ಪುಟ:ಶಕ್ತಿಮಾಯಿ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ರ್೪

– . ಶಕ್ತಿಮಯಿ. ಕಡಲೆ ಗಾಯಸುದ್ದೀನನು ಮುಂದುವರಿದು ಬಂದು, ಶಕ್ತಿ ಯ ಬಳಿಯ ಸಂಗಮರವರೀ ಕಲ್ಲಿನ ಆಸನದ ಮೇಲೆ ಕುಳಿತು, “ಎಷ್ಟು ಯೋಚಿಸುವದು? ಪ್ರಿಯೇ, ಈ ವಂಗೇಶ್ವರನು ತನ್ನ ಹೈ ದಯ, ಪ್ರಾಣ, ಮನಸ್ಸು ಹಾಗು ಇಡಿ ರಾಜ್ಯ ಇವೆಲ್ಲವುಗಳನ್ನೂ ನಿನಗೆ ಒಪ್ಪಿಸಿ, ದಾಸಾನುದಾಸನಾಗಿ ನಡಕೊಳ್ಳುತ್ತಿದ್ದರೂ, ನೀನು ಅದಾವ ವಿಷಯಕ್ಕೆ ಇಷ್ಟು ಚಿಂತಿಸುತ್ತೀ? ಎಲ್ಲ ಶತ್ರುಗಳನ್ನು ದಂಡಿಸಿ, ಅಣ್ಣ-ತಮ್ಮಂದಿರನ್ನು ಕೊಲ್ಲಿಸಿ, ರಾಜ್ಯವನ್ನು ನಿನಗೋ ಸ್ವರ -ನಿನ್ನ ಸಂತತಿಗೋಸ್ಕರ- ನಿರ್ಬಧವಾಗಿ ಮಾಡಿಟ್ಟಿರಲು, ಇಂಧ ಸುಸಂಧಿಯಲ್ಲಿ ನೀನು ವ್ಯಗ್ರಚಿತ್ತಳಾಗಿರುವದು ಸರಿಯೇ?? ಎಂದು ಪ್ರಶ್ನೆ ಮಾಡಿದನು. ಗಾಯಸುದ್ದೀನನ ಈ ಮಾತುಗಳಿಂದ ಶಕ್ತಿಮಯಿಯ ಮನ ಸ್ಟು ಪ್ರಮೋದ ಹೊಂದಲಿಲ್ಲ. ಅವಳು ಅವನ ಮುಖದ ಕಡೆಗೆ - ಕೇವಲ ತುಚ್ಛ ಭಾವದಿಂದ ನೋಡುತ್ತ ಅಹಹ! ಎಂಥ ನಿಷ್ಟುರರು ನೀವು? ನಿಮ್ಮ ಮನಸ್ಸು ಇಷ್ಟು ಕಠಿಣವಿದ್ದೀತೆಂದು ನಾನು ತಿಳಿ ದಿದ್ದಿಲ್ಲ; ನಿಮ್ಮ ಯವನ ಜಾತಿಯಲ್ಲಿ ಇದಕ್ಕೆ ಪೌರುಷವನ್ನು ರುವರೋ ಏನು ನಾನರಿಯೆನು. ಯಾಕಂದರೆ, ನೀವು ಸ್ವತಃ ನಿಮ್ಮ ಏಳು ಜನ ಅಣ್ಣ-ತಮ್ಮಂದಿರನ್ನು ಕೊಲ್ಲಿಸಿದಿರಿ; ಕುಮಾರಸಾಹೇಬು ದೀನನನ್ನು ಕೊಲ್ಲಿಸಬೇಕೆಂದಿದ್ದೀರಿ; ಅಲ್ಲದೆ, ಪಾಪ! ಆ ಗಣೇಶದೇ ವನನ್ನು, ಯಾವನು ನಿಮಗೆ ನಿಮ್ಮ ಅತ್ಯಂತ ಕಠಿಣ ಪ್ರಸಂಗದಲ್ಲಿ ತನ್ನ ರಾಜ್ಯ, ಸಂಪತ್ತು, ಜೀವ ಇವುಗಳ ಕಡೆಗೆ ಸಹ ನೋಡದೆ ಸಹಾಯ ಮಾಡಿರುವನೋ ಅವನನ್ನೂ , ಈಗ ಪಾಶಕ್ಕೇರಿಸಬೇಕೆಂದಿ ರುವಿರಷ್ಟೇ? ಮತ್ತು ನೀವು ಬಾಯಿಲೆ ಹೇಳುವದೇನಂದರೆ, ಇದೆಲ್ಲ ಅನಾಹುತವನ್ನು ನಿನಗೋಸ್ಕರ ಮಾಡಬೇಕಾಯಿತೆಂದು.” ಬೇಡ, ಎಂದಿಗೂ ಬೇಡ; ನಿಮ್ಮ ಸ್ವಜನ ರಕ್ತಪಾತದಿಂದ ಅಪವಿತ್ರವಾದ