ಪುಟ:ಶಕ್ತಿಮಾಯಿ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫L ಸ, ಚಂದ್ರಿಕೆ ಆಕೆಯು ಭಾವಿಸಿದಳು. ಅವಳು ಕುತುಬನನ್ನು ತನ್ನ ಹಿತಕರ್ತನಂ ದು ಭಾವಿಸಿದ್ದರಿಂದ ಆಕೆಯಲ್ಲಿ ಅವನ ವಿಷಯವಾಗಿ ಬೇರೆ ಆಲೋ ಚನೆಯೇ ಹುಟ್ಟಲಿಲ್ಲ. ಬಳಿಕ ಅವಳು ಕುತುಬನನ್ನು ಆದರದಿಂದ ಒತ್ತಟ್ಟಿಗೆ ಕೂಡ ಹೇಳಿ-ಕುತುಬ, ನಿನಗೊಂದು ಮಹತ್ವದ ಸಂಗತಿಯನ್ನು ತಿಳಿಸಿ ಆ ಬಾಬಿನಲ್ಲಿ ನಿನ್ನ ಸಾಯಬೇಡುವದಕ್ಕಾ ಗಿ ನಿನ್ನನ್ನು ಕರೆಸಿದ್ದೇನೆ. ಯಾವ ಕಾರಣದಿಂದಲೋ ಬಾದಶಹನು ಗಣೇಶದೇವನನ್ನು ಸಂಹರಿಸಿ ಬಿಡುವದನ್ನೇ ನಿಷ್ಕರ್ಷಿಸಿರುವನಷ್ಟೇ; ಆದರೆ ಗಣೇಶದೇವನು ಬಾದಶಹನಿಗೆ ಅವನ ಅತ್ಯಂತ ಸಂಕಟಕಾಲ ದಲ್ಲಿ ಮಿತಿಮೀರಿ ಸಹಾಯ ಮಾಡಿರುವದರಿಂದ ಅವನ ಆ ಪರೋ ಪಕಾರ ಕೃತಿಯ ಪ್ರತಿಫಲವೆಂದು ನಾನು ಅವನನ್ನು ಈಗ ಬಂಧ ಮುಕ್ತ ಮಾಡಬೇಕೆಂದಿರುತ್ತೇನೆ. ಅವನು ಬಿಡುಗಡೆ ಹೊಂದಿ ಹೋ ದಬಳಿಕ ಬಾದಶಹನಿಗೆ ಆ ಸಂಗತಿಯು ತಿಳಿದು ಅವನು ನನ್ನ ಮೇಲೆ ಸಿಟ್ಟಾದರೂ ಚಿಂತೆಯಿಲ್ಲ. ನಾನು ಬಾದಶಹನ ಸಮಾಧಾನವಾಗುವ ಹಾಗೆ ಹಂಚಿಕೆ ಮಾಡುವೆನು, ಆದ್ದರಿಂದ ಈಗ ನೀನು ನನಗೆ ಸಹಾಯ ಮಾಡಬೇಕಾದದ್ದೇನಂದರೆ, ಈಗಿಂದೀಗಲೇ ನೀನು ನನ್ನನ್ನು ಗಣೇಶ ದೇವನಿದ್ದ: ಜೇಲಖಾನೆಗೆ ಕರಕೊಂಡು ಹೋಗಬೇಕು. ಅಂದರೆ ಈ ನಿನ್ನ ಉಪಕಾರವನ್ನು ಆ ಜನ್ಮ ಪರಿಯಂತವಾಗಿಯೂ ನಾನು ಮರೆಯ ಲಿಕ್ಕಿಲ್ಲ, ಎಂದು ನುಡಿದಳು, ಕುತುಬನು ಊಹಿಸಿದ್ದಂತೆಯೇ ಪ್ರಸಂಗವೊದಗಿತು. ಅಂದ ಮೇಲೆ ಆ ಧೂತ೯ನು ಈ ಸುಸಂಧಿಯನ್ನು ಕಳಕೊಳ್ಳುವನೇ? ಕೂಡಲೆ ಕುತುಬನು ಯೋಗ್ಯ ಬಂದೊಬಸ್ತಿನೊಡನೆ ಶಕ್ತಿಮಯಿ ಯನ್ನು ಕರಕೊಂಡು ಜೇಲ ಕಡೆಗೆ ನಡೆದನು. ಅವನು ತುಸು ಮುಂ ದಕ್ಕೆ ಹೋಗಿ ಜೇಲ ಕಾವಲುಗಾರರಿಗೆ ತಿಳಿಸಿ ಗಣೇಶದೇವನಿದ್ದ ಒಣೆಯ ಕೀಲಿಯನ್ನು ತೆಗೆದನು, ಕೂಡಲೆ ಶಕ್ತಿಮಯಿಯು ಆ ಶ