ಪುಟ:ಶಕ್ತಿಮಾಯಿ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಶ, ಚಂದ್ರ, ರದಲ್ಲಿ ಅವನಿಗೆ ಕಡ್ರಲಿಕ್ಕೆ ಕೂಡ ಹೇಳಲಿಲ್ಲ. ಹೀಗಾಗಲಿಕ್ಕೆ ಕಾರಣವೇನಂದರೆ, ಗಣೇಶದೇವನು ಬಾದಶಹನ ಸಭೆಗೆ ಬಂದ ಕೂ ಡಿ ಸುಲ್ತಾನನಿಗೆ ನೆಲಮುಟ್ಟಿ ಸಲಾಮು ಮಾಡಲಿಲ್ಲ. ಅವನು ಉನ್ನತ ಮಸ್ತಕದಿಂದಲೇ (ಮಿತ್ರಭಾವದಿಂದಲೇ) ಬಾದಶಹನನ್ನು ಅಭಿನಂದಿಸಿದನು. ಅದು ದುರಭಿಮಾನಿಯಾದ ಆ ವೃದ್ದ ಯವನ ಬಾದಶಹನಿಗೆ ಸಹನವಾಗಲಿಲ್ಲ. ತಾನು ಬಾದಶಹನಿದ್ದು ತನ್ನೊ ಡನೆ ಯಾವ ಸಾಮಾನ್ಯ ಮನುಷ್ಯನು ಎಂದೂ ಈ ಪರಿ ಉದ್ಧಟ ನಾಗಿ ನಡೆಯದಿದ್ದವನು, ಈ ದಿವಸ ತನ್ನ ಇ೦ಧ ಕಡುವಿಪತ್ತಿನ ಪ್ರಸಂ ಗದಲ್ಲಿ ಹೀಗೆ ಅಮರ್ಯಾದೆಯಿಂದ ನಡೆದದ್ದು ಆ ಸುಲ್ತಾನನಿಗೆ ಹ್ಯಾಗೆ ಸಹನವಾಗಬೇಕು? ಅದರಿಂದ ಅವನು ಮನಸ್ಸಿನಲ್ಲಿ ಬಹ ಛವಾಗಿ ನೊಂದುಕೊಂಡನು; ಹಾಗು ಅದರ ಸೇಡು ತೀರಿಸಿಕೊಳ್ಳುವ ದಕ್ಕಾಗಿ ಅವನು ಗಣೇಶದೇವನಿಗೆ ದರ್ಬಾರದಲ್ಲಿ ಕೂಡ್ರಲಿಕ್ಕೆ ಸಹ ಹೇಳದೆ, ಹಾಗೆಯೇ ನಿಲ್ಲಿಸಿಬಿಟ್ಟನು. ಬಾದಶಹನ ಈ ಅಯೋಗ್ಯಾ ಚರಣೆಗಾಗಿ ಸಭಾಸದರೆಲ್ಲರೂ ಮನಸ್ಸಿನಲ್ಲಿ ಅತಿಶಯವಾಗಿ ವಿಷಾದ ಪಡಹತ್ತಿದರು. ಆದರೆ ಯಾರೂ ಸಿಟ್ಟಿಂದು ಮಾತಾಡರು, ಬಿರು ಗಾಳಿಯು ಬಿಡುವ ಮೊದಲು ಹ್ಯಾಗೆ ಎಲ್ಲ ಕಡೆಯ ಹವೆಯಲ್ಲಿ ನಿಸ್ತಬ್ಧವಿರುತ್ತದೆಯೋ ಹಾಗೆ ಆ ಸಭಾಮಂದಿರವೆಲ್ಲ ಸ್ವಬ್ದವಾಗಿ ಹೋಗಿತ್ತು, ಕೆಲಹೊತ್ತಿನ ಮೇಲೆ ಬಾದಶಹನು ಕ್ರೋಧಪೂರ್ಣ ಗಂಭೀರದನಿಯಿಂದ-ಗಣೇಶದೇವ, ನೀನು ಏನನ್ನು ಬಯಸುವೆ? ಎಂದು ಕೇಳಿದನು. ಗಣೇಶದೇವನು ಸಭೆಗೆ ಬಂದೊಡನೆಯೇ ಇಂದಿನ ಲಕ್ಷಣವು ಚೆನ್ನಾಗಿಲ್ಲವೆಂದು ಅನುಮಾನಿಸಿದ್ದನು. ಅದರಂತೆ ಬಾದಶಹನ ಆ ವ್ಯವಹಾರದಿಂದ ಸಂಧಿಭಂಗದ ಸೂಚನೆಗಳೂ ವ್ಯಕ್ತವಾಗಿದ್ದವು, ಆಗ ಅವನು-ನಾನು ಏನು ಇಚ್ಛಿಸುತ್ತಿರುವೆನೆಂಬದನ್ನು ಈ ಮೊದ