ಪುಟ:ಶಕ್ತಿಮಾಯಿ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

** ಶಕ್ತಿಮಯ, ಅದೇ ಅವಳು ಈಗ ಪ್ರೌಢದೆಸೆಯಲ್ಲಿ ವಿವಾಹಬಂಧನದಿಂದ ಪರಸ್ತ್ರೀ ಯಾಗಿರಲು, ಅವಳಕೂಡ ಮಾತಾಡಲಿಕ್ಕೆ ಅಷ್ಟೇ ಅಲ್ಲ-ಅವಳಕಡೆಗೆ ನೋಡಲಿಕ್ಕೆ ಕೂಡ ಆ ಸಮಾಜಬಂಧನಭೀರುವಾದ ಕುಮಾರನಿಗೆ ಬಹಳ ಸಂಕೋಚವೆನಿಸಹತ್ತಿತು. ಒಂದುಕಡೆಗೆ ಬಾಲ್ಯ ಸಖತ್ವದ ಮಡಿಲಕ ಉಂಟಾದ ಸ್ವಾಭಾವಿಕ ಉತ್ಸಾಹವೂ, ಮತ್ತೊಂದುಕಡೆ ಗೆ ಸಮಾಜಬಂಧನಕ್ಕಾಗಿ ವಹಿಸಬೇಕಾದ ಸಂಕೋಚಭಾವವೂ ಅವ ನಲ್ಲಿ ಹುಟ್ಟಿ ಅವೆರಡರ ವಿರುದ್ಧ ಪ್ರವಾಹಗಳ ಆಘಾತದಿಂದ ಅವನನ ನಸ್ಸು ಮತ್ತಿಷ್ಟು ವಿಕ್ಷಿಪ್ರವಾದ್ದರಿಂದ ಅವನಿಗೆ ಶಕ್ತಿಯ ಮಾತು ಕಥೆಗಳು ಕೂಡ ಬೀಡಾದವು. ಆದರೆ ಶುದ್ಧಾಂತಃಕರಣದ, ಸಮಾಜಬಂಧನಗಳ ಸಂವೂ ರ್ಣಜ್ಞಾನವಿಲ್ಲದ ಶಕ್ತಿಯ ಮನಸ್ಸಿನಲ್ಲಿ ಈ ತರದ ಸಂಕೋಚವು ಲೇಶ ಮಾತ್ರವೂ ಇರಲಿಲ್ಲ. ಅದರಿಂದ ಆಕೆಯು ಸ್ವಾಭಾವಿಕವಾಗಿ ವೀರನೇ, ಕುದುರೆಯಿಂದಿಳಿದು ತುಸುಹೊತ್ತು ನಿಲ್ಲುವದಿಲ್ಲೇನು? ಈ ದಿವಸ ವಿಜಯವನ್ನು ಸಂಪಾದಿಸಿ ಬಹುದೊಡ್ಡ ಸನ್ಮಾನಹೊಂದಿದ ಮಾತ್ರದಿಂದ, ನನ್ನ ಈ ಹೂಮಾಲೆಯು ನಿನಗೆ ತುಚ್ಛವಾಯಿತೇ? ಆಗ ಕುಮಾರನ ಸಂಕೋಚಭಾವವು ತನ್ನಷ್ಟಕ್ಕೆ ಅಡಗಲು ಅವನು- “ಈ ಶುಷ್ಕ ಹೂಮಾಲೆಯನ್ನು ನನ್ನ ಸನ್ಮಾನಕ್ಕಾಗಿಯೇ ತೂರಿದ್ದಿಯೇನು? ಎಂದು ಕೇಳಿದನು. ಶಕ್ತಿ-ಅದಕ್ಕಾಗಿಯೇ ಬುದ್ಧಿಪೂರ್ವಕವಾಗಿ ತೂರಿದ್ದೆನು; ಆದರೆ ಅದು ಕುಂಠಿತಗತಿಯಾಗಿ ನಿನ್ನ ವರೆಗೆ ಬರದೆ, ಅನ್ನ ಸ್ಥಾನದಲ್ಲಿ ಬಿದ್ದದರಿಂದ ಅದರ ಕುಸುಮಗಳು ಉದುರಿಹೋದವು. ಆಗ ಕುಮಾರನು ಕುದುರೆಯಿಂದಿಳಿದುನಗುತ ನಗುತ್ತ-ಒಣಗಿ ದ ಹೂಮಾಲೆಯ ಕಾಣಿಕೆಯೇ? ಇದು ಸನ್ಮಾನವೋ ಉಪಹಾಸವೊ? ಶಕ್ತಿಯು ಅದಕ್ಕೆ ಉತ್ತರ ಕೊಡಲಿಲ್ಲ. ಬಳಿಕ ಅವಳು