ಪುಟ:ಶಕ್ತಿಮಾಯಿ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fy ಸ, ಚಂದ್ರ, ದರೂ ಜೀವದಿಂದಿರುವನೋ ಅಲ್ಲಿಯ ವರೆಗೆ ಅವರು ತಮ್ಮ ರಾಜನ ಬಂಧವಿಮೋಚನದ ಸಲುವಾಗಿ ಕಾದದೆ ಇರಲಾರರು. ಇಷ್ಟೇ ಅಲ್ಲ ಸುಲ್ತಾನ, ಸಾಹೇಬುದ್ದೀನನು ಶತ್ರುಗಳ ಆಧೀನದಲ್ಲಿರುವನಷ್ಟೇ? ಅವಸ ಬಿಡುಗಡೆಯ ವಿಷಯವಾಗಿ ನೀನಾವ ಉಪಾಯವನ್ನು ಮಾಡಿದ್ದೀಯೆ? ಗಣೇಶದೇವನನ್ನು ಸೆರೆಹಿಡಿದ ಸುದ್ದಿಯು ದಿನಾಜಪುರಕ್ಕೆ ಮುಟ್ಟಿದರೆ ಅಲ್ಲಿಯವರು ಸಾಹೇಬುದ್ದೀನನನ್ನು ಕೊಂದುಬಿಡುವರಲ್ಲ! ಬಾದಶಹ-ಗಣೇಶದೇವನ ಸಂಗಡ ಬಂದಿದ್ದ ಎಲ್ಲ ಸೈನಿಕರೂ ನಮ್ಮಿಂದ ಪ್ರತಿಬಂಧದಲ್ಲಿರಿಸಲ್ಪಟ್ಟಿದ್ದಾರೆ. ಅದರಿಂದ ಈಗಲೇ ಈ ಸುದ್ದಿಯು ಗಣೇಶದೇವನ ಶಿಬಿರಕ್ಕೆ ಮುಟ್ಟಲಾರದು. ಆದ್ದರಿಂದ ಅಷ್ಟರಲ್ಲಿ ನೀನು ಸಾಹೇಬುದ್ದೀನನನ್ನು ಬಿಡಿಸಿಕೊಂಡು ಬರುವ ಹಂಚಿಕೆಯನ್ನು ಮಾಡು. ಮಂತ್ರಿ-ಜಹಾಂಪನಾ, ತಮ್ಮ ಹುಕುಮನ್ನು ಇನ್ನು ಮ ನ್ನಿಸುವರಾರು? ನನ್ನ ಮಾತನ್ನು ಕೇಳಿಕೊಂಡು ನಿನ್ನ ಸ್ವಂತದ ಹಿತ ವನ್ನು ಸಾಧಿಸಿಕೋ, ಆಜೀಮಖಾನನನ್ನು ಈಗಲೆ ಬಂಧಮುಕ್ತ ಮಾಡು; ಗಣೇಶದೇವನೊಡನೆ ಬಂಧುಪ್ರೇಮದಿಂದ ನಡೆ. ಹೀಗೆ ಮಾಡದಿದ್ದರೆ ನಿನ್ನ ಸರ್ವಸ್ವವು ನಾಶವಾಗುವದು ಖಂಡಿತ. ಸುತ್ತು ನ ನಿನಗೆ ದೆವ್ವ-ಗಿವ್ವ ಬಡಿದದೆಯೆಂಬಂತೆ ಕಾಣುತ್ತದೆ!

  • ಇದನ್ನು ಕೇಳಿ ಬಾದಶಹನು ಅತ್ಯಂತ ಸಿಟ್ಟಿನಿಂದ-ನೀನೇ ನನಗೆ ಬಡಕೊಂಡಿರುವ ದೆವ್ವವು. ನಿನ್ನ ಮಗನಾದ ಕುತುಬನು ಗಾಯ ಸುದ್ದೀನನ ಯುಕ್ತಿಗಾರನಲ್ಲವೆ? ಕುತುಬನ ಸಂಗತಿಯಿಂದ ಗಾಯ' ಸುದ್ದೀನನು ವಿಪತ್ತಿಗೆ ಗುರಿಯಾಗಿರಲು, ಆ ಕುತುಬನ ತಂದೆಯಾದ ನಿನ್ನ ಸಹವಾಸದಿಂದ ನನಗಿಂಥ ವಿಪತ್ತು ಬಂದದ್ದರಲ್ಲಿಸೋಜಿಗವೇನು?

ಮಂತ್ರಿ-ಕುತುಬನು ಅಂಥ ಕಿಡಿಗೇಡಿಯಂತೇ ಆತನನ್ನು ನಾನು ತ್ಯಜಿಸಿರುವೆನಷ್ಟೇ?