ಪುಟ:ಶಕ್ತಿಮಾಯಿ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶ, ಚಂದ್ರ, ದುರ್ಗದ ನಾಲ್ಕೂ ಕಡೆಗಳಲ್ಲಿ ತರತರದ ಅಂಗಡಿಗಳು ಸಾ ಲ್ಗೊಂಡಿದ್ದವು. ಕೆಲವುಗಳಲ್ಲಿ ತಿಂಬುಂಬುವ ಪದಾರ್ಥಗಳೂ, ಕೆ ಅವುಗಳಲ್ಲಿ ಮನೋಹರವಾದ ಚಿತ್ರಗಳೂ ಇದ್ದರೆ, ಬೇರೆ ಕೆಲವು ಅಂಗಡಿಗಳಲ್ಲಿ ಲಕಲಕಿಸುವ ನಾನಾ ಜಾತಿಯ ಶಸ್ತ್ರಾಸ್ತ್ರಗಳು ರಾ ಶಿಗಟ್ಟಲೆ ಒಿದ್ದವು. ಇಂದಿನ ವಿಜಯೋತ್ಸವದ ನಿಮಿತ್ತವಾಗಿ ಎಲ್ಲ ಪ್ರಕಾರದ ಉದ್ಯೋಗಸ್ತರು ತಮ್ಮ ತಮ್ಮ ಸರಕುಗಳೊಡನೆ ಆ ದು ರ್ಗಪ್ರದೇಶಕ್ಕೆ ಬಂದು ಅಂಗಡಿಗಳನ್ನಿಟ್ಟು ವ್ಯಾಪಾರವನ್ನು ನಡೆಸಿದ್ದರು. ಈ ದಿವಸ ವಿಶೇಷ ಜನರು ಕೂಡುವದರಿಂದ ತಮ್ಮ ವ್ಯಾಪಾರವು ಹೆ 3ಾಗಬೇಕು, ತಮ್ಮ ವ್ಯಾಪಾರವು ಹೆಚ್ಚಾಗಬೇಕು ಎಂಬ ಮೇ ಲಾಟವ ಅವರಲ್ಲಿ ಸ್ವಾಭಾವಿಕವಾಗಿ ಕಂಡು ಬರುತ್ತಿತ್ತು. ಹೀಗೆ ಅಲ್ಲಿಯ ಅಂಗಡಿಗಳಲ್ಲಿ ಸಾಲಂಕೃತವಾಗಿ ಶೋಭಿಸುತ್ತಿರಲು, ಕಟ್ಟೆ ಕಡೆಯ ಒಂದು ಅಂಗಡಿಯಲ್ಲಿ ಒಬ್ಬ ಸಾಮುದ್ರಿಕಪೇಳುವ ಜೋ ಯಿಸನು ಕುಳಿತಿದ್ದನು. ಭವಿಷ್ಯದ ಬಗ್ಗೆ ಪ್ರಾಚೀನದಿಂದಲೂ ಆಸ್ತಿ ಕ ಭಾವವುಳ್ಳ ನಮ್ಮ ಹಿಂದೂ ಜನರು, ಬೋಯಿಸನು ಹೀಗೆ ಅಂಗಡಿ ಯಲ್ಲಿ ಬಂದು ಕುಳಿತಿರಲು ಆ ಸುಸಂಧಿಯನ್ನು ಕಳಕೊಳ್ಳುವರೇ? ಎಲ್ಲ ಅಂಗಡಿಗಳಿಗಿಂತಲೂ ಜೋಯಿಸನ ಅಂಗಡಿಗೆ ಹೆಚ್ಚು ಗಿರಾ ಕಿಗಳು ಕಲೆತರು. ಬಿನ್ ಭಾಂಡವಲದ ಆ ವ್ಯಾಪಾರದಿಂದ ಅವನಿಗೆ ವಿಶೇಷ ಪ್ರಯೋಜನವಾಗುತ್ತಿದ್ದರೂ ಬೆಳಗಿನಿಂದ ಒಂದೇಸವನೆ ಸಾಮು ದಿಕಹೇಳಿಹೇಳಿ ಅವನುಬೇಸತ್ತಿದ್ದನು. ಇನ್ನು ಅವನುಗುಡೆಚಾಪಿಕಟ್ಟತ ಕವನು, ಅಷ್ಟರಲ್ಲಿ ಒಬ್ಬ ತರುಣೀಮಣಿಯುಅಲ್ಲಿಗೆ ಬಂದು ಗಣಕನ ಮುಂದೆ ಕೈನೀಡಿದಳು. ಸುಂದರಿಯರ ಭಿಡೆಯು ಮಹಾಭಿಡೆಯಷ್ಟೆ? ಜೋಯಿಸನಿಂದ ಆಕೆಯ ಕೈನೋಡದೆ ಹೋಗುವದಾಗಲಿಲ್ಲ. ಆಗ ಅವನು ಆಕೆಯ ಎಡಗೈಯನ್ನೂ, ರಾಜರಾಜೇಶ್ವರೀಸಮಾನ ಲಕ್ಷಣ ಗಳುಳ್ಳ ಹಾಗು ತನ್ನ ಸೌಂದರ್ಯದ ಸೊಬಗಿನಿಂದ ಭೂಮಂಡಲ