ಪುಟ:ಶಕ್ತಿಮಾಯಿ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ, ಚಂದ್ರಿಕೆ ಕುಮಾರನು ತನಗೆ ಇಂದೇ ಕಾಣಿಕೆಯಾಗಿ ದೊರೆತ ಅಮ ಲ್ಯ ಬಡ್ಡಕ್ಕೆ ಕೈನೀಡಿ-ಶಕ್ತಿ, ಈ ಬಹುಮಲ್ಯ ಖಡ್ಗಕ್ಕಿಂತಲೂ ಈ ಸಾಮಾನ್ಯ ಕೊಳಲು ನನಗೆ ಹೆಚ್ಚು ಬೆಲೆಯುಳ್ಳದ್ದಾಗಿದೆ. ಈ ಖಡ್ಗವನ್ನು ಬೇಕಾದರೆ ನೀರಿನಲ್ಲಿ ಚಲ್ಲುವೆನು; ಆದರೆ ಈ ಕೊಳಲು ದೇಹದಂತೆ ಯತ್ನಪೂರ್ವಕವಾಗಿ ಸಂಗ್ರಹಿಸಿಡತಕ್ಕ ಸಾಮಗ್ರಿಯಾ ಗಿದೆ. ನಿನ್ನ ಪೂರ್ವದ ಸ್ನೇಹದ ನೆನಪಿಗಾಗಿ ನನ್ನ ಬಳಿಯಲ್ಲಿ ಇ. ದೊಂದೇ ವಸ್ತುವು ಉಳಿದಿರುತ್ತದೆ. ಕುಮಾರನ ಈ ಸಂಭಾಷಣದಿಂದ ಮೊದಲೇ ಕಾಂತಿಮಯವಾ ಗಿದ್ದ ಶಕ್ತಿಯ ಕಪೋಲಗಳು ಮತ್ತಿಷ್ಟು ನಸುಗೆಂಪಿನ ಪ್ರಭೆಯಿಂದ ಶೋಭಿಸಹತ್ತಿದವು. ಆಗ ಆಕೆಯು ನಗುತ್ತ ತಲೆಯಮೇಲಿನ ಸಿನ ಗನ್ನು ಬದಿಗೊತ್ತಿ ಕೊರಳಲ್ಲಿದ್ದ ಹೂಮಾಲೆಯನ್ನು ಕೈಯಿಂದ ಹಿಡಿದು_ಕುಮಾರ, ಕೊಳಲು ನಿನಗೆ ಹೇಗೆಪಿಯವೋ ಹಾಗೆಯೇ ನನಗೆ ಈ ಶುಷ್ಕ ಹೂಮಾಲೆಯು; ಇದು ನಿನ್ನ ಕೈಯಿಂದ ಬಂದ ಕಾಣಿಕೆಯು, ಇದರಷ್ಟು ಬೆಲೆಯುಳ್ಳ ಪದಾರ್ಥಗಳು ನನ್ನಲ್ಲಿ ಬೇ ರೊಂದಿಲ್ಲ. ಇಂಥ ಅಮೂಲ್ಯ ಶಿರವನ್ನು ಇಂದು ಮಧ್ಯಾಹ್ನ ನಿನ್ನ ವಿಜಯ ಕಾಲಕ್ಕೆ ನಿನಗೊಪ್ಪಿಸಿ ನನ್ನ ಆಹ್ವಾದವನ್ನು ವ್ಯಕ್ತಪಡಿಸಿದ್ದೆ ನು, ಹೀಗಿರಲು ನೀನು ಒಣಮಾಲೆಯ ಕಾಣಿಕೆಯೇ? ಇದು ಸನ್ಮಾ ನವಲ್ಲ, ಉಪಹಾಸವೆಂದು ಅಂದೆಯಲ್ಲ? ಇದನ್ನು ಕೇಳಿದಾಗ ಒಂದು ತರದ ವಿದ್ಯುತವಾಹವು ಕುಮಾ ರನ ಹೃದಯವನ್ನು ಕಂಪಿಸಿಬಿಟ್ಟಿತು. ಅದರಿಂದ ಸುಖವಾಯಿತೋ ದುಃಖವಾಯಿತೋಎಂಬದನ್ನು ಮಾತ್ರ ಅವನು ತಿಳಿಯದಾದನು.ನಿಮಿಷ ಮಾತ್ರದಲ್ಲಿ ಅವನ ಪ್ರಫುಲ್ಲ ಮುಖಬಿಂಬವು ವಿಲಕ್ಷಣವಾಗಿ ತೋರಿ ತು, ಅವನು ಶಕ್ತಿಯನ್ನು ಮರೆಯಲು ಶಕ್ತನಾಗಿದ್ದಿಲ್ಲವೆಂಬದು ಸ ತ್ಯವು, ಆದರೆ ಈ ವಿಷಯದಲ್ಲಿ ಅನ್ಯರ ದೋಷವು ಅವಮಾತ್ರವಿದ್ದಿಲ್ಲ;