ಪುಟ:ಶಕ್ತಿಮಾಯಿ.djvu/೩೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಸ, ಚಂದ್ರಿಕ. ಶಕ್ತಿಯು ಕಷ್ಟದಿಂದ ಹೊರಹೊರಡುವ ಅಶ್ರುಗಳನ್ನು ತಡೆ ದು... ನಿನ್ನ ರಾಣಿಯಾವಳು? ಕುಮಾರ-ನಿರೂಪಮೆಯು, ಶಕ್ತಿಯ ಸುಂದರವಾದ ಮುಖವುಕೂಡಲೇ ಈರ್ಷಾವಿಷ್ಕೃತ ವಾಯಿತು. ಆಗ ಅವಳು ಮನಸ್ಸಿನಲ್ಲಿ ಭಗವಾನ್, ನೀನು ಪುರು ಷರು ಹಾಗೂ ಹೆಂಗಸರು ಇವರಲ್ಲಿ ಈ ಪ್ರಕಾರದ ಅಸಮಾನ ಧಮ೯ ವನ್ನೇಕೆ ಉಂಟುಮಾಡಿರು, ಒಬ್ಬರು ದುಃಖದಿಂದ ಬಳಲಿಬಳಲಿ ಸಾಯಬೇಕು, ಹಾಗೂ ಅದೇ ದುಃಖಕ್ಕಾಗಿ ಇನ್ನೊಬ್ಬರು ನಗಬೇಕು. ಒಬ್ಬರಿಗೆ ಕೇವಲ ಮಂದಿಯ ತೃಸ್ಥೆಯನ್ನು ಪೂರೈಸುವದಕ್ಕಾಗಿಯೇ ರಕ್ತವನ್ನು ಕೊಟ್ಟಿರುವೆ. ಮತ್ತೊಬ್ಬನು. • ••••••••••ದೇವಾ, ನಿನ್ನ ಲೀಲೆಯು ಅಗಾಧವಾದದ್ದು. ಈರ್ಷೆಯಿಂದ ಹುಬ್ಬು ಗಂಟಿಕ್ಕಿದ ಶಕ್ತಿಯಮುಖವನ್ನು ನೋ ಡಿ ಕುಮಾರನು ಮೆಟ್ಟಿ ಬಿದ್ದನು. ಹೃದಯಸ್ಥವಾದ ಯಾವಶಕ್ತಿಯ ಮೂರ್ತಿಯನ್ನು ಅವನು ಎಂದೂ ಮರೆಯುವಂತಿದ್ದಿಲ್ಲವೋ, ಆ ಮೂತಿ೯ಯು ಇದಾಗಿದ್ದಿಲ್ಲ. ಆ ಅತ್ಯಂತ ಸೌಂದರ್ಯದ ಮ ರ್ತಿಯಲ್ಲಿ ಈ ಪ್ರಕಾರದ ಸಂಹಾರಿಣೀ-ಭೀಷಣಮೂರ್ತಿಯನ್ನು ಅಡ ಗಿಸುವದಾಗದ್ದರಿಂದ ರಾಜಕುಮಾರನು ಅದನ್ನು ಸ್ವಷ್ಟವೆಂದು ತಿಳಿ ಯಲಿಕ್ಕ ಸಹಶಕ್ತನಾಗಲಿಲ್ಲ. ಕುಮಾರನು ಸ್ತಬ್ಧವಾದದ್ದನ್ನು ಕಂಡು ಹಾಲಾಹಲ ವಿಷವೂ ರ್ಣ ಸ್ವರದಿಂದ ಶಕ್ತಿಯು ನಿನಗೇ ತಕ್ಕಷ್ಟು ಇದು, ಸತ್ಯವಾಗಿ ನಾನು ನಿನ್ನನ್ನು ನಂಬಿಕೊಂಡಿದ್ದೆನು; ಆದರೆ ನೀನು ಮಾತ್ರ ಪೀಡಿಸಹತ್ತಿ ರುವೆ. ನಾನು ನಿನ್ನ ಧ್ಯಾನದಲ್ಲಿಯೇ ಪ್ರಾಣಬಿಡುವೆನು; ನೀನು ಹೂಗಳೊಳಗಿನ ಮಧುವನ್ನು ಹೀರುವಂತೆ ಹೀರಿಕೊಳ್ಳುವೆ. ನಾನು ನಿನ್ನ ಕಾಲೊಳಗೆ ಬಿದ್ದು ಕೊಳ್ಳುವೆನು; ನೀನು ತುಳಿಯುತ್ತ ಹೊರಟು