ಪುಟ:ಶಕ್ತಿಮಾಯಿ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೮ ಸ, ಚಂದ್ರಿಕೆ ಆಕೆಯು ನಿಂತಲ್ಲಿಂದ ಕೊಂಚವೂ ಚಲಿಸದೆ, ಉದುರಿ ಬೀಳುತ್ತಿದ್ದ ಆ ತನ್ನ ಮುಂಡರಾಶಿಗಳ-ಕದಲುಗಳ-ಕತೆಗೆ ವಕ್ರದೃಷ್ಟಿಯಿಂದ ನೋಡುತ್ತಿದ್ದಳು. ಅಷ್ಟರಲ್ಲಿ ಅಗ್ನಿ ಯ ಸ್ಪುರಣವು ತುಸು ಕಡಿ ಮೆಯಾಯಿತು. ಆಗ ಈವರೆಗೆ ಆ ಮಂದಿರದ ತುಂಬೆಲ್ಲ ಹಾರಾ ಡುತ್ತಿದ್ದ ಶಕ್ತಿಯ ಮುಂಡರಾತಿಗಳು ವೇದಿಕೆಯ ಮೇಲೆ ಹರವುವ ದರ್ಭೆಗಳಂತೆ ಚತುಷೋನಾಕಾರಗಳಾಗಿ ಸನ್ಯಾಸಿನಿಯ ಎದುರಿಗೆ ಬಂದು ಬಿದ್ದವು. ಆ ತನ್ನ ಕೂದಲುಗಳು ಹಾರಿ ಬೆಂಕಿಯಲ್ಲಿ ಬೀಳಬಾರ' ದೆಂದು ಶಕ್ತಿಯು ಅವನ್ನು ಆರಿಸಿಕೊಳ್ಳಹತ್ತಿದಳು. ಅಷ್ಟರಲ್ಲಿ ಸನ್ಯಾಸಿ ನಿಯುಕಣ್ಣು ಮುಚ್ಚಿಕೊಂಡೇ-'ಎಲೈ ಸರ್ವಶಕ್ತಿದಾಯಿನೀಭಗವಂ ತನ್ನ ದೃಶ್ಯರೂಪಳಾದ ಪ್ರಕೃತಿಯೇ, ನೀನು ನನಗೆ ಪ್ರಸನ್ನಳಾಗು, ನಿನ್ನ ಕೃಪೆಯ ಬಲದಿಂದಲೇ ವಿಶ್ವವಲಯದೊಳಗಿನ ಉತ್ಪತ್ತಿ ಮತ್ತು ಸ್ಥಿತಿಗಳು ಜರಗುವವು; ಹಾಗು ನಿನ್ನ ಕ್ರೋಧದ ಯೋ ಗದಿಂದಲೇ ಈ ಇಡಿ ವಿಶ್ವವು ಪ್ರಲಯವಾಗುವದು. ನಿನ್ನ ರೌದ್ರ ರೂಪದಿಂದ ಈ ದೇಶಕ್ಕೆ ಯಾವ ದುರ್ದೆಸೆಯುಂಟಾಗಿರುವದೊ, ಅಂಥ ಈ ರಾಷ್ಟ್ರದಮೇಲೆ ನಿನ್ನ ಪ್ರಸನ್ನ ದೃಷ್ಟಿಯನ್ನು ಕೆಡವಿ ಇದನ್ನು ದುಃಖವಿಮುಕ್ತವಾಗಮಾಡು, ಕೃಪಾ ನಿಧೇ, ನೀನು ಗಣೇಶದೇವನ ನ್ನು ಬಂಧಮುಕ್ತ ಮಾಡಿಸು; ಮತ್ತು ಈ ನಿನ್ನ ಕೃಪೆಯ ಯೋಗ ದಿಂದ ಅತ್ಯಾಚಾರಗಳಿಂದ ಪೀಡಿತವಾದ ಈ ಹತಭಾಗ್ಯ ದೇಶದಲ್ಲಿ ಸೌಭಾಗ್ಯದ ಉದಯವಾಗಲಿ!" ಎಂದು ಉಚ್ಚಾರಮಾಡಿ, ಮತ್ತೆ ಆಜ್ಯಾಹುತಿಯನ್ನು ಹಾಕಿದಳು. ಆಗ ಶಕ್ತಿಯು-ಸನ್ಯಾಸಿನೀ, ತಥಾಸ್ತು! ಮಹಾಶಕ್ತಿಯು ಆ ಕಾರ್ಯಕ್ಕಾಗಿ ನನ್ನನ್ನೇ ನಿಯೋಜಿಸಿದ್ದಾಳೆ ಎಂದು ನುಡಿದಳು,