ಪುಟ:ಶಕ್ತಿಮಾಯಿ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ಗಿ ಬಾದಶಹನೀನು ಅವನನ್ನು ಹೊರದೂಡಿದ್ದರೂ, ಅವನಿಂದ ನನಗಾದ ಹಾನಿಯ ಪ್ರಮಾಣವು ಕೊಂಚವೂ ಕಡಿಮೆಯಾಗಿಲ್ಲ. ನನಗೆ ಹೀಗೆ ತಿಳಿದಿದೆಯಲ್ಲ, ಆಜೇಮಖಾನನು ಗುಪ್ತಭಾವದಿಂದ ಕುತುಬ ನನ್ನು ಕೂಡಿಕೊಂಡಿರುವದರಿಂದಲೇ ನನ್ನ ಸರ್ವನಾಶವಾಗುತ್ತಲಿದೆ. ಇಲ್ಲದಿದ್ದರೆ ನನ್ನೆದುರಿಗೆ ಇಷ್ಟು ದಿವಸಗಳವರೆಗೆ ನಿಂತು ಕಾದಲು ಅದಾವ ಶತ್ರುವು ಸಮರ್ಥನಾಗುವನು? ಮಂತ್ರಿ-ಶೋಬಾ! ತೋಬಾ!! ಇದೆಂಥ ಅಪನಂಬಿಗೆಯು? “ನೀನೂ ಗಾಯಸುದ್ದೀನನ ಪಕ್ಷದವನೇ ಎಂದು ನೀನು ಎಂದಾ ದರೂ ನನಗೂ ಅನ್ನಲಿಕ್ಕೆ ಹೇಸುವಂತೆ ತೋರುವದಿಲ್ಲ. ಬಾದಶಹ-ಸದ್ಯಕ್ಕೆ ನನಗೆ ಅದೇ ಅನುಮಾನವಿದೆ. ಹಾಗಿ ಇದೆ ನೀನು ನಿರ್ದೋಷಿಯೇ ಆಗಿದ್ದರೆ, ನಾನು ಏನಂದಿದ್ದರೂ ನಿನಗೆ ಹೀಗೆ ಸಿಟ್ಟು ಯಾಕೆ ಬರುತ್ತಿತ್ತು? ದರವೇಶ [ಮುಸಲ್ಮಾನ]ಧರ್ಮದವನೂ, ಹಣ್ಣಾದ ಮುದುಕ ನೂ, ಕೇವಲ ಸಾಧು ಸ್ವಭಾವದವನೂ ಆದ ಆ ವೃದ್ಧಿ ಮಂತ್ರಿಯು ಬಾದಶಹನ ಬಾಯಿಂದ ಹೊರಟ ಆ ನಿಂದ್ಯ ಶಬ್ದಗಳನ್ನು ಕೇಳಿ ಸಕ್ರೋಧದಿಂದ-'ಸುಲ್ತಾನ, ಸಾಕು, ನಿನ್ನ ಅಭದ್ರ ಮಾತುಗಳ ನ್ನು ಸಾಕುಮಾಡು. ನಾನು ಈಗಲೇ ಹೊರಟು ಹೋಗುತ್ತೇನೆ, ದೇವರೇ ನಿನಗೆ ಈ ದುರ್ಬುದ್ಧಿಯನ್ನು ಕೊಟ್ಟಿರುತ್ತಾನೆ. ಅ೦ದ ಮೇಲೆ ನೀನಾದರೂ ಮಾಡುವದೇನು? ಇಂದಿನಿಂದ ನಾನು ನಿನ್ನ ಈ ಮಂತ್ರಿ ಪದದ ಚಾಕರಿಯನ್ನು ಬಿಟ್ಟು ಬಿಟ್ಟಿರುತ್ತೇನೆ. ಆದರೆ ಕಟ್ಟ ಕಡೆಗೆ ನಿನಗೆ ನಾನು ತಿಳಿಸಿಡುವದೇನಂದರೆ -ನೀನು ಈ ಯುದ್ಧವನ್ನು ಜಯಿಸಲಾರೆ! ದರ್ಬಾರದವರೆಲ್ಲರೂ ರಾಜನ ಅತ್ಯಾಚಾರದ ಬಗ್ಗೆ ಅತ್ಯಂತ ಕ್ಷುಬ್ಬರಾದ್ದರಿಂದ ಅವರಲ್ಲಾವನೂ ಮಂತ್ರಿಯನ್ನು ತಡೆದು ನಿಲ್ಲಿಸಲಿ