ಪುಟ:ಶಕ್ತಿಮಾಯಿ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ko ಸ, ಚಂದ್ರಿಕೆ ತನ್ನೂ ಮರೆತನು, ನಿರೂಪಮೆಯನ್ನು ಕೂಡ ಮರೆತನು; ಆ ದೇವೀ ಸದತಳಾದ ನಿರೂಪಮೆಯಲ್ಲಿಯ, ಅವಳ ಅಮ್ಮತತುಲ್ಯ ಸೌಂದ ರ್ಯದಲ್ಲಿ ಅವನು ಕಾಣದಂತಾದನು, ಈ ಪ್ರಕಾರದ ಕಷ್ಟದಿಂದಲೂ, ಈ ಪ್ರಕಾರದ ಕಠೋರ ತಿರಸ್ಕಾರ ಶಬ್ದಗಳಿಂದಲೂ ನಿಸ್ತಬ್ಧನಾಗಿ ನಿಂತಿದ್ದ ರಾಜಕುಮಾರ ನನ್ನು ನೋಡಿ ಶಕ್ತಿಯ ಉದೃತಗರ್ವ, ಸಿಟ್ಟಿನಮುಖಚರ್ಯ ಇವು ಗಳು ಹೇಳಹೆಸರಿಲ್ಲದಾಗಿ, ಆಕೆಯ ಕಣ್ಣುಗಳಿಂದ ಅಶ್ರುಗಳುದುರ ಹತ್ತಿದವು. “ನಾನು ದೊಡ್ಡವನು-ನಾನೇರೂಪವಂತನು' ಹೀಗೆ ಭಾ ವಿಸುವ ಉದ್ಧಟ ಹಾಗು ಡಾಂಭಿಕ ಜನರ ಗರ್ರವು ಪ್ರತಿಕೂಲ ಸಮಯದಲ್ಲಿ ನನ್ನ ಪ್ರಕೃತಿಯವರಂತೆ ಸಹಜವಾಗಿ ಇಳಿದು ಹೋಗುವದು, ಸಂಸಾರದಲ್ಲಿ ಇದೊಂದು ಆಶ್ಚರ್ಯಕರ ಮಾತಾಗಿದೆ. ಶಕ್ತಿಯು ಕ್ಷುಬ್ಬಳೂ ಮರ್ಮಾಪತಳೂ ಆಗಿ ದುಃಖದಿಂದ ನಡಗುವ ದನಿಯಿಂದ-ಕುಮಾರ, ನನ್ನನ್ನು ತ್ಯಜಿಸಬೇದ ನೀನು ಗಂ ಡಸು, ನೀನು ಇಚ್ಚಿಸಿದರೆ ನೂರಾರು ವಿವಾಹಗಳನ್ನಾದರೂ ಮಾಡಿ ಕೊಳ್ಳಲು ಶಕ್ತನು. ಹೀಗಿದ್ದು ಈ ಅಭಾಗಿನಿಯನ್ನು ಯಾಕೆ ಪರಿ ತ್ಯಜಿಸುತ್ತೀ? ಧರ್ಮದಿಂದ ನೀನೇ ನನ್ನ ಸ್ವಾಮಿಯು, ನನ್ನನ್ನು ಕ ಡಿಮೆ ಜಾತಿಯವಳೆಂದು ಭಾವಿಸಬೇಡ; ಯಾವಾಗ ನೀನು ನನ್ನನ್ನು ತ್ಯಜಿಸುವಿಯೋ, ಆವಾಗ ನನ್ನ ವಿವಾಹವು ಹಿಂದೂಧರ್ಮದಂತೆ ಬೇರೆಯಾರೊಡನೆಯಾದರೂ ಆಗಲೇಬೇಕಾಗುವದು. ಹೀಗೆ ಆಗುವ ವಿವಾಹವು ಧರ್ಮವಿವಾಹವಲ್ಲ; ಆ ಅಧರ್ಮಕ್ಕೂ ಪಾಪಕ್ಕ ನೀ ನೊಬ್ಬನೇ ಗುರಿಯಾಗುವೆಯೆಂಬದನ್ನು ಚೆನ್ನಾಗಿ ಲಕ್ಷದಲ್ಲಿಡು, ಹೀಗೆ ನುಡಿದು ಶಕ್ತಿಯು ತಡೆದಳು. ಆಕೆಯು ದುಃಖದಿಂದು ದುರಿಸುವ ಅಶ್ರುಗಳು, ಬಾಡಿದ್ದರೂ ತೇಜೋಮಯವಾಗಿರುವ ಆಕೆಯ ಮುಖಮಂಡಲ ಇವುಗಳು ಕುಮಾರನ ದೃಷ್ಟಿಗೆ ಬಿದ್ದವು