ಪುಟ:ಶಕ್ತಿಮಾಯಿ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ.

  • ದ ಅನಾಹುತಕ್ಕೆ ಕಾರಣವಾಗುವಂಥ ಚಿಹ್ನಗಳುಳ್ಳ ಆಕೆಯ ಮೋರೆಯನ್ನು ದಿಟ್ಟಿಸಿ ನೋಡತೊಡಗಿದನು. ಯುವತಿಯು ಆ ಗಣ ಕನ ಕೈಯಲ್ಲಿ ಕಿಂಚಿತ್ ದ್ರವ್ಯವನ್ನಿಟ್ಟಳು. ಕೂಡಲೆ ಅವನು“ತಂಗೀ ನೀನು ರಾಜರಾಜೇಶ್ವರಿಯಾಗುವದುಖ೦ಡಿತವು ಎಂದನು,

ಅದೇಕಾಲಕ್ಕೆ ಒಬ್ಬ ಅಶ್ವಾರೂಢನು ಕುದುರೆಯನ್ನು ಸಾವಕಾಶವಾಗಿ ನಡೆಸುತ್ತ ಆ ಅಂಗಡಿಯ ಮುಂಭಾಗದಲ್ಲಿ ನಡೆದ ದ್ದನು. ಅಕಸ್ಮಾತ್ತಾಗಿ ಅವನು ಆ ತರುಣಿಯನ್ನು ನೋಡಿದನು. ಕೂಡಲೆ ಅವನು ಕುದುರೆಯನ್ನು ತಡೆದು ಆಕೆಯ ಕಡೆಗೆ ಏಕಾಗ್ರ ಚಿತ್ರದಿಂದ ನೋಡಹತ್ತಿದನು. ಅಷ್ಟರಲ್ಲಿ ಅಂಗಡಿಯಿಂದ ಜೋಯಿ ಸನು ಹೊರಟುಹೋದದ್ದರಿಂದ ಅಲ್ಲಿಯ ಜನಸಮೂಹವು ಕಡಿಮೆಯಾ ಯಿತು. ಆ ಸುಂದರಿಯು ಅವನಿಗೆ ತೀರ ಅಪರಿಚಿತಳು. ಕಣ್ಣು ಕು ಕುವಂತಿರುವ ಆಕೆಯ ಆ ಮನೋಹರ ರೂಪವನ್ನು ಅವನು ಈ ಮೊದಲು ನೋಡಿದ್ದಿಲ್ಲ. ಪೂರ್ವಜನ್ಮದಲ್ಲಿ ಈಕೆಯನ್ನು ಎಲ್ಲಿಯಾ ದರೂ ನೋಡಿದ್ದೆನೋ ಎನೋ ಎಂಬದನ್ನು ಜ್ಞಾಪಿಸಿಕೊಳ್ಳುವದ ನಂತೆ ಅವನು ಆಕೆಯನ್ನು ಒಂದೇಸವನೆ ನೋಡುತ್ತ ಮನಸಿನಲ್ಲಿ ಏ ನೋ ಆಲೋಚಿಸುತ್ತ ನಿಂತುಬಿಟ್ಟನು. ಆಗ ಅವನಿಗೆ ದೇವಾ ನವು ಸಹ ಉಳಿಯಲಿಲ್ಲ. ಬಹಳ ಹೊತ್ತಿನಮೇಲೆ ಅವನಿಗೆ ಸ್ವಪ್ನ ಭಾಸ ವಾದಂತಾಯಿತು. ಜನವಿರಹಿತವಾದ ಸರೋವರ, ಸುರಮ್ಯವಾದ ಈ ಪವನ, ಪ್ರಶಾಂತವಾದ ಸಮಯ, ಆದ್ರ್ರಕೇಶಗಳಿಂದಲ. ಆದ್ರ್ರ ವಸನಗಳಿಂದಲೂ ಸುಸ್ತಾತ ದಿವ್ಯರೂಪದಿಂದಲೂ ಸಹಚರಿಯರಿಂ ದಲೂ ಒಪ್ಪುವ ಪಾಲಿಕೆಯ ಮೂರ್ತಿಯೊಂದು ತನ್ನ ಕೈಯಲ್ಲಿ ಕೈ ಇಕ್ಕಿನಿಂತಂತೆ ಅವನಿಗೆ ಭಾಸವಾಯಿತು. ಅಷ್ಟರಲ್ಲಿ ಕುದುರೆಯ ಯಾವಕಾರಣದಿಂದಲೋ ಬೆದರಿ ಗೋಣನ್ನು ಮೇಲೆಮಾಡಿ ಮೈನಡು ಗಿಸಲು, ಆ ಸವಾರನ ಸ್ವಭಾಸವು ಲಯವಾಯಿತು. ಅಸ್ತ್ರಯೋ