ಪುಟ:ಶಕ್ತಿಮಾಯಿ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ 4. ಭದ್ರಿಕ ಬಾದಶಹನ ಪಲ್ಲಂಗದ ತೀರಸಮೀಪಕ್ಕೆ ಎಳೆದು ಅದರಮೇಲೆ ಕುಳಿತು ಬಾದಶಹನ ಕಿವಿಯಲ್ಲಿ ಏನೇನೋ ಹೇಳಿದನು. ಬಳಿಕ ಬಾದಶಹನು ಕುತುಬನಿಗೆ ಸತ್ಯವಾಡುತ್ತೀಯಾ? ಕುಶುಬ್ರ ನೀನುಸುರುವ ಸಂಗತಿಯು ಸತ್ಯವೆ? ಎಂದು ಕೇಳಲು, ಕುತುಬನು ಒಳ್ಳೆ ಗಾಂಭೀರ್ಯದಿಂದ-ಸತ್ಯವು, ಆ ಸಂಗ ತಿಯು ಸತ್ಯವಾಗಿದ್ದು, ಅದರ ಪ್ರತ್ಯಕ್ಷ ಪ್ರಮಾಣಮಾಡಿಕೊಡುವದ ಆಗಿ ಬಾದಶಹರನ್ನೇ ಅಲ್ಲಿಗೆ ಕರೆದೊಯ್ಯಲು ಬಂದಿರುತ್ತೇನೆ; ಜಹಂ ಸನ್ನರವರ ಬಳಿಯಲ್ಲಿ ಅಸತ್ಯವಾಡುವದುಂಟೆ? | ಬಾದಶಹ-ತಿಳಿದಹಾಗಾಯಿತು ಬಿಡು, ಇನ್ನು ಕಣ್ಣಲೆನೋಡು ವದೇಕೆ? ನಾನು ಮೊದಲೇ ಈ ಅನುಮಾನವನ್ನು ಮಾಡಿದ್ದೆನು. ಆಗಲಿ, ನೀನು ಜೇಲಿಗೆ ಹೋಗಿ ಅವನ ಛಿನ್ನ ಮುಂಡವನ್ನು ತಂದು ನನ್ನ ಮುಂದಿಡಬೇಕು. ಕುತುಬ, ಹೋಗು ಹಾಗಾದರೆ ಈಗಿಂದೀಗಲೇ, ಕುತುಬ-ಯಾರ ಮುಂಡವನ್ನು? ಬಾದಶಹ-ಯಾರಶಿರವನ್ನು ವಿಯಾ?ಆ ನರಾಧಮುಗಣೇಶದೇವನ. ಕುತುಬ-ಹಾಗು ಬೇಗಮಸಾಹೇಬರನ್ನೇನು ಮಾಡಬೇಕು?ಅಪ್ಪಣೆ. ಬಾದಶಹನು ಅತ್ಯಂತ ಕ್ರುದ್ಧ ಸ್ವರದಿಂದ ಬೇಗಮಳ ವಿಷ ಯಕ್ಕೆ ನೀನೇನೂ ಮಾಡುವ ಕಾರಣವಿಲ್ಲ. ಆಕೆಯ ಶಿಕ್ಷೆ-ಮೋಕ್ಷಗಳ ವಿಚಾರವನ್ನು ನಾನೇಸ್ವಂತಮಾಡಕ್ಕವನು. ನಿನಗೇಕೆ ಆಕೆಯಗೊಡವೆ? ಬಾದಶಹನ ಕಡೆಯ ಆ ಶಬ್ದದಿಂದ ಕುತುಬನಮೋರೆಯಾ ಕು, ತಾನು ಕೋರಿದ್ದಂತೆ ಗಣೇಶದೇವನ ಶಿರಚ್ಛೇದಮಾಡಲು ಬಾದಶಹನು ಅಪ್ಪಣೆ ಕೊಟ್ಟಿದ್ದರೂ, ತನ್ನ ಪ್ರಧಾನವೈರಿಯಾದ ಶಕ್ತಿ ಮಯಿಯ ವಿಷಯಕ್ಕೆ ಬಾದಶಹನು ಏನೂ ಆಜ್ಞೆ ಮಾಡಿದ್ದ ರಿಂದ ಅವನಿಗೆ ಸಮಾಧಾನವೆನಿಸಲಿಲ್ಲ. ಬಳಿಕ ಅವನು ಬಾದಶಹ ನಿಗೆ ಮತ್ತೊಮ್ಮೆ ಕರ್ನಿಸಾತು ಮಾಡಿ ರಾಜಾಜ್ಞೆ ಪರಿಪಾಲನಕ್ಕಾಗಿ