ಪುಟ:ಶಕ್ತಿಮಾಯಿ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩ ಶಕ್ತಿಯು ಭಾಸದಂತೆ ಇವಳು ತನ್ನನ್ನು ನಿಜವಾಗಿಯೇ ಮುಕ್ತ ಮಾಡಬಂದಿ ದ್ಯಾಳೆಂಬದು ಅವನಿಗೆ ತಿಳಿದು ಬಂದಿತು. ಆಗ ಅವನು ಪರಮಾಶ ರ್ಯ ಭರತನಾಗಿ-ನಾನು ಎಲ್ಲಿಗೆ ಹೋಗಬೇಕೆನ್ನು ವೆ? ಕೂಡಲೆ ಶಕ್ತಿಯು ಅಲ್ಲಿಯ ದೀಪವನ್ನು ನಿಂದಿಸಿ ತನ್ನ ಬಹುಮೂಲ್ಯವಾದ ಪೀತಾಂಬರವನ್ನು ಹರಿದು ಎರಡು ತುಂಡುಮಾ ಡಿ, ಒಂದನ್ನು ತಾನು ಉಟ್ಟು ಕೊಂಡು, ಮತ್ತೊಂದು ತುಂಡನ್ನೂ ರತ್ನ ಖಚಿತವಾದ ಶಾಲನ್ನೂ ಗಣೇಶದವನ ಕೈಯಲ್ಲಿ ಕೊಟ್ಟುಕುಮಾರ ತೆಗೆದುಕೋ; ಈ ವಸ್ತ್ರವನ್ನು ಉಟ್ಟ ಕೊ, ಹಾಗು ಈ ಶಾಲಿನಿಂದ ನಿನ್ನ ಮೈಮುಚ್ಚಿಕೊಂಡು ಆ ಬಾಗಿಲ ಬಡೆ. ಅಂದರೆ ದ್ವಾರರಕ್ಷಕನು ಬಾಗಿಲ ತೆರೆಯುವನು. ಬಳಿಕ ನೀನು ಅವನೊಡನೆ ಸುಮ್ಮನೆ ಹೊರಗೆ ಹೋಗು, ತಲೆ ಬಾಗಿಲಬಳಿಯಲ್ಲಿ ನೀನು ಆ ದ್ವಾರಪಾ ಲಕನ ಕೈಯಲ್ಲಿ ಇಗೋ ಈ ಉಂಗುರವನ್ನು ಕೊಟ್ಟು ಬಿಡು, ಅಂದ ರೆ ಅವನು ನಿನಗಾವ ಪ್ರತಿಬಂಧವನ್ನೂ ಮಾಡಲಿಕ್ಕಿಲ್ಲ, ಬಳಿಕ ನೀನು ಬಹು ಶೀಘ್ರವಾಗಿ ಬೇಕಾದಲ್ಲಗೆ ಓಡಿಹೋಗಿ ನಿನ್ನ ಪ್ರಾಣಗಳನ್ನು ಉಳಿಸಿಕೊ;' ಎಂದು ಅರಿಕೆ ಮಾಡಿಕೊಂಡಳು. ಆದರೆ ಗಣೇಶದೇವನಿಗೆ ಶಕ್ತಿಯ ಸೂಕನೆಯು ಸಮ್ಮತವಾ ಗಲಿಲ್ಲ. ತನ್ನ ಸಲುವಾಗಿ ತನ್ನ ವಿರಹದಿಂದ ಬಳಲುತ್ತಿರುವ ಒಬ್ಬ ಪರಸ್ತ್ರೀಯು ಮರಣಹೊಂದಿ ತಾನು ಪಾರಾಗಿ ಹೋಗುವದು ಗಣೇ ಕದೇವನಂಥ ಶ್ರೇಷ್ಠ ಹಿಂದೂ ಧರ್ಮಸ್ಥ ರಾಜನಿಗೆ ಸಮ್ಮತವಾದೀ ತೇ? ತನ್ನ ಪ್ರಾಣ ಹೋಗಿ, ತನ್ನ ಸ್ವಜನುಗೂ ಪ್ರಜೆಗಳಿಗೂ ಎಂಥ ದುರ್ದೆಸೆ ಪ್ರಾಪ್ತವಾದರೂ ಅವನು ಶಕ್ತಿಯ ಆ ಸಹಾಯಕ್ಕೆ ಋಣಿಯಾಗುವಂತಿದ್ದಿಲ್ಲ. ಒಂದುವೇಳೆ ಅವನು ಆಕೆಯ ಸಹಾಯ ಬಯ ಸಿದ್ದರೆ, ಅದರಿಂದ ಅವನು ತಿಳಿದೇ ಆಗಲಿ-ತಿಳಿಯದೇ ಆಗಲಿ, ಧರ್ಮ ಭ್ರಷ್ಟನಾದಂತಾಗುತ್ತಿತ್ತು. ಯಾಕಂದರೆ ಶಕ್ತಿಮಯು ಪರಧ