿ ಬಿಡಬೇಡ, ಎಂದು ಬಿಕ್ಕಿ ಬಿಕ್ಕಿ ಅಳುತ್ತ ಹೇಳಿಕೊಂಡಳು. ಶಕ್ತಿಯ ಆ ಮರ್ಮೋದ್ಘಾಟಿತ ಭಾಷಣವನ್ನು ಕೇಳಿ ಗಣೇ ಶದೇವನು ಕಿಂ ಕರ್ತವ್ಯ ಮರತನಾದನು. ತುಸು ಹೊತ್ತಿನ ಮೇಲೆ ಅವನು-ಶಕ್ತಿ, ನೀನು ನೂರಾರು ರಗಳೆಗಳನ್ನು ತೋಡಿಕೊಂಡರೂ ನಾನು ನಿನಗೆ ಆಶ್ರಯವನ್ನು ಕೊಡಲಿಚ್ಛಿಸುವದಿಲ್ಲ. ನೀನು ನನ್ನ ದೇಹದೊಳಗಿನ ಪ್ರಾಣವನ್ನು ಹೀರಿಕೊಂಡರೂ ನಿನ್ನನ್ನು ನನ್ನವಳ ನ್ನಾಗಿ ಮಾಡಿಕೊಳ್ಳಲಿಕ್ಕಿಲ್ಲ. ಯಾಕಂದರೆ ನೀನು ಭಯಂಕರ ಅಕ ರ್ತಮ್ಮ, ಅನ್ಯಾಯ ಹಾಗು ಪಾಪಣಜಿಗಣೆಯನ್ನು ಮಾಡಿರು; ಈಗ ನೀನು ಬೇರೊಬ್ಬನ ಮದುವೆಯ ಹೆಂಡತಿಯಾಗಿರುವೆ. ಆದದರಿಂ