ಪುಟ:ಶಕ್ತಿಮಾಯಿ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಶಕ್ತಿಶಯೋ, ೨f ಬರೇ ತಮ್ಮ ಸಾಮರ್ಥ್ಯದ ಕಡೆಗೆ ಲಕ್ಷ್ಯಗೊಟ್ಟು ಅವರು ಸುಮ್ಮನೆ ಕುಳಿತರೆ ಆ ನಿರಪರಾಧ ವ್ಯಕ್ತಿಯ ಹಿಂಸೆಯನ್ನು ನೋಡಿದ ವಾತ ಕವು ಅವರಿಗೆ ತಪ್ಪದಲ್ಲದೆ, ಅವರ ಮನುಷ್ಯತ್ವಕ್ಕೂ ಬಾಧೆಬರುತ್ತದೆ. ಮನುಷ್ಯನ ಅಂತವು ಒಂದಿಲ್ಲೊಂದು ದಿವಸ ಆಗೇ ಆಗುವದು; ಅ೦ದ ಮೇಲೆ ಪರೋಪಕಾರಾದಿ ಸತ್ಕರ್ಮಗಳ ಸಲುವಾಗಿ ಈ ನಶ್ವರ ದೇ ಹವು ಬಿದ್ದು ಹೋದರೆ ತಪ್ಪೇನು? ಇನ್ನು ಅಪರಾಧಿಯಾದ ಒಬ್ಬ ಸಾಮರ್ಥ್ಯವಾನ್ ವ್ಯಕ್ತಿಯನ್ನು ದಂಡಿಸ ಹೋದರೆ, ಎಷ್ಟೋಜನ ನಿರಪರಾಧಿ ಪ್ರಾಣಿಗಳು ದಂಡಣೆಗೆ ಗುರಿಯಾಗುತ್ತಾರೆ ಆದರೆ ಅವರ ಕಡೆಗೆ ನೋಡಿ ಆ ನೀಚನನ್ನು ದಂಡಿಸದೆ ಇರುವದೂ ಧರ್ಮ ವಲ್ಲ. ಮಾನವನು ಸರ್ವಜ್ಞನಲ್ಲ. ವಿಚಾರಪೂರ್ವಕವಾಗಿ ಅವನು ಹಿತದ ಕೆಲಸಗಳಿಗೇ ತೊಡಗುತ್ತಾನೆ. ಆದರೆ ಭವಿಷ್ಯತ್ಕಾಲದಲ್ಲಿ ಅದರಿಂದ ನಿಜವಾಗಿ ಹಿತವೇ ಆದೀತೆಂಬದನ್ನು ಯಾರು ಹೇಳಬೇಕು? ಬರೇ ಜಿಜ್ಞಾಸೆ ಮಾಡುತ್ತ ಅವನು ಕರ್ತವ್ಯವನ್ನು ಮರೆಯಬಹುದೆ? ವಿಚಾರಪೂರ್ವಕ ಕೆಲಸವನ್ನು ಕೈಕೊಳ್ಳುವದು ವಿಹಿತಮಾರ್ಗವು, ಆದ ರೆ ಎಷ್ಟೋ ಪ್ರಸಂಗಗಳಲ್ಲಿ ಪುನಃ ಪುನಃ ವಿಚಾರಮಾಡುತ್ತ ಕೂಡ ವಡರಿಂದ ಕಾರ್ಯಕ್ಕೆ ಹಾನಿಯುಂಟಾಗುತ್ತದೆ, ಬಹುವಿಕಾರವೂರ್ವ ಈ ಶುಭ ಕಾರ್ಯವನ್ನು ಮಾಡಹೋದರೂ ಪರಿಣಾಮದಲ್ಲಿ ಅದು ಅಶುಭದಾಯಕವೇ ಆಗುವದು. ಆದ್ದರಿಂದ ಸಮಯಾಸಮಯಗ ಇನ್ನೂ ಪಾತ್ರಾಪಾತ್ರತೆಗಳನ್ನೂ ತಿಳಿದು ವಿಹಿತ ಕರ್ಮವೆಸಗುವದು ಮನುಷ್ಯನ ಇತಿ ಕರ್ತವ್ಯವಾಗಿರುತ್ತದೆ. ಮನುಷ್ಯತ್ವದ ರಕ್ಷಣೆ ಗಾಗಿಯೇ ಮಾನವನ ಜನ್ಮವು, ಮನುಷ್ಯತ್ವವನ್ನೇ ಬಿಟ್ಟು ನಡೆಯ ಹತ್ತಿದ ಬಳಿಕ ಪಶ್ವಾದಿಗಳಿಗಿಂತ ಅವನಲ್ಲಿ ಯಾವ ಶ್ರೇಷ್ಠ ಗುಣವಿ ದಂತಾಯಿತು? ಒಂದುಕ್ಷುದ್ರ ಮುಳ್ಳನ್ನು ತೆಗೆದು ಹಾಕುವುದಕ್ಕಾಗಿ ಹುಡ್ಡಿನಗು, ಅಂಗಾಲನ್ನು ತೋಡಬೇಕಾಗುತ್ತದೆ; ಒಂದು ಹಣ್ಣು ಆ