ಪುಟ:ಶಕ್ತಿಮಾಯಿ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂ ಸ, ಚಂದ್ರ, ವೆನಿಸುತ್ತಿತ್ತೋ ಮುಂತಾದ್ದನ್ನು ಮನೆಯೋಗದಲ್ಲಿ ನಿಷ್ಣಾತ ನಾದವನಿಂದಲೂ ಊಹಿಸಲು ಶಕ್ಯವಾಗಿದ್ದಿಲ್ಲ. ಹೀಗೆ ಕೆಲವು ಕ್ಷಣ ಗಳನ್ನು ಅವಳು ಮೌನದಿಂದ ಕಳೆಯುವಷ್ಟರಲ್ಲಿ ಅವಳ ಕಣ್ಣುಗಳಿಂದ ಎರಡು ಕಂಬನಿಗಳುದುರಿ, ಓವ್ಯಾಧರಗಳು ಹೆಚ್ಚಾಗಿ ಕಂಪಿಸಹತ್ತಿ ದವು; ಬಾಯಿಂದ ಶಬ್ದಗಳೂ ಹೊರಟವು. ಕೂಡಲೆ ಈವರೆಗೆ ವಾಷಾ ಣಮರ್ತಿಯಾಗಿದ್ದ ಶಕ್ತಿಯು ಈಗ ಜೀವಂತ ಮನುಷ್ಯ ರೂಪವನ್ನು ಹೊಂದಿದಳು. ಶಕ್ತಿಯ ಈಗಿನ ಈ ಪಶ್ಚಾತಾವಾತಿರೇಕದ ವತಿ೯ ಯನ್ನು ನೋಡಿದರೆ, ಸೇಡಿನ ಹವ್ಯಾಸದ ಈರ್ವಾಯುಕ್ತ ಲಕ್ಷಣಗ ಳೊಂದೂ ಇವಳಲ್ಲಿ ಕಾಣಬರಲಿಲ್ಲ. ನಿಸ್ವಾರ್ಥದ ಕರುಣಾಮಯ ಸ್ತ್ರೀ ಮೂರ್ತಿಯೇ ಪ್ರತ್ಯಕ್ಷವಾಗಿರುವಂತೆ ಇವಳನ್ನು ನೋಡಿದವರಿಗೆ ಭಾಸ ವಾಗುತ್ತಿತ್ತು. ಶಕ್ತಿಮಯಿಯು ಕೇವಲ ಬಡವನ ಕನೈಯಾದ್ದರಿಂದ ಗಣೇಶದೇವನಂಥ ತನ್ನ ಪ್ರಿಯಸಖನಿಗೆಕೂಡಾ ತನ್ನಲ್ಲಿಯ ನಿಸ್ಸಿಮ ವಾದ ಪ್ರೇಮದ ಹೊರ್ತು ಬೇರೆ ಯಾವ ಬೆಲೆಯುಳ್ಳ ಪದಾರ್ಥ ಗಳನ್ನು ಕೊಡಲು ಸಮರ್ಥಳಾಗಿರಲಿಲ್ಲ; ಆದರೆ ಇಂದು ಅವಳು ಇಡಿ ಬಂಗಾಲದೇಶದ ಏಕಛತ್ರಾಧಿಪತಿಯ ಅರ್ಧಾಂಗಿನಿಯಾದ್ದರಿಂದ ಈಗ ಬೇಕಾದವರಿಗೆ ಬೇಕಾದದ್ದನ್ನು ದಯಪಾಲಿಸುವಷ್ಟು ಶಕ್ತಿ ಯು ಅವಳಲ್ಲಿತ್ತು. ಆದ್ದರಿಂದಲೇ ಅವಳು ತನ್ನ ಆ ಅನುಕೂಲತೆ ಯ ಸದುಪಯೋಗವನ್ನು ಮಾಡುವದಕ್ಕಾಗಿ ವಂಗೇಶ್ವರನ ತೀರ ಅವಕೃಪೆಗೆ ಪಾತ್ರನಾದ ತನ್ನ ಪ್ರಿಯ ಬಾಲ್ಯ ಸಖ ಗಣೇಶದೇವನನ್ನು ಮುಕ್ತ ಮಾಡಬಂದಿದ್ದಳು. ಶಕ್ತಿಯ ಈ ಪೂರ್ವದ ಆದೇಶದಂತೆ ಗಾಯಸುದ್ದೀನನು ಕುಮಾರಸಾಹೇಬುದ್ದೀನನನ್ನು ಕುತುಬನು ಬೇಡ ಬೇಡೆಂದರೂ ಬಂಧನ ದಿಂದ ಮುಕ್ತ ಮಾಡಿಬಿಟ್ಟಿದ್ದನು. ಗಣೇಶದೇವನನ್ನಾದರೂ ಬಿಟ್ಟು ಬಿಡು ವದು ಅವನ ಮನಸ್ಸಿನಲ್ಲಿತ್ತು. ಆದರೆ ಅವನನ್ನು ಒಂದು ನಿರ್ಬಂದದಿಂದ