ಪುಟ:ಶಕ್ತಿಮಾಯಿ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫ ಶಕ್ತಿಮಯಿ, ರಗಳಲ್ಲಿ ಸಂಪೂರ್ಣವಾಗಿ ಮಗ್ನವಾಗಿತ್ತು. ಅವನು ತನ್ನ ಮಾರ್ಗ ದಕಡೆಗೆ ಕೊಂಚವೂ ಲಕ್ಷ್ಮಗೊಟ್ಟಿದ್ದಿಲ್ಲ. ಅದರಿಂದ ಅವನು ತನ್ನ ಮನೆಗೆ ಸರಳಮಾರ್ಗದಿಂದ ಬರಲಿಲ್ಲ; ಅತ್ತಿತ್ತ ಸುತ್ತುವರೆದು ಬಹಳ ಹೊತ್ತಿಗೆ ಮನೆಗೆ ಬಂದು ಸೇರಿದನು, ಕುತುಬನ ಹೀಗೆ ತಡವಾಗಿ ಮನೆಗೆ ಬರುವಷ್ಟರಲ್ಲಿ ಶಕ್ತಿಮ ಯಿ ರಾಣಿಯ ದಾಸಿಯೊಬ್ಬಳು ಕುತುಬನ ದಾರಿ ಕಾಯುತ್ತ ಅವ ನ ಮನೆಯಲ್ಲಿ ನಿಂತಿದ್ದಳು. ಆಗ ಅವಳು ಕುತುಬನಿಗೆ ಮಹಾ ರಾಣಿಯವರು ತಮ್ಮನ್ನು ಈಗಲೆ ಕಾಣಬೇಕೆಂದಿದ್ದಾರೆ. ಅದನ್ನು ಜಾಗ್ರತೆಯಾಗಿ ಹೊರಟುಬನ್ನಿರಿ” ಎಂದು ಅರಿಕೆಮಾಡಲು, “ನನ್ನ ಮನಸ್ಸಿನ ವಿಚಾರಗಳು ತೀವ್ರವೇ ಫಲದ್ರೂಪವಾಗುವಂತೆ ತೋರು ಇವೆ; ತಾನಾಗಿಬಂದ ಪ್ರಸಂಗವನ್ನು ಕಳಕೊಳ್ಳುವದು ಸರಿಯಲ್ಲ ಎಂದು ಮನದಲ್ಲಿ ವಿಚಾರಿಸಿ ಕುತುಬನು ಆ ದಾದಿಯ ಬೆನ್ನತ್ತಿ ನಡೆದನು. ಕುತುಬನು ಶಕ್ತಿಮಯಿಯ ಮಹಾಲಿಗೆ ಬಂದಾಗ ರಾತ್ರಿ ಯು ಪೂವಾರ್ಧವನ್ನು ದಾಟಿತ್ತು. ವಂಗೇಶ್ವರನಂಧ ಯವನಬಾದ ಶಹನ ಅಂತಃಪುರದಲ್ಲಿ ಆ ನಡುರಾತ್ರಿಯಲ್ಲಿ ಕುತುಬನಂಥ ತರುಣನ ಪ್ರವೇಶವಾಗುವದೆಂದರೆ ಮುಸಲ್ಮಾನೀ ಧರ್ಮದ-ಅದೇಕೆ, ಪ್ರತಿ ಯೊಂದು ಧರ್ಮದ ನೀತಿನಿಯಮಗಳನ್ನು ಉಲ್ಲಂಘಿಸಿದಹಾಗಾಗುವದು ಸ್ವಾಭಾವಿಕವು. ಆದರೆ ಕುತುಬನು ಬಾದಶಹನ ಮುಖ್ಯ ಪರಾ ಮರ್ಶದಾತೃವಾದ್ದರಿಂದ ಅವನಿಗೆ ಬೇಕಾದಾಗ ಬೇಕಾದಲ್ಲಿಗೆ ಹೋಗ ಲಿಕ್ಕೆ ಪ್ರತಿಬಂಧವಿರಲಿಲ್ಲ. ಅದರಿಂದ ಕುತುಬನು ನೆಟ್ಟಗೆ ಹೋಗಿ ಶಕ್ತಿ ಮಯಿಯ ಎದುರಿಗೆ ನಿಂತನು. ಚಿಂತೆಯಿಂದ ಕಪ್ಪಿಟ್ಟ ಕುತುಬನ ಮುಖ ವನ್ನು ನೋಡಿ ಶಕ್ತಿಮಯಿಯು ಕ್ಷಣಹೊತ್ತು ಮನಸ್ಸಿನಲ್ಲಿ ಬೆದ ರಿದಳು; ಆದರೆ ಈ ಮಧ್ಯರಾತ್ರಿಯಲ್ಲಿ ನಿದ್ರೆಯಿಂದ ಎಬ್ಬಿಸಿಕೊಂಡು ಬಂದಿದ್ದರಿಂದ ಅವನ ಮೋರೆಯು ಹೀಗೆ ಕಪ್ಪಾಗಿರಬಹುದೆಂದು