ಪುಟ:ಶಕ್ತಿಮಾಯಿ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಸ, ಚಂದ್ರಕ, ದ್ವಾರರ ಚೀತ್ಕಾರದನಿಯಿಂದಲೂ, ಬಟ್ಟಂಗಿಗಳು ಉಷ್ಟ್ರ ಹಾಗು ಗಂ ಭೀರ ಸ್ವರದಿಂದ ಹೇಳುತ್ತಿದ್ದ ಪರಾಕುಗಳಿಂದಲೂ ಅವನ ಚಿತ್ತಭೇ ದವಾಯಿತು. ಕೂಡಲೆ ಅವನು ಆ ರಮಣಿಯ ಕಡೆಗೆ ಮತ್ತೊಮ್ಮೆ ನೋಡಿ ನಸುನಕ್ಕು ಕುದುರೆಯನ್ನು ಚಪ್ಪರಿಸಲು, ಅದು ಒತ್ತರದಿಂದ ನಡೆದು ಅನ್ವಯುದ್ದದ ಪಟಾಂಗಣವನ್ನು ಸೇರಿತು. ಕುಸ್ತಿಆಟ, ದಾಂಡ ಪಾ ಮುಂತಾದ ಆಟಗಳೆಲ್ಲ ಮುಗಿ ದು, ಗುರಿಹೊಡೆಯುವ ತೀರ ಕೊನೆಯ ಆಟವೊಂದೇ ಉಳಿದಿತ್ತು. ಆಗ ಸಿಕಂದರಶಹನು ಸಿಂಹಾಸನದಿಂದಿಳಿದು ಸಮೀಪದಲ್ಲಿಯೇ ಇದ್ದ ಪಟ್ಟದ ಕುದುರೆಯನ್ನೇರಿದನು; ಸಾಮಂತವರ್ಗದವರೂ ತಮ್ಮ ತಮ್ಮ ವಾಹನಗಳನ್ನೇರಿ ಬಾದಶಹನ ಪಾರ್ಶ್ವಗಳಲ್ಲಿ ನಿಂತರು. ಎದುರಿಗೆ ಸ್ತ್ರೀ ರೂಪದ ಒಂದು ಪಾಷಾಣಮೂರ್ತಿಯು ನಿಲ್ಲಿಸಲ್ಪಟ್ಟಿದ್ದು, ಆದರ ಕವೋಲಪ್ರದೇಶದ ಮೇಲೆ ಕುಳಿತಿರುವ ಪಕ್ಷಿಯನ್ನು ಅದು ಚುಂಬಿ ಸುವಂತೆ ಮಾಡಿದ್ದರು. ಆ ಪಕ್ಷಿಯ ಕಣ್ಣು ಒಡೆಯುವದೇ ಅ೦ ದಿನ ಗುರಿಯಾಗಿತ್ತು. ಆಸ್ತ್ರದ ಆಘಾತವು ಆ ಪಾಷಾಣಮೂತಿ೯ಯ, ಅದರಂತೆ ಪಕ್ಷಿಯು ಇತರ ಯಾವ ಅವಯವಗಳ ಮೇಲೂ ಆಗದಿ ರುವ ನಿರ್ಬಂಧವು ಇಡಲ್ಪಟ್ಟಿತ್ತು. ಹೀಗೆ ಈ ಪಣದ ಗುರಿಯಾಟವೇ ಇಂದಿನ ಎಲ್ಲ ಆಟಗಳಲ್ಲಿ ಮಹತ್ವದ್ದಾದ್ದರಿಂದ, ಇದನ್ನು ನೋಡಲು ಬಹಳ ಜನರು ಕಲೆತಿದ್ದರು. ಆಗ ವಂಗೇಶ್ವರನ ದರಕದಾರನು ಗೊ ಗ್ಲರದನಿಯಿಂದ ಜನರನ್ನು ಕುರಿತು ಈ ಗುರಿಯನ್ನು ಭೇದಿಸಿ ಸನ್ಮಾನಿತರಾಗ ಬಯಸುವವರು ಮುಂದೆ ಬರಬೇಕೆಂದು ಸುಲ್ತಾನಸಾ ಹೇಬರ ಆಜ್ಞೆಯಾಗಿರುತ್ತದೆ ಎಂದು ಮರುಮೂರುಸಾರೆ ಹೇಳಿ ದನು. ಇಂಧ ಕಠಿಣವಾದ ಹಣವನ್ನು ಗೆದ್ದೇ ಗೆಲ್ಲುವೆವೆಂಬ ಮನೋ ನಿಶ್ವಯವು ನೆರೆದ ಜನರಲ್ಲೊಬ್ಬರಲ್ಲಣ ಉಂಟಾಗದ್ದರಿಂದ ಯಾರೂ ಮುಂದಕ್ಕೆ ಬರಲಿಲ್ಲ. ಕಡೆಗೆ ನಮ್ಮ ಆ ತೇಜಸ್ವಿಯಾದ ಅಶ್ವಾರೂ