ಪುಟ:ಶಕ್ತಿಮಾಯಿ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬f ಶಕ್ತಿಮಯ, ಹದಿನೇಳನೆಯ ಪ್ರಕರಣ

ಸ೦ ಹಾ ರ. ಆಗ ಸನ್ಯಾಸಿನಿಯು ಕಣ್ಣುಗಳನ್ನು ತೆರೆದು ಶಕ್ತಿಮಯಿಯ ನ್ನು ನೋಡಿ " ನೀನು ಶಕ್ತಿಮಯಿಯು; ಸುಲತಾನೆಯು! ಹೀಗಿದು ನೀನು ಗಣೇಶದೇವನಿಗೆ ಮುಕ್ತಿ ಪ್ರದಾನ ಮಾಡುವ ಬಗೆ ಹೇಗೆ??” ಎಂದು ಕೇಳಿದಳು. ಶಕ್ತಿ- ಈ ಮೊದಲೇ ನಾನು ಅವನನ್ನು ಮುಕ್ತ ಮಾಡ ಹೋಗಿದ್ದೆನು; ಆದರೆ ಅವನು ನನ್ನ ಸಹಾಯದಿಂದ ಬಂಧಮುಕ್ತ ನಾಗಲಿಕ್ಕೆ ಒಪ್ಪದಾಗಿದ್ದಾನೆ.” ನಂತರ ಶಕ್ತಿಯು ಈ ಪೂರ್ವದ ಸಮಸ್ತ ಸಂಗತಿಗಳನ್ನೂ ಸನ್ಯಾಸಿನಿಗೆ ನಿವೇದಿಸಿ-ತಾವು ನನ್ನೊಡ ನೆ ಅಲ್ಲಿಗೆ ಬರಬೇಕು. ಇಗೋ, ಈ ಉಂಗುರವನ್ನು ದ್ವಾರ ಪ್ರದೇಶ ದಲ್ಲಿ ತೋರಿಸಿ ನಾವು ಇನ್ನೂ ಗಣೇಶದೇವನಿರುವ ಕಾರಾಗೃಹವನ್ನು ಪ್ರವೇಶಿಸಬಹುದಾಗಿದೆ. ಅಲ್ಲಿಗೆ ಹೋದಬಳಿಕ ತಾವು ಅವನನ್ನು ಸಂಗಡ ಕರಕೊಂಡು ಪಲಾಯನ ಮಾಡಬೇಕು. ಶಕ್ತಿಮಯಿಯ ಆ ಮಾತನ್ನು ಕೇಳಿ ಯೋಗಿನಿಯು ಆಶ್ಚರ್ಯ ಭರದಿಂದ ಎದ್ದು ನಿಂತಳು. ಪುನಃ ಶಕ್ತಿಯು ಅವಳಿಗೆ ಯೋಗಿ ನೀ ಸ್ವಲ್ಪ ತಡೆ ; ನಾನು ಈ ಪಿತಾಂಬರವನ್ನು ಬಿಡಬೇಕಾಗಿರುತ್ತದೆ. ನನಗೊಂದು ಬೇರೆ ಬಟ್ಟೆಯನ್ನು ಕೊಡುವೆಯಾ? ಎಂದು ಕೇಳಲು, ಸನ್ಯಾಸಿನಿಯು ತನ್ನ ಹಳೆಯದೊಂದು. ಕವೀಶಾಟೆಯನ್ನು ಆಕೆಯ ಮುಂದೆ ಮಾಡಿದಳು. ಶಕ್ತಿಯು ಲಗುಬಗೆಯಿಂದ ತನ್ನ ಪೀತಾಂಬರವನ್ನು ಬಿಟ್ಟು ಅದನ್ನು ಉಟ್ಟು ಕೊಂಡಳು. ಬಳಿಕ ತನ್ನ ಅಮಲ್ಯ ಶಾಲನ್ನು ಹರಿದು ಸರಿಯಾಗಿ ಎರಡು ತುಂಡುಮಾಡಿ,