ಪುಟ:ಶಕ್ತಿಮಾಯಿ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಬಂದ್ರಿಕೆ ತಟ್ಟನೆ ಕಂಡುಬರುತ್ತಿತ್ತು. ಯಾಕಂದರೆ, ಆ ಮಹಾಲಿನಲ್ಲಿ ಅಲ್ಲ ಲ್ಲಿ ಅಂಗೋಧ್ಯಾ ನಿವಾಸಿಯಾದ ಶ್ರೀರಾಮಚಂದ್ರನ, ದ್ವಾರಕಾಧೀಶ ನಾದ ಶ್ರೀಕೃಷ್ಣನ ಸುಮನೋಹರವಾದ ಚಿತ್ರಗಳು ಸಾದರದಿಂದ ಶ್ರೇಣಿಗೊಳಿಸಲ್ಪಟ್ಟಿದ್ದವು; ಮತ್ತು ಉಪವನದಲ್ಲಿ ಒಂದೂ ದೇವ-ದೇ ವತೆಗಳ ಶಿಲಾಮಯ-ಸ್ಪಟಿಕಮಯ ವಿಗ್ರಹಗಳು ಅಲ್ಲಿ ಸಾದರಗೊ ೯ಸಿದವ. ಶ್ರೀಕೃಷ್ಣನ ಅಂಗಸಂಗದ ವಿರಹದಿಂದ ಅತ್ಯಂತವಾಗಿ ಬಳಲುತ್ತಿದ್ದ ರಾಧೆಯ ಶುಧ್ರಪ್ರಸ್ತರ ಮೂರ್ತಿಯು ಒಂದು ಸ್ಥಳದ ಲ್ಲಿ ನಿಲ್ಲಿಸಲ್ಪಟ್ಟಿದ್ದು, ಅದರ ಎದುರಿಗೆ ತುಸ ಅಂತರದಲ್ಲಿ ಮಧು ರವಾದ ಗಾನದಿಂದ ತನ್ನ ಸಖಿಯರಾದ ಗೋವಿಯರನ್ನು ಮರುಳು ಮಾಡುವದಕ್ಕಾಗಿ ಕೈಯಲ್ಲಿ ಕೊಳಲನ್ನು ಹಿಡಿದ ಆಡ್ಡ ಕರಿಕಲ್ಲಿನ ಕೃಷ್ಟ ಮೂರುತಿಯು ಸ್ಥಾಪಿಸಲ್ಪಟ್ಟಿತ್ತು. ಅದರಂತೆ ಸರ್ವವಿದ್ಯಾ ವಿಶಾರದಳಾದ ಸರಸ್ವತಿಯ ವೀಣಾಪಾಣಿಯಾದ ಶ್ವೇತವಿಗ್ರಹವೂ, ಕೆಂಪು ಕಮಲದ ಮೇಲೆ ನಿಂತಿದ್ದ ಸಕಲ ಸೌಭಾಗ್ಯ ದಾಯಿನಿಯಾದ ಮಹಾಲಕ್ಷ್ಮಿಯ ಪೀತ ವಿಗ್ರಹವೂ ಮ ಟ್ಟಿಗೆ ನಿಲ್ಲಿಸಲ್ಪ ಟ್ಟಿದ್ದವು. ಇವಲ್ಲದೆ ಬೇರೆ ದಲವು ದೇವ-ದೇವತೆಗಳ ಸಣ್ಣ ಪುಟ್ಟಚಿಕ್ಕದೊಡ್ಡ ತರತರದ ಬಣ್ಣಗಳ ವಿಗ್ರಹಗಳು ಅಲ್ಲಲ್ಲಿ ಸ್ಥಾಪಿಸಲ್ಪಟ್ಟ ರಿಂದ ಆ ಶಕ್ತಿಮಯಿಯ ನಿವಾಸವು ಯವನ ಬಾದಶಹನರಾಣಿ ಯ ದಡಾರದಂತೆ ಕೊಂಚವೂ ಕಾಣುತ್ತಿಲ್ಲ. ಅದು ಹಿಂದೂ ರಾಜರ ಪ್ರಮೋದನಿಕೇತನದಂತೆ ಅದನ್ನು ನೋಡುವ ನವ ತರು ಣರಿಗೆ ಒಮ್ಮೆಲೆ ಭಾಸವಾಗುತ್ತಿದ್ದಂತೆ, ದೇವ-ದೇವತೆಗಳ ಅಖಂಡ ವಾಸಸ್ಥಳವೋ ಏನೋ ಎಂಬಂತೆ ದಿನ ಹೋದ ಭಾವಿಕ ಹಿಂದುಗ ಳು, ಆ ಉಪವನವನ್ನು ನೋಡಿ ಭಾವಿಸುತ್ತಿದ್ದರು. ಮಧುಮಾಸದ ಪೂರ್ಣಿಮೆಯ ದಿನದ ಸಂಧ್ಯಾ ಸಮಯವು; ಅಖಂಡ ಚಂದ್ರಮನು ಹೊಸ ಹುರುಪಿನಿಂದ ಮನಸ್ಸಿನಲ್ಲಿ ನಗುತ್ತ ತನ್ನ