ಪುಟ:ಶಕ್ತಿಮಾಯಿ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ೧೧೧ ದ ನಿನ್ನ ಮಾತಿನಂತೆ ನಾನು ಈಗ ನಿನಗೆ ನಿನ್ನ ಸ್ವಾಮಿಯ ಆಶ್ರಯ ವನ್ನು ತಪ್ಪಿಸಿ ನ ನ್ನ ಆ ಶ್ರ ಧ ದಲ್ಲಿ 5 ಸಿ ದ ರೆ, ನಿನ್ನ ಸತಿ ತ್ವ ಧರ್ಮವು ನಷ್ಟವಾಗುವದು; ಹಾಗು ನಾನೂ ಅಧರ್ಮಿಯಾಗಬೇ ಕಾಗುವದು. ಯಾವ ಪ್ರೇಮವು ಧರ್ಮ ಬಂಧನಕ್ಕೆ ವಿರುದ್ಧವಾಗಿ ರುವದೋ, ಆ ಪ್ರೇಮ ಸಂಯೋಗವು ಅಶುದ್ಧ ಹಾಗು ತ್ಯಾಜ್ಯ ವಾ ಗಿರುತ್ತದೆ. ನೀನು ಗಾಯಸುದ್ವೀನನ್ನು ನಿನ್ನ ಇಚ್ಛಾ ಬಲದಿಂದ ಲೇ ವರಿಸಿರುತ್ತೀ, ಅವನು ಬಲವೂರ್ವಕವಾಗಿ ನಿನ್ನನ್ನು ಅಪಹರಿಸಿ ಮದುವೆಮಾಡಿಕೊಂಡಿರುವದಿಲ್ಲ. ಆದದರಿಂದ ಹ್ಯಾಗೆ ನಾನು ಆ ನಿನ್ನ ಲಗ್ನದ ಗಂಡನ ಅಧಿಕಾರವನ್ನು ತಪ್ಪಿಸಿ ನಿನ್ನನ್ನು ಸ್ವೀಕರಿಸುವದು? ಪತಿಯೇ ಸತಿಯರ ಪರಮ ಗುರುವು, ದೇವತೆಯು, ಧರ್ಮವು ಯಾವಾತನನ್ನು ಗಂಡನೆಂದು ವರಿಸಿರುವಿಯೇ, ಆತನಿಗೇ ಅನನ್ಯ ಗತಿಕತ್ವದಿಂದ ಆತ್ಮವನ್ನು ಸಮರ್ಪಿಸಿ ಸುಖವನ್ನು ಪಡೆ. ಭಗವಂತನಾದರೂ ಆ ನಿನ್ನ ಏಕ ನಿಷ್ಟೆಗೆ ಸಂತುಷ್ಟನಾಗಿ ನಿನ್ನ ಎಲ್ಲ ಶುಭ ಇದ್ರೆಗಳನ್ನು ಪೂರೈಸಿ ಕೊಡುವನು. ಧರ್ಮವೂ ನಿನಗೆ ಸಹಾಯಕವಾಗುವದು.' ಎಂದು ಸ್ಪಷ್ಟವಾಗಿ ತಿಳಿಸಿಬಿಟ್ಟನು, ಗಣೇಶದೇವನ ಈ ಬೋಧವನ್ನು ಸ್ಥಿರವಾಗಿ ನಿಂತು ಕೇಳು ವಷ್ಟು ಸಹನ ಶೀಲತ್ವವು ಹುಟ್ಟಾ ಹಂಚಲ ಸ್ವಭಾವವುಳ್ಳ ಆ ಶಕ್ತಿ ಗೆಲ್ಲಿಂದ ಬರಬೇಕು? ರಾಜನ ಸದುಪದೇಶವೂ, ಅವನ ಹಿತಗೊ ಮಿಗಳೂ ಅವಳಿಗೆ ಕೊಂಚವೂ ರುಚಿಸಲಿಲ್ಲ. ಕುಮಾರನ ಪ್ರತಿ ಯೊಂದು ಶಬ್ದವು ಶಕ್ತಿಗೆ ಪ್ರೇಮನ ಹಾಗು ಕಠೋರವಾಗಿ ತೊಡೀ ರಿ ಅದು ಅವಳ ಹೃದಯಕ್ಕೆ ವಜ್ರದಂಡದಿಂದ ಆಘಾತ ಮಾಡು ವಂತೆ ಒಂದೇಸವನೆ ಕಟಿಯಹತ್ತಿತುಮಾತ್ರ, ಹೀಗೆ ಅಸಹ್ಯ ಪೆಟ್ಟುಗಳಿಂದ ಅವಳ ಹೃದಯವು ಭಿನ್ನ ಭಿನ್ನವಾಗಲು ಅವಳ ಅಪಮಾ ನ ವ್ಯಥೆಯು ಪುನಃ ಜಾಗ್ರತವಾಯಿತು. ವಿಚಿವಾದ ಪ್ರೇಮಕ್ಕಾಗಿ