ಪುಟ:ಶಕ್ತಿಮಾಯಿ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ವಂಗೇಶ್ವರನು ೧೩೬೧ರಲ್ಲಿ ದಿಲ್ಲಿಯ ಆಧೀನತೆಯನ್ನು ಕಿತ್ತೊಗೆದು, ಸ್ವತಂತ್ರನಾದನು; ಹಾಗು ಆಗ ಅವನು ದೇಶದಲ್ಲೆಲ್ಲ ಮಹೋತ್ಸವಗ ನ್ನು ಮಾಡಿ, ಸುಲ್ತಾನ' ಎಂಬ ಶ್ರೇಷ್ಠವಾದ ಬಿರುದನ್ನು ಧರಿಸಿದ ನು. ಈ ವಿಜಯೋತ್ಸವದ ಸ್ಮಾರಕವೆಂದು ಪ್ರತಿವರ್ಷವೂ ರಾಜಧಾ ನಿಯಲ್ಲಿ ಆ ಮಿತಿಗೆ ಉತ್ಸವಗಳು ಮಾಡಲ್ಪಡುತ್ತಿದ್ದವು. ಮಲ್ಲಯು ', ದಾಂಡಪಟ್ಟೆ, ಕುದುರೆ ಹತ್ತುವದು ಮೊದಲಾದ ಆಟಗಳು ಆ ಉತ್ಸವದ ಮುಖ್ಯ ಅಂಗಗಳಾಗಿದ್ದವು. ಮಲ್ಲಯುದ್ಧದಲ್ಲಿಯೂ ಅಸ್ವಾದಿಯುದ್ದಗಳಲ್ಲಿಯೂ ವಿಜಯಹೊಂದಿದವರನ್ನು ಪಾರಿತೋ ಷಕಗಳೇ ಮೊದಲಾದವುಗಳಿಂದ ವಂಗೇಶ್ವರನು ಚನ್ನಾಗಿ ಸನ್ಯಾಸಿ ಸುತ್ತಿದ್ದನು. ಇಂದು ಪಾಂಡುಯಾಯ ರಾಜಧಾನಿಯಲ್ಲಿ ವಿಜಯೋತ್ಸವವು ತಳಿರುತೋರಣಗಳಿಂದಲೂ, ಧ್ವಜಪತಾಕೆಗಳಿಂದಲೂ ದುರ್ಗಪ್ರದೇ ಶವು ಸುಶೋಭಿತವಾಗಿದೆ. ಪ್ರೇಕ್ಷಕರು ಸಂದಟ್ಟಿತರಾಗಿದ್ದಾರೆ. ಈ ಒಳಗಾಗಿ ಆಲಿಯಾಸ ಶಹನು ಮೃತನಾದ್ದರಿಂದ ಅವನ ಮಗನಾ ದ ಸುಲ್ತಾನ ಶಿಕಂದರಶಹನು ಈಗಿನ ವಂಗೇಶ್ವರನು, ಎತ್ತರವಾದ ಮಂಚದಮೇಲೆ ನಾನಾತರದ ಪುಷ್ಪಗುಚ್ಛಗಳಿಂದ ಪರಿವೇಷ್ಟಿತವಾದ ಅತ್ಯುಚ್ಚ ನಿಂಹಾಸನದಲ್ಲಿ ಸುಲ್ತಾನನು ಕುಳಿತಿದ್ದಾನೆ. ವಂಗದೇಶ ದ ನಾನಾ ಪ್ರದೇಶಗಳಿಂದ ಆಮಂತ್ರಿತರಾದ ಮಾಂಡಲಿಕರಾಜರೂ, ಸರದಾರರೂ, ಜಮೀನದಾರರೂ, ಪ್ರತಿಷ್ಟಿತ ಗೃಹಸ್ಪರ ಬಂದು ಯೋಗ್ಯತೆಯ ಪ್ರಕಾರ ಸುಲ್ತಾನನ ಪಾಶ್ವ೯ಭಾಗಗಳಲ್ಲಿ ಕುಳಿತಿ ದ್ದಾರೆ. ಕುಜಟ್ಟಿಗಳ ಅರ್ಭಟವೂ, ಕತ್ತಿಗಳ ಖಣಖಣಾಟವೂ, ಪ್ರೇಕ್ಷಕಗಣದ ಭಲೆ, ಶಾಬಾಸ್, ವಾಹವ್ಯಾ ಎಂಬ ಉತ್ಸಾಹಜನಕ ಶಬ್ಬಗಳ ಧ್ವನಿಯ ಸಮ್ಮಿಲಿತವಾಗಿ ಆ ಪ್ರದೇಶವೆಲ್ಲ ನಿನಾದನು ಯವಾದಂತೆ ಭಾಸವಾಗುತ್ತಿತ್ತು,