ಪುಟ:ಶಕ್ತಿಮಾಯಿ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ -- -- - - ೧೨೩ - ದಿನ ಬಾದಶಹನ ಮರ್ಮಕ್ಕೆ ಏಟು ತಾಕಿ, ಅವನು ನೆಲಕ್ಕೆ ಬಿದ್ದನು. ಅವನ ಮೃತ ದೇಹವು ಪೂರ್ವದಿಂದಲೇ ಸಿದ್ಧಪಡಿಸಿದ್ದ ಆದಿನಾ ಮಸೀದೆಯವಿಕಾಂತಸ್ಥಳದಲ್ಲಿರಿಸಿ ಮೇಲೆ ಗೋಲಿ ಕಟ್ಟಲ್ಪಟ್ಟಿತು, ಅವ ನ ತರುವಾಯ ಅವನ ಹಿರಿಯ ಮಗನಾದ ಗಾಯಸುದ್ದೀನನೇ ಅವನ ರಾಜ್ಯಾಧಿಕಾರಿಯಾದನು. ಈ ಮೊದಲು ಪುಷ್ಕರಿಣಿ ದಂಡೆಯಲ್ಲಿ ಗರ್ಣೇಶದೇವನಿಂದ ಅಪಮಾನ ಹೊಂದಿ ಪುನಃ ಸೇಡು ತೀರಿಸಿಕೊಳ್ಳುವ ಹವ್ಯಾಸವನ್ನು ತಾಳಿದ್ದ ಶಕ್ತಿಮಯಿಯು ಈಗ ಯುದ್ಧವು ಸಮಾಪ್ತವಾಗಲು ತನ್ನ ವಚನದಂತೆ ಗಾಯಸುದ್ದೀನನ ಮುಟ್ಟ ರಾಣಿಯಾದಳು; ಹಾಗು ಅಂದಿನಿಂದಲೇ ಅವಳು ಆತನ ಶಯ್ಯಾ ಭಾಗಿನಿಯಾದಳು. ಹದಿಮೂರನೆಯ ಪ್ರಕರಣ:-ಪುನರ್ಯುದ್ದ. ಸಿ: ದಿನಾಜವುರವು ಈಗ ಕೇವಲ ಶಾಂತಿಯ ಸಾಮ್ರಾಜ್ಯ ವಾಗಿತ್ತು. ಸುಲ್ತಾನ ಸಿಕಂದರ ಶಯನ ಜೀವಿತದ ಸಂಗಡಲೇ ಗಣೇಶದೇ ವನ ವಿದ್ರೋಹಿತೆಯು ನಾಮಶೇಷವಾಗಿತ್ತು. ಬಂಗಾಲದ ನೂತನ ರಾಜನಾದ ಗಾಯಸುದ್ದೀನನ ಕೂಡ ಈಗ ಗಣೇಶದೇವನ ವೈರತ್ವ ವಿದ್ದಿಲ್ಲ. ಅವರಲ್ಲಿ ಪರಸ್ಪರ ಒಳ್ಳೆ ಮಿತ್ರಭಾವವಿತ್ತು. ಆದ್ದರಿಂದ ಗಣೇಶದೇವನು ನಿಶ್ಚಿಂತನಾಗಿ ತನ್ನ ರಾಜ್ಯದ ಉತ್ಕರ್ಷವನ್ನು ಮಾಡು ವದರಲ್ಲಿ ನಿಮಗ್ನನಾಗಿದ್ದನು. ಯುದ್ಧ ಕಾಲದಲ್ಲಿ ಶತ್ರುಗಳಿಂದ ತನ್ನ ರಾಜ್ಯದಲ್ಲಿಯ ಯಾವ ಯಾವ ಊರು ಕೇರಿಗಳು, ಮನೆ-ಮಾ ರುಗಳು ಭಗ್ನಗಳಾಗಿದ್ದವೋ ಅವುಗಳನ್ನೆಲ್ಲ ಸರಿಪಡಿಸುತ್ತ, ಅಲ್ಲಲ್ಲಿ ವಿಶಾಲವಾದ ನೂತನ ಮಾರ್ಗಗಳನ್ನೂ, ಭವ್ಯವಾದ ಮಂದಿರಗಳನ್ನೂ ಹೊಸ ಹೊಸ ಉದ್ಯಾನಗಳನ್ನೂ ನಿರ್ಮಾಣ ಮಾಡಿಸುತ್ತ ನಡೆದಿ