ಪುಟ:ಶಕ್ತಿಮಾಯಿ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 ಕಾಮ. ಬಾದಶಹನು ಸಿಟ್ಟಿನಿಂದ ಕಣ್ಣುಗಳನ್ನು ಕೆಂಡದಂತೆ ಮಾಡಿ ಹೋಗು, ಈಗಲೆ ಬಂಧಮುಕ್ತ ಮಾಡಿ ಅವನನ್ನು ಇಲ್ಲಿಗೆ ಕರ ಕೊಂಡು ಬಾ ಎಂದು ಆಜ್ಞಾಪಿಸಿದನು. ಕಡಲೆ ಕರೀಮನು ಹೊರಟು ಹೋದನು. ಆದರೆ ಕೆಲ ಹೊತ್ತಿನಲ್ಲಿ ಅವನು ತಿರುಗಿ ಬಂದು ಮ್ಯಾನ ಮುಖದಿಂದ ನುಡಿದನೇ ನಂದರೆ-ಜಹಾಂಪನಾ, ಆಜೀಮಖಾನನು ತುರಂಗದೊಳಗಿಂದ ಓಡಿ ಹೋಗಿರುವನು. ಬಾದಶಹಓಡಿಹೋಗಿರುವನೇ? : ಕರೀಮ-ಹೌದು, ನಿಶ್ಚಯವಾಗಿ ಹೋಗಿರುವನು. ಬಾದಶಹ-ಎಲ್ಲಿಗೆ ಹೋದನು? ಕರೀಮ-ನವಾಬ ಗಾಯಸುದ್ದೀನನ ಶಿಬಿರಕ್ಕೆ ಹೋದನಂ ದು ತಿಳಿಯುತ್ತದೆ. ಆಗ ದರ್ಬಾರದ ಜನರೆಲ್ಲರೂ ಬಹಳ ಹಳಹಳಿಸಹತ್ತಿದರು. ಬಾದಶಹನೂ ಈ ವಾರ್ತೆಯನ್ನು ಕೇಳಿ ಅಸಮಾಧಾನ ತಾಳಿದನು. ಬಳಿಕ ಅವನು ಕರೀಮನಿಗೆ-ಹಾಗಾದರೆ, ಗಣೇಶದೇವನನ್ನು ಕರೆದು ಕೊಂಡು ಬಾ, ಎಂದು ಹೇಳಿದನು. ಅವನೂ ಪಲಾಯನ ಮಾಡಿರುವನು?' ಎಂಬ ಉತ್ತರವನ್ನು ಕರೀಮನು ಕೊಟ್ಟದ್ದನ್ನು ಕೇಳಿ, ಬಾದಶಹನು ಭ್ರಾಂತಿಗೊಂಡು 'ಮಂತ್ರೀ ಮಂತ್ರಿ; ಈಗಾನ ಹಂಚಿಕೆಯನ್ನು ಹೇಳುತ್ತೀ ಹೇಳು ನೋಡುವಾ' ಎನ್ನಲು, ಸಭಿಕರು ಇನ್ನೆಲ್ಲಿಯ ಮಂತ್ರಿಯು? ಅವನೂ ಗಾಯಸು ದ್ವೀನನ ಪರಾಮರ್ಶದಾರ್ತೃವೇ ಆಗಿರುತ್ತಾನೆಂದು ಕೇಳುತ್ತೇವೆ, ಎಂದು ಉತ್ತರಕೊಟ್ಟರು! ಈ ವರೆಗೆ ಹಾಗೂ ಹೀಗೂ ಶೀತಲವಾಗಿದ್ದ ಸುಲ್ತಾನನ ದೇಹ