ಪುಟ:ಶಕ್ತಿಮಾಯಿ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿಂ ೧೫೩ ಶ್ರೀ ಶಕ್ತಿಮಯಿ, ಒಂದು ಹೂಬಳ್ಳಿಯ ಮಂಟಪದಲ್ಲಿ ಒಂದು ವ್ಯಕ್ತಿಯು ಅಡಗಿ ಕೊಂಡು ಕುಳಿತು ಶಕ್ತಿಮಯಿ-ಗಾಯಸುದ್ವೀನ ಇವರಾಡುವ ಮಾತುಗಳನ್ನು ಲಕ್ಷ್ಮಗೊಟ್ಟು ಆಲಿಸುತ್ತಿತ್ತು. ಶಕ್ತಿಮಯಿಯು ಈ ದಿವಸ ವಿಶೇಷವಾಗಿ ಚಿಂತಾಕ್ರಾಂತಳಾದ್ದರಿಂದ ಆಕೆಯ ದೃ ಷ್ಟಿಯು ಆ ವ್ಯಕ್ತಿಯ ಕಡೆಗೆ ಹೋಗಲಿಲ್ಲ. ಇಲ್ಲದಿದ್ದರೆ ಅವಳು ಆ ವ್ಯಕ್ತಿಯ ಇರವನ್ನು ಕೂಡಲೆ ಕಂಡುಹಿಡಿದು, ಆ ಏಕಾಂತ ಸ್ಥಳದಲ್ಲಿ ಹೀಗೆ ಗುಪ್ತವಾಗಿ ಬಂದದ್ದಕ್ಕಾಗಿ ಆ ವ್ಯಕ್ತಿಗೆ ತಕ್ಕ ಶಿಕ್ಷೆ ಯನ್ನು ವಿಧಿಸಿಬಿಡುತ್ತಿದ್ದಳು. ಗಾಯಸುದ್ದೀನನು ಹೇಳಿಕೇಳಿ ತರು ಣ ಯವನ ಬಾದಶಹನು, ಮೇಲಾಗಿ ಪ್ರಿಯಸಭೆಯನ್ನು ರಮಿಸುವದ ರಲ್ಲಿ ತೊಡಗಿದ್ದವನು; ಅಂದಬಳಿಕ ಅವನ ನಜರಿಗೆ ಆ ಕ್ಷುಲ್ಲಕ ಸಂಗತಿ ಯು ಹ್ಯಾಗೆ ಗೋಚರವಾಗಬೇಕು? ವಾಚಕರೇ, ಆ ಉದ್ಯಾನದಲ್ಲಿ ಆ ಗಿಡದ ಕವಿನೆಳಲಲ್ಲಿ ಹೀಗೆ ಅಡಗಿಕೊಂಡು ಕುಳಿತ ಆ ವಿಲಕ್ಷಣ ವ್ಯಕ್ತಿಯು ಯಾರಾಗಿರಬಹು ದು? ಹಾಗು ಬಾದಶಹನ ಆ ಏಕಾಂತ ಸ್ಥಾನದಲ್ಲಿ ಅಡಗಿ ಕೂರು ವ ಅವನ ಉದ್ದೇಶವಾದರೂ ಏನಿರಬಹುದು? ಅವನು ಯಾರು, ಅ ವನು ಅಲ್ಲಿ ಏಕೆ ಅಡಗಿದ್ದನು ಎಂಬ ಸಂಗತಿಯನ್ನು ತಿಳಿಯಬೇಕಾಗಿ ದ್ದರೆ, ಅಗೋ ಅತ್ತನೋಡಿರಿ, ಆ ಕವಿನೆಳಲಿನಿಂದ ಹೊರಬೀಳುವ ಆ ವ್ಯಕ್ತಿಯ ಕಡೆಗೆ ನೋಡಿರಿ, ಅಕೋ, ಅವನೇನೇನೋ ತನ್ನಲ್ಲಿ ಮಾ ತಾಡ ಹತ್ತಿದ್ದಾನೆ. ಅದನ್ನು ಲಕ್ಷ ಕೊಟ್ಟು ಕೇಳಿರಿ:- “ಭಲೆ,ಶಕ್ತಿಮಯೇ, ಇದ್ದರೆ ನಿನ್ನಂಥ ಹೆಣ್ಣೆ ಇರಬೇಕುನೋಡು. ಪ್ರತ್ಯಕ್ಷ ವಂಗೇಶ್ವರನು ಎದುರಿಗೆ ಕುಳಿತಿದ್ದರೂ ನೀನು ಅವನ ದು ರ್ಗುಣ ಗಳನ್ನು ಸ್ವಲ್ಪವೂ ಸಂಕೋಚವಿಲ್ಲದೆ ಅವನಿಗೆ ಹೇಳಿಬಿಟ್ಟೆ ಯಲ್ಲ? ವಾಹವ್ಯಾ, ಸಾಹಸೀ, ಶಕ್ತಿಮಯೀ; ನಿನ್ನ ಅಧಿಕಾರ ಯುಕ್ತ ವಾಣಿಗೆ ಅದಾವ ಮೀಸೆ ಹೊತ್ತ ಗಂಡಸಿನಿಂದ ಮಾನ್ಯತೆಯು ದೊರೆ