ಪುಟ:ಶಕ್ತಿಮಾಯಿ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

to ನ ಚಂದ್ರಿಕೆ ರಾಜ್ಯವು ನನಗೂ ನನ್ನ ಮಕ್ಕಳಿಗೂ ಎಂದೆಂದಿಗೂ ಬೇಡ, ಹುಟ್ಟಿ ಸಿದ ದೇವರು ಹುಲ್ಲು ಮೇಯಿಸಲಾರನು; ನನ್ನ ಮಕ್ಕಳ ಸಲುವಾಗಿ ಯೆಂದು ಯಾವನು ಈ ಹೃದಯವಿದಾರಕ ಕೃತ್ಯಗಳನ್ನು ಮಾಡಿರುವ ನೋ ಅವನು ಎಂದಿಗೂ ಸತ್ಪುರುಷನಾಗಲಾರನು; ಈ ಕೃತಿಗಳೇ ಅವನಲ್ಲಿಯ ಕಾವುರುಷತ್ವವನ್ನು ಎತ್ತಿ ಎಣಿಸುತ್ತವೆ, ಎಂದಳು. ಗಾಯ-ನಿಮ್ಮ ಹಿಂದೂ ವೀರರ ಶ್ರೇಷ್ಠತ್ವವನ್ನೂ, ಸೌಜನ್ಯ ವನ್ನೂ ಎಷ್ಟೋ ಸಾರೆ ನೋಡಿದ್ದಾಗಿದೆ ಬಿಡು. ಅಂಧ ಸುಜನರು ನಿಮ್ಮ ಜಾತಿಯಲ್ಲಿದ್ದರೆ, ನಿನ್ನ೦ಥ ಸುರತ್ನದ ಬೆಲೆಯು ಅವರಿಗೆ ತಿಳಿ ಯುತ್ತಿಲ್ಲವೇನು? ಈಗ ನೀನು ನನ್ನ ಯಾವ ಕೃತಿಗಳಿಗೆ ಕಾಪುರುಷ ಲಕ್ಷಣಗಳೆಂದೆನ್ನು ವಿಯೋ ಇಂಧ ಸಾಹಸವನ್ನಾದರೂ ಮಾಡಿ ನಿಮ್ಮ ಯಾವನೊಬ್ಬ ಹಿಂದುವು ನಿನ್ನನ್ನು ಅಂಗೀಕರಿಸಿದ್ದರೆ, ನಾನು ಅವನ ನ್ನು ಎಂದೂ ಕಾಪುರುಷನೆಂದು ತಿಳಿಯದೆ ಸತ್ಪುರುಷನೆಂದು ಭಾವಿಸಿ, ಮನ್ನಿಸುತ್ತಿದ್ದನು. ಆ ಹೇಡಿ ಗಣೇಶ ದೇವ ನು ತನ್ನ ತಾಯಿ ಯ ಯಃಕಶ್ಚಿತ್ ಆಜ್ಯೋಲ್ಲಂಘನದ ಹೆದರಿಕೆಗಾಗಿ ನಿನ್ನಂಥ ಅತ್ಯಂತ ಪ್ರೇಮಪುತ್ಥಳಿಯನ್ನು ಅವಹೇಲನಗೊಳಿಸಿ ತ್ಯಜಿಸಿದ್ದನ್ನು ನೀನು ಇಷ್ಟರಲ್ಲಿಯೇ ಮರೆತು ಬಿಟ್ಟಿದ್ದೇನು? ಸುಲ್ತಾನನ ಈ ಮಾತಿನ ಪೆಟ್ಟು ಅತ್ಯಂತ ಗರ್ವಿತ ಸ್ವಭಾವದ ಶಕ್ತಿಮಯಿಯ ಹೃದಯಕ್ಕೆ ತೀಕ್ಷ್ಯಶದಂತೆ ಆಘಾತವಾಯಿತು. ಆಗ ಕ್ರೋಧದಿಂದ ಶಕ್ತಿಯ ಸಾಭಾವಿಕವಾದ ಗೌರಕಾಯವು ಕೆಂಡದಂತೆ ನಿಗಿ ನಿಗಿ ಕೆಂಪಾಗಹತ್ತಿತು. ಗಣೇಶದೇವನಿಂದ ಹೊಂದಿದ್ದ ಪುರಾ ಶನ ಅಪಮಾನದಲ್ಲಿ ಗಾಯಸುದ್ದೀನನಿಂದನುಭವಿಸಬೇಕಾಗಿದ್ದ ಈ ನೂತನ ಅವಮಾನವು ಬೆರೆಯಲು, ಸಿಟ್ಟಿನಿಂದ ಆಕೆಯ ಸರ್ವಾಂಗವು ಬೆಯ್ಯಲಾರಂಭಿಸಿತು. ಆಗ ಅವಳು ಗಾಯಸುದ್ದೀನನಿಗೆ ಉತ್ತರ ಕೊಡಲಸಮರ್ಥಳಾದಳು. ಅವಳ ಈ ಪ್ರಕೃತ ಸ್ಥಿತಿಗೆ ಗಣೇಶದೇ