ಪುಟ:ಶಕ್ತಿಮಾಯಿ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ, ೧೩೩ ಪೂರ್ವಜರೂ, ಸಾವೂ ಅನೇಕ ಸಂಕಟಗಳಿಗೀಡಾಗಿ ಸಂಪಾದಿಸಿದ ಅಖಂಡ ಕೀರ್ತಿಗೂ ನಮ್ಮಿ ಹೇಡಿ-ಧರ್ಮ ಭ್ರಷ್ಟ-ಕೃತಿಯಿಂದ ಕಲe ಕವುಂಟಾಗಿದಿರಲಿಕ್ಕಿಲ್ಲ. ನಾವು ಪ್ರಸ್ತುತ ಯಾವ ಮಹಾತ್ಮನಾದ ಸಾಹೇಬುದ್ದೀನನನ್ನು ರಕ್ಷಿಸಬೇಕಾಗಿದೆಯೋ, ಅವನಾದರೂ ಒಂದಾ ನೊಂದು ದಿವಸ ನಿ೩ ರಾಜ ಗಣೇಶದೇವನ ಪ್ರಾಣಗಳನ್ನು ಬಹು ಕೌಶಲ್ಯದಿಂದ ರಕ್ಷಿಸಿದ್ದಾನೆ. ಅದು ಹ್ಯಾಗಂದರೆ, ಹಿಂದಕ್ಕೆ ಸಿಕಂ ದರಶಹನು ಒಡಂಬಡಿಕೆ ಮಾಡಿಕೊಳ್ಳಲಿಕ್ಕೆಂದು ನನ್ನನ್ನು ತನ್ನ ಸಭೆಗೆ ಕರೆಯಿಸಿಕೊಂಡಾಗ ಮರ್ಖತನದಿಂದ ಅವನು ನನ್ನನ್ನೂ, ಆಜೀಮ ಖಾನನನ್ನೂ ಸೆರೆ ಹಿಡಿಸಿದ್ದನಷ್ಟೇ? ಆಗ ಆ ಸುದ್ದಿಯನ್ನು ಕೇಳಿ ಈ ಸಾ ಹೇಬ್ಬುದ್ದೀನ ಯುವಕನು ತನ್ನ ಬಲವಾದ ಅಶ್ವವನ್ನೇರಿ ಎಂಟು ಶಾಸಿ ನಲ್ಲಿ ಕ್ರಮಿಸಲಿಕ್ಕಾಗದಷ್ಟು ಮಾರ್ಗವನ್ನು ಎರಡೇ ತಾಸಿನಲ್ಲಿ ಕ್ರ ಮಿಸಿ ಬಂದು 'ಸಿಕಂದರಶಹನಿಗೆ ತಿಳಿಯದ ಹಾಗೆ ಬಂದೀಖಾನೆಯ ಕೀಲಿಯನ್ನು ತೆಗೆದು ನನ್ನನ್ನು ಮುಕ್ತ ಮಾಡಿದ್ದನು. ಅವನು ಅ೦ ದು ನನ್ನನ್ನು ಬಿಡಿಸದಿದ್ದರೆ ನಾನು ನಿಮಗೆ ಪುನಃ ಕಾಣುತ್ತಿದ್ದೆನೋ, ಇಲ್ಲವೋ ಯಾರು ಹೇಳಬೇಕು? ಹೀಗೆ ನಿಮ್ಮ ರಾಜನು ನಿಮ್ಮ ತಂದೆಯು ಯಾವನಿಂಹ ಉಪಕೃತನಾಗಿರುವನೊ, ಅಂಥವನಿಗೆ ದೈವ ವಶಾತ್ ಸಂಕಟವೊದಗಿರಲು ಹಿಂದಿನದೆಲ್ಲವನ್ನೂ ಮರೆತು ಅವನನ್ನು ಶತ್ರುಗಳಿಗೊಪ್ಪಿಸುವುದು ನ್ಯಾಯವೋ, ಧರ್ಮವೋ? ಮಕ್ಕಳ ಕ್ಷೇಮಕ್ಕಾಗಿ ತಂದೆಯು ಆತ್ಮ ಯಜ್ಞವನ್ನು ಮಾಡಿಕೊಳ್ಳುವದೂ ತಪ್ಪಲ್ಲ. ನನ್ನೊಬ್ಬನ ರಕ್ತಪಾತದಿಂದ ಸಾಬುದ್ದೀನನೂ, ನೀವು ರಕ್ಷಿತವಾಗುವಂತಿದ್ದರೆ, ನಾನು ಅದಕ್ಕಾಗಿ ನಿಂತ ಕಾಲಿಲೆ ಸಿದ್ದನಿ ಹೇನೆ, ಆದರೆ ನನ್ನೊಬ್ಬನಿಂದ ಆ ಕೆಲಸವಾಗುವಂತಿರುವದಿಲ್ಲ. ಈ ಧರ್ಮಯುದ್ದಕ್ಕಾಗಿ ನೀವೂ ನಿಮ್ಮ ರಕ್ತವನ್ನು ಸುರಿಸಬೇಕಾಗಿ ರುತ್ತದೆಂಬದು ಮನಸಿನಲ್ಲಿ ಬರಲು ನನ್ನ ಅಂತಃಕರಣವು ಸಡಗುತ್ತದೆ;