ಪುಟ:ಶಕ್ತಿಮಾಯಿ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩.೨ ಸ, ಚಂದ್ರಿಕೆ ಇಡಿ ದೇಶವನ್ನೇ ಸುಟ್ಟು, ಸೂರೆ ಮಾಡಿದ ಹಾಗಾಗಬಹುದು. ಒಬ್ಬಾನೊಬ್ಬ ಮನುಷ್ಯನ ಸಲುವಾಗಿ ಸಾವಿರಾರು ಜನ ನಿರಪರಾ ಧಿಪ್ರಜೆಗಳನ್ನು ಮರಣಕ್ಕೆ ಗುರಿಮಾಡುವ ತಮ್ಮ ಯುಕ್ತಿಯು ಯಾ ವ ಬಗೆಯ ನ್ಯಾಯ ಮಾರ್ಗ ಸಮ್ಮತವಾಗಿದ್ದೀತು? ಎಂದು ನುಡಿ ದನು. - ದೇಶ ಕಲ್ಯಾಣಕ್ಕಾಗಿ ರಾಜನ ಅಲ್ಲದ ವಿಚಾರಗಳನ್ನು ಹೀಗೆ ನಿರ್ಭಿಡೆಯಿಂದ ತಿರಸ್ಕರಿಸಿದ ಆ ಮುಂದಾಳು ಎನ ಮಾತು ಕೇಳಿ ಸಭೆ ಕರ ಮನಸ್ಸಿನಲ್ಲಿಯೂ ಅದೇ ಪ್ರಕಾರದ ಸ್ಫೂರ್ತಿಯಾಗಲು ಅವರು “ಸತ್ಯವು! ಸತ್ಯವು!! ಮಹಾರಾಜ, ತಮ್ಮ ಸಲುವಾಗಿ ನಾವು ಸಾವಿ ರಾರು ಜನರು ಸಾಯಲಿಕ್ಕೆ ಸಿದ್ಧರಿರುತ್ತೇವೆ; ಆದರೆ ಒಬ್ಬ ಯವ ನನ ದೆಸೆಯಿಂದೇಕೆ ತಾವು ನಮ್ಮೆಲ್ಲರ ಪ್ರಾಣಗಳನ್ನು ಹೀರುವದು?” ಎಂದು ರಾಜನಿಗೆ ಕೇಳಹತ್ತಿದರು. ನಂತರ ಗಣೇಶದೇವರಾಜನು ಸಮಾಧಾನದಿಂದ ಹೀಗೆ ನುಡಿ ದನು: “ಪ್ರಜಗಳೇ ಕೇಳಿಕೊಳ್ಳಿರಿ, ನಾನಾಡುವ ಮಾತನ್ನು ಸಾವಧಾನದಿಂದ ಆಲಿಸಿರಿ, ಮಕ್ಕಳ ಕಲ್ಯಾಣ ಬಯಸುವದು ತಂದೆಯ ಮಹತ್ತರ ಕರ್ತವ್ಯವೆಂಬದು ಸತ್ಯವೇ. ಆದರೆ ಮಕ್ಕಳ ಶರೀರಗಳನ್ನಷ್ಟು ಯಾವ ಕೇಡಿಗೂ ಗುರಿಯಾಗದಂತೆ ಕಾಪಾಡಿಕೊಂಡರೆ, ತಂದೆಯ ಕರ್ತವ್ಯವು ತೀರಲಿಲ್ಲ. ಸಂತಾನಗಳಿಗೆ ಧರ್ಮ ಮಾರ್ಗ ತೋರಿಸು ವದೂ ಮಾತಾ-ಪಿತೃಗಳ ಒಂದು ಶ್ರೇಷ್ಠ ಕರ್ತವ್ಯವು ಧರ್ಮದಿಂದ ನಡೆದರೆ ಮನುಷ್ಯನಿಗೆ ನಿಜವಾದ ಮಂಗಲವುಂಟಾಗುವದು. ವಿಷ ಗಂಜೆ ನಾನು ಶರಣಾಗತನನ್ನು ಪರಿತ್ಯಜಿಸಿದರೆ, ಅದರಿಂದ ನಾನೂ ನೀವೂ ಕೂಡಿಯೇಧರ್ಮಭ್ರಷ್ಟರಾಗುವೆವು. ಇದರಿಂದ ಕೇವಲ ಆತಿಥ್ಯ ಧರ್ಮವು ಇಷ್ಟವಾಗುವದೆಂತಲ್ಲ; ಈ ಪೂರ್ವದಲ್ಲಿ ನಮ್ಮ