ಪುಟ:ಶಕ್ತಿಮಾಯಿ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಸೆ, ಚಂದ್ರಿ. ಆತ್ಮವನ್ನು ಕೂಡ ವಿಸರ್ಜನೆ ಮಾಡಿಕೊಳ್ಳಲು ಸಿದ್ಧಳಾಗಿದ್ದ ಅವ ಳ ಸ್ಥಿತಿಯನ್ನು ಲಕ್ಷಕ್ಕೆ ತರದೆ ಕುಮಾರನು ಅವಳನ್ನು ತುಚ್ಛವೆಂ ದು ತಿರಸ್ಕರಿಸಿದನು. ಅದು೦ದ ಅವಳ ಮರ್ಮಭೇದವಾಯಿತು. ಸ್ತ್ರೀಯರು ಎಂಥ ದುಃಖವನ್ನಾದರೂ ಸಹಿಸಬಲ್ಲರು; ಆದರೆ ಮರ್ಮ ಭೇದವಾಗುವ ಪ್ರಸಂಗ ಬಂದಾಗ ಮಾತ್ರ ಅವರು ಅದನ್ನೆಂದೂ ಸಹಿ ಸರು. ಅದರಂತೆ ಶಕ್ತಿಯ ಮರ್ಮಭೇದವಾಗಲು ಅವಳಲ್ಲಿ ಮತ್ತೆ ಸೇಡು ತೀರಿಸಿಕೊಳ್ಳುವ ಹವ್ಯಾಸವು ಉತ್ಪನ್ನವಾಯಿತು. ಅದರಿಂದ ಅವಳಲ್ಲಿ ಪುನಃ ಗರ್ವವುಂಟಾಗಲು, ಅವಳ ಕಣ್ಣುಗಳಿಂದ ಒಂದೇ ಸವನೆ ಉದುರುತ್ತಿದ್ದ ದುಃಖಾಶ್ರಗಳು ಒಮ್ಮೆಲೆ ಕಟ್ಟಾ ದವು; ಮು ಖವು ಮಿಗಿಲಾದ ಗಾಂಭೀರ್ಯದಿಂದ ಶೋಭಿಸಹತ್ತಿತು. ಆಗ ಅ ವಳು ಗಣೇಶದೇವನನ್ನು ಕುರಿತು “ಗಣೇಶದೇವ, ನಾನು ವ್ಯಭಿಚಾರಿಣಿಯಾದ ಹೆಂಗಸಲ್ಲ; ಆತ್ಮ ಸನ್ಮಾನ ಹಾಗು ಸತೀತ್ವ ಇವುಗಳ ರಕ್ಷಣಕ್ಕಾಗಿಯೇ ನಿನ್ನ ಆಶ್ರಯ ವನ್ನು ಪಡೆಯಲು ಇಲ್ಲಿಗೆ ಬಂದಿದ್ದೆನು; ನಿನ್ನ ಬಳಿಗೆ ದೇಹವನ್ನು ವಿ ಕ್ರಯಮಾಡುವದಕ್ಕಾಗಿ ನಾನು ಬಂದಿರುವದಿಲ್ಲ. ಆದರೆ ಸಂಸಾರ ವನ್ನು ಸನ್ಮಾನ ಪೂರ್ವಕವಾಗಿ ಮಡುವದಕ್ಕಿಂತ ಸಮಾಜಬಂಧಸವೇ ನಿನಗೆ ಹೆಚ್ಚು ಆದರ್ಶವಸ್ತುವಾಗಿ ತೋರುವದರಿಂದ ನೀನು ಹಾಗೆಯೇ ಮಾಡು. ನಾನೂ ನನ್ನ ಹೃದಯ ಧರ್ಮವನ್ನು ತ್ಯಜಿಸಿ, ಸಮಾಜ ಧರ್ಮವನ್ನು ಪಾಲಿಸುವಕ್ಕಾಗಿ ಹೊರಟು ಹೋಗುತ್ತೇನೆ. ಈಗ ನೀನು ಯಾವ ಪಾಪಕ್ಕಾಗಿ ನನ್ನನ್ನು ಬಾಧ್ಯಳನ್ನಾಗಿ ಮಾಡುತ್ತಿರು ವೆಯೋ, ಆ ಪಾಪವು ನಿನ್ನ ಪಾಲಿಗೇ ಬರುವದು!?? ಈ ಪ್ರಕಾರ ಮಾತಾಡಿ, ಅವಳು ಅಲ್ಲಿಂದ ಒಮ್ಮೆಲೆ ನಡಿದು ಬಿ ಟ್ಟಳು. ರಾಜನು ಎಷ್ಟೋ ಹೊತ್ತಿನ ವರೆಗೆ ಆ ಪುಷ್ಕರಿಣಿಯ ದಂಡೆಯಲ್ಲಿ ಸ್ತಬ್ಧನಾಗಿ ನಿಂತುಬಿಟ್ಟನು.