ಪುಟ:ಶಕ್ತಿಮಾಯಿ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ, an ಹಾಗು ಅವನ ಕಿಎಗೆ ಆಕೆಯ ಆಕರುಣಾಸ್ವರವು ಕೇಳಿಸಿತು. ಕೂಡಲೆ ಶಕ್ತಿಯ ಮೊದಲಿನ ಆ ವಿರೂಪವನ್ನು ಅವನು ಮರೆತುಬಿಟ್ಟನು. ಇದರಂತೆ ಕ್ರಮವಾಗಿ ನಿರೂಪಮೆಯನ್ನೂ ಮರೆತನು. ಈಗ ಅವನಿಗೆ ಹಿಂದಿನ ಯಾವ ಸಂಗತಿಯ ನೆನವು ತಿಲಮಾತ್ರವೂ ಉಳಿಯಲಿಲ್ಲ. ತೇಜೋಮಯವಾದ ಅಡವಿಯ ಪ್ರದೇಶದಲ್ಲಿ ಅವನು ಹಾಗೂ ಅವ ನ ಪ್ರಿಯತಮೆಯು ಹೀಗೆ ಇಬ್ಬರೇ ಇದ್ದದರಿಂದ ಅವನಿಗೆ ಒಂದು ತರದ ಅನುತಾಪದ ವೇದನೆಯಾಗಹತ್ತಿತು. ಅದರಿಂದ ಮಾತ್ರ ಅವನಿಗೆ ಚೈತನ್ಯವುಂಟಾಯಿತು. ವ್ಯಧಿತಾಂತಃಕರಣದಿಂದ ಕುಮ ರನು ಶಕ್ತಿಯ ತೀರ ಹತ್ತರಕ್ಕೆ ಬಂದು ಕುಳಿತುಕೊಂಡನು. ಹೃದ ಯದ ಕರುಣಾಪ್ರೇಮಕಣ್ಣುಗಳನ್ನು ಒಟ್ಟುಗೂಡಿಸಿ ಶಕ್ತಿಯ ಕಡೆಗೆ ನೋಡಿ, ಆಕೆಯ ಕೈಯನ್ನು ಹಿಡಿದು ಸಾಧಾರಣವಾಗಿ ನಡಗುವದನಿ ಯಿಂದ ಇನ್ನು ಅವನು ಏನೋ ಮಾತಾಡತಕ್ಕವನು, ಅಷ್ಟರಲ್ಲಿ ಆಇಬ್ಬ' ರ ಪ್ರೇಮಪೂಣ೯ಹೃದಯಗಳನ್ನು ನಡುಗಿಸಿಬಿಡುವ ಹಾಗು ಆ ಸ್ತ್ರ ಬನದೀತಟಾಕದಲ್ಲಿ ಪ್ರತಿಧ್ವನಿಯನ್ನುಂಟುಮಾಡುವ “ಕುಲಾಂಗಾರ, ಪರಸ್ತ್ರೀಯ ಸ್ಪರ್ಶಮಾಡುತ್ತೀ? ಎಂಬ ಶಬ್ದವು ಒಮ್ಮೆಲೆ ಕೇಳಿಸಿದ್ದ ರಿಂದ ಅವನ ಬಾಯೊಳಗಿನ ಮಾತು ಬಾಯೊಳಗೇ ಉಳಿಯಿತು. ಮತ್ತೆ ಮಾತೇ ಆಡಲಿಲ್ಲ. ಕುಮಾರನು ಹೊರಳಿನೋಡುತ್ತಾನೆ, ಅವನ ತಾಯಿಯ ಕ್ರುದ್ದ ಮರ್ತಿಯು ಅವನಿಗೆ ಕಂಡಿತು. ಅದರಿಂದ ಕುಮಾರನು ಬೆದರಿ ಲಜ್ಞಾಯಮಾನನಾದನು. ಆದರೆ ಶಕ್ತಿಯು ಮಾತ್ರ ಸ್ವಲ್ಪವೂ ಹೆದರದೆ, ಎದ್ದು ನಿಂತು ಅಚಲದನಿಯಿಂದ “ತಾಯಿ, ನಾನು ಪರಸ್ತ್ರೀಯಲ್ಲ; ನಾನು ಯುವ ರಾಜನ ಧರ್ಮದ ಯು, ದೇವರಸಮಕ್ಷ ನಮ್ಮಿಬ್ಬರ ವಿವಾಹವಾಗಿರುತ್ತದೆ ಎಂದು ನುಡಿದಳು, ಆಗ ರಾಜಮಾತೆಯು ಸಿಟ್ಟಿನಿಂದ ತಪ್ತಳಾಗಿ-ಗಣೇ ಶ, ಈಕೆಯು ವನೋಹಾರೀಲಾಲನ ಮಗಳಲ್ಲವೆ? ಈಕೆಯು ನಿನಗೆ