ಪುಟ:ಶಕ್ತಿಮಾಯಿ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1,ಇಂದ್ರಿಕ. ಯಿಂದ ಕುಮಾರ ನಾನು ಯಾವ ಕಾರಣದಿಂದಹೊರಟುಹೋದನಂ ಬದನ್ನು ನೀನರಿಯೆ. ಒಂದುದಿನ ಬೆಳಿಗ್ಗೆ ನನ್ನ ತಂದೆಯು ನಾನು ತೀರ್ಥಯಾತ್ರೆಗೆ ಹೊರಡುವದಕ್ಕಾಗಿ ಒಂದು ನೌಕೆಯನ್ನು ಗೊತ್ತು ಮಾಡಿರುವೆನು. ನೀನೂ ನಮ್ಮೊಡನೆ ನಡೆ.' ಎಂದನು. ಆಗ ನಾನು ಒಮ್ಮೆ ರಾಜಮಂದಿರಕ್ಕೆ ಬಂದು ನಿನ್ನನ್ನು ಕಂಡುಹೋಗಬೇಕೆಂದು ಬಹಳ ಪ್ರಯತ್ನ ಪಟ್ಟೆನು. ಆದರೆ ನನ್ನ ತಂದೆಯು ನನಗೆ ಸ್ವಲ್ಪವೂ ಅವಕಾಶಕೊಡದೆ ಕೂಡಲೆ ತನ್ನೊಡನೆ ನೌಕೆಯಲ್ಲಿ ಕೂಡಿಸಿಕೊAಲ:ು ನಡೆದನು. ಈಗ ಆರುವರ್ಷಗಳಿಂದ ನಾನು ಅವನೊಡನೆ ಅಲ್ಲಲ್ಲಿ ಅಡ್ಡಾದಿದೆನು. ನಿತ್ಯದಲ್ಲ ನಾನು ಅವನಿಗೆ ಮನೆಗೆ ಎಂದು ಹೋಗುವದು?' ಎಂದು ಕೇಳುತ್ತಿದ್ದನು. ಅದಕ್ಕೆ ಅವನು -'ಮುಂ ದಿನಕ್ಷೇತ್ರವನ್ನು ನೋಡಿಕೊಂಡು' ಎಂದು ನಿಶ್ಚಿತ ಉತ್ತರವನ್ನು ಕೊಡುತ್ತಿದ್ದನು. ನಾನು ಈ ಆರುವರ್ಷಗಳನ್ನು ಎಷ್ಟು ಕಷ್ಟದಿಂದ ಕಳೆದಿರುವೆನೆಂಬದು ಭಗವಂತನೊಬ್ಬನಿಗೆ ಗೊತ್ತು; ಹಾಗೂ ಈ ಒಣಹೂಮಾಲೆಗೊಂದು ಗೊತ್ತು, ಆಕೆಯಮಾತು ಮುಗಿಯುವಷ್ಟರಲ್ಲಿ ಕುಮಾರನು ವಿಸ್ಮಯ ದಿಂದ-ನಿನ್ನ ವಿವಾಹವಾಗಿರುವದೆಂದು ನಾನು ಭಾವಿಸಿದ್ದೆನು. ಹಾಗಾದರೆ ನಿನ್ನ ಲಗ್ನ ವಿನ್ನೂ ಆಗಿಲ್ಲವೇನು? ಶಕ್ತಿ-'ಹೆಂಗಸರಿಗೆಲ್ಲಾದರೂ ಎರಡುಸಾರೆ ಲಗ್ನವಾಗುವ ದುಂಟೇ? ” ಎಂದು ನುಡಿದು ನಕ್ಕಳು.