ಪುಟ:ಶಕ್ತಿಮಾಯಿ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿವಿ ೧೫ ಕೇಳಿಕೊಂಡಳು. ಹಾಗು ಗಣೇಶದೇವನ ಕಡೆಗೆ ನೋಡಿ ನಾಚಿ ತುಸ ಮೋರೆಯನ್ನು ಬೊಗ್ಗಿ ಸಿನಿಂತಳು. ಸಭಾಮಧ್ಯದಲ್ಲಿ ಬಂದು ಪ್ರತ್ಯಕ್ಷ ಸುಲ್ತಾನನಪುತ್ರನನ್ನೇ ಈ ಪ್ರಕಾರಪ್ರಶ್ನೆ ಮಾಡಿದ ಆ ಲಲ ನಾಮಣಿಯ ಸಾಹಸಕ್ಕೆ ನೆರೆದ ಜನರೆಲ್ಲರೂ ಬೊಟ್ಟು ಕಚ್ಚಿದರು. ಆಗ ಗಾಯಸುದ್ದೀನನು ಅವಳ ಆ ಶುಷ್ಕ ಬಕುಲಮಾಲೆಯನ್ನು ಅವ ಳಿಗೆ ತಿರುಗಿಕೊಟ್ಟನು. ಮಾಲಾಧಾರಿಣಿಯಾದ ಯುವತಿಯ ಗಣೇ ಶದೇವನಕಡೆಗೆ ಓರೆನೋಟದಿಂದ ಒಮ್ಮೆ ನೋಡಿ, ಭರದಿಂದ ತರಳಿದಳು. s ೩ನೆಯ ಪ್ರಕರಣ. ಮನಸ್ಸಿನ ಹೊಯ್ದಾಟ. - ಸಂಧ್ಯಾ ಕಾಲವು, ಹಗಲೆಲ್ಲ ಒಂದೇಸಮನೆ ದಾರೀಕ್ರಮಿಸಿ ದಣಿ ದಿದ್ದ ಆಕಾಶರಾಜನಾದ ಸೂರ್ಯನು ವಿಶ್ರಾಂತಿಗಾಗಿ ಪಶ್ಚಿಮಾಚಲ ವನ್ನು ಆಶ್ರಯಿಸುತ್ತಿದ್ದನು; ಅವನ ಸ್ವರ್ಣವರ್ಣದ ಕಿರಣಗಳು ನದಿಯ ಪ್ರವಾಹದಲ್ಲಿ ಪರಾವರ್ತನ ಹೊಂದಿ, ವಿರುದ್ಧ ದಿಕ್ಕಿನತೀರದ ವೃಕ್ಷಗಳ ಶಿಖರಗಳನ್ನು ಬೆಳಗುತ್ತಲಿವೆ. ಕುಮಾರ ಗಣೇಶದೇವನು ಈವರೆಗೆ ವೇಗದಿಂದ ಬಿಟ್ಟಿದ್ದ ತನ್ನ ಕುದುರೆಯನ್ನು ನಿವಾಸಸ್ಥಳವು ಸಮೀಪಿಸಿದ್ದರಿಂದಲೋ, ಸಂಧ್ಯಾ ಸಮಯದ ಪ್ರಶಾಂತಶೋಭೆಯನ್ನು ನೋಡುವದಕ್ಕೋ ಈಗ ಅದನ್ನು ಮಂದಮಂದವಾಗಿ ನಡಿಸಹತ್ತಿ ದ್ದನು. ಅವನ ಮನಸ್ಸು ಮಧ್ಯಾಹ್ನ ದಲ್ಲಿ ನಡೆದ ವಿಜಯೋತ್ಸವದ ಶೋಭೆಯನ್ನು ನೋಡುವದರಲ್ಲಿ ತೊಡಗಿದ್ದಿಲ್ಲ; ತನಗೇ ವಿಜಯ ವಾಗಿ ತಾನು ವಂಗೇಶ್ವರನಿಂದ ಬಹಳ ಗೌರವವನೆಂಬ ಸ್ವಾಭಿ ಮಾನದಿಂದ ಆವರಿಸಿದ್ದಿಲ್ಲ; ಆದರೆ ಅದು ಸಭಾಮಧ್ಯದಲ್ಲಿ ಅಕ