ಪುಟ:ಶಕ್ತಿಮಾಯಿ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ ಶಕ್ತಿಮಯಿ, ೧೭೧ ಧನ್ಯಳಾದೆನೆಂದು ಸಮಾಧಾನವೆನಿಸುವದಲ್ಲದೆ, ಆಕೆಯ ಯೋಗದಿಂದ ಗಣೇಶದೇವನ ಬಂಧಮುಕ್ತತೆಯ ಅನಾಯಾಸವಾಗಿ ಆಗುವದೆಂದು. ಯೋಚಿಸಿ, ಸನ್ಯಾಸಿನಿಯು ಆ ಕೆಲಸಕ್ಕೆ ಪ್ರವೃತ್ತಳಾದಳು. ಬಳಿಕ ಶಕ್ತಿಯು ಸನ್ಯಾಸಿನಿಯನ್ನು ಲಗುಬಗೆಯಿಂಧ ಕರ ಕೊಂಡು ಕಾರಾಗಾರಕ್ಕೆ ಬಂದಳು. ಆಗ ರಾತ್ರಿಯ ನಾಲ್ಕನೆಯ ಜಾವವು ಪ್ರಾರಂಭವಾದ್ದರಿಂದ ಅಲ್ಲಿಯ ಈ ಮೊದಲಿನ ಕಾವಲುಗಾ ರರ ಸರತಿಯು ತೀರಿ ಬೇರೆಯವರು ಪಹರೆ ಮಾಡುತ್ತಿದ್ದರು. ಅದರಿಂದ ಶಕ್ತಿಮಯಿಯು ಪುನಃ ಕಾರಾಗೃಹವನ್ನು ಸೇರಲಿಕ್ಕೆ ಯಂಡ ವೂ ಬಾಧೆಯುಂಜಾಗಲಿಲ್ಲ. ಅವಳು ತನ್ನಲ್ಲಿದ್ದ ಬಾದಶನ ಮೊಹ ದಿನ ಉಂಗುರವನ್ನು ಚೀಲಖಾನೆಯ ಮುಖ್ಯ ಕಾವಲುಗಾರನಿಗೆ ತೋರಿಸಿದೊಡನೆ ಅವನು ಗಣೇಶದೇವನಿನ್ನ ಕೋಣೆಯ ಬಾಗಿಲು ತೆರೆದು ಕೊಟ್ಟನು. ಕೂಡಲೆ ಶಕ್ತಿಯು ತೀರ ಕಗ್ಗತ್ತಲಿನ ಮಲೆಯನ್ನು ಸೇರಿ ತನ್ನ ಮೈಮೇಲಿನ ಶಾಲನ್ನು ಯೋಗಿನಿಯ ಮುಂದೆ ಚೆಲ್ಲಿದಳು, ಆಗ ಯೋಗಿನಿಯು ರಾಜಕುಮಾರ, ರಾಜಕುಮಾರ ಎಂದು ಮೆಲ್ಲಗೆ ಕೂಗಿದಳು. ನಿದ್ದೆ ಹತ್ತಿದ್ದ ಗಣೇಶದೇವನು ಒಮ್ಮೆಲೆಎಪ್ಪತ್ತು-ಒಲ್ಲೆನು; ಶಕ್ತಿ, ನಾನು ಇಲ್ಲಿಂದ ಹೋಗಲಿಕ್ಕೆ ಒಳ್ಳೆನು, ನಿನ್ನ ಸಹಾಯ ಪಡೆದು ಬಂಧಮುಕ್ತನಾಗುವದು ಪ್ರಶಸ್ತವಾಗಿ ಕಾಣುವದಿಲ್ಲವಾದ್ದ ರಿಂದ ನಾನು ಹೋಗಲಾರೆನು,” ಎಂದು ಮಲಗಿಕೊಂಡೇ ನುಡಿದನು, ಸನ್ಯಾಸಿನಿ-ಕುಮಾರ, ನಾನು ಶಕ್ತಿಯಲ್ಲ; ಎದ್ದೇಳು, ನಿನ್ನನ್ನು ಬಿಡಿಸಿಕೊಂಡು ಹೋಗುವದಕ್ಕೆಂದೇ ಬಂದಿರುವೆನು. ಗಣೇಶದೇವನಿಗೆ ಯೋಗಿನಿಯ ದನಿಯು ಗುರಲು ಹತ್ತಿದ್ದರಿಂದ ಆಕೆಯ ಕರುಣಾಳುತನಕ್ಕಾಗಿ ಅವನ ಹೃದಯವು ತುಂಬಿಬಂದಿತು; ಕುತ್ತಿಗೆಯ ಬಿಗಿಯಿತು; `ಮೈ ಮೇಲೆ ರೋಮಾಂಚಗಳಿದ್ದವು, ಶ